HomePage_Banner
HomePage_Banner
HomePage_Banner
HomePage_Banner

ಆಹಾರ ಪಾರ್ಸೆಲ್‌ಗೆ ಆನ್‌ಲೈನ್ ಹಣ ಪಾವತಿ ಸೋಗಿನಲ್ಲಿ ಎಟಿಎಂನಿಂದ ಹಣ ಲಪಾಟಾಯಿಸುವ ಯತ್ನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪುತ್ತೂರಿನ ಪ್ರತಿಷ್ಠಿತ ಹೊಟೇಲು ಉದ್ಯಮಿಯ ಸಮಯಪ್ರಜ್ಞೆ – ಹಣ ವಂಚನೆಯಿಂದ ಪಾರು

ಪುತ್ತೂರು: ಆಹಾರ ಪಾರ್ಸೇಲ್‌ಗೆ ಸಂಬಂಧಿಸಿ ಆನ್‌ಲೈನ್ ಮೂಲಕ ಹಣ ಕಳುಹಿಸುವ ಸೋಗಿನಲ್ಲಿ ಹೊಟೇಲ್‌ಗೆ ಬಂದ ಕರೆ ಮೇರೆಗೆ ಜಾಗೃತಗೊಂಡ ಪ್ರತಿಷ್ಠಿತ ಹೊಟೇಲ್ ಉದ್ಯಮಿಯೊಬ್ಬರು ಎಟಿಎಂ ನಿಂದ ಹಣ ವಂಚನೆಯಾಗುವುದನ್ನು ತಪ್ಪಿಸುವ ಮೂಲಕ ಸಮಯಪ್ರಜ್ಞೆ ಮೆರೆದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಜ.18ರಂದು ರಾತ್ರಿ ಇಲ್ಲಿನ ಜಿ.ಎಲ್. ಕಾಂಪ್ಲೆಕ್ಸ್‌ನಲ್ಲಿರುವ ಹೊಟೇಲ್ ಗಣೇಶ್ ಪ್ರಸಾದ್‌ನ ಸ್ಥಿರ ದೂರವಾಣಿಗೆ ನವೀನ್ ಎಂದು ಪರಿಚಯಿಸಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬನು ತಾನು ಸೇನಾ ಸೇವೆಯಲ್ಲಿದ್ದೇನೆ. ದರ್ಬೆಯಲ್ಲಿರುವ ನನ್ನ ಮನೆಗೆ ಉತ್ತರ ಭಾರತೀಯ ಆಹಾರವನ್ನು ಕಳುಹಿಸಬೇಕು ಎಂದು ಹೊಟೇಲ್ ಮಾಲಕರಾದ ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆಯವರಲ್ಲಿ ವಿನಂತಿಸಿದರು. ಇತ್ತ ಕಡೆಯಿಂದ ಕರೆ ಸ್ವೀಕರಿಸಿದ ಗೋಪಾಲಕೃಷ್ಣ ಹೇರಳೆಯವರು ಕಂಬಳ ನಡೆಯುತ್ತಿದ್ದ ಕಾರಣ ಪಾರ್ಸೆಲ್ ಕಳುಹಿಸಲು ಸಾಧ್ಯವಿಲ್ಲ. ಹೊಟೇಲ್‌ಗೆ ಬಂದು ಪಾರ್ಸೆಲ್ ಕೊಂಡೊಯ್ಯುವಂತೆ ಫೋನ್‌ನಲ್ಲಿ ತಿಳಿಸಿದ್ದರಲ್ಲದೆ ಅರ್ಧ ಗಂಟೆಯ ಬಳಿಕ ಬಂದು ರೂ. 3,800ನ್ನು ಪಾವತಿ ಮಾಡಿ ಪಾರ್ಸೆಲ್ ಕೊಂಡು ಹೋಗುವಂತೆ ತಿಳಿಸಿದರು. ಅರ್ಧ ಗಂಟೆ ಬಿಟ್ಟು ಹೊಟೇಲ್ ಸ್ಥಿರ ದೂರವಾಣಿಗೆ ಕರೆ ಮಾಡಿದ ನವೀನ್ ತನ್ನ ಬಳಿ ಇರುವ ಕಾರ್ಡ್ ಮಿಲಿಟರಿ ಕ್ಯಾಂಟಿನ್‌ಗೆ ಸಂಬಂಧಪಟ್ಟದ್ದು, ನಿಮ್ಮ ಎಟಿಎಮ್ ನಂಬರ್ ಹೇಳಿದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದಾಗಿ ತಿಳಿಸಿದ್ದರು. ಇತ್ತ ಕಡೆ ಗೋಪಾಲಕೃಷ್ಣ ಹೇರಳೆ ತಕ್ಷಣಕ್ಕೆ ಎಟಿಎಂ ಕಾರ್ಡ್ ನಂಬರ್ ಕೊಟ್ಟಾಗಿತ್ತಾದರೂ ಬೆನ್ನಲ್ಲೆ ವ್ಯಕ್ತಿಯ ಮೋಸದ ಜಾಲ ಅರಿತಾಗ ಮತ್ತೊಮ್ಮೆ ನವೀನ್ ಅವರು ಪೋನ್ ಮಾಡಿ ಕಾರ್ಡ್‌ನ ಪಿನ್ ನಂಬರ್ ಕೇಳಿದರು.

ಇದರಿಂದ ಮತ್ತಷ್ಟು ಆತಂಕಗೊಂಡ ಹೇರಳೆಯವರ ಮೊಬೈಲ್‌ಗೆ ಕರ್ಣಾಟಕ ಬ್ಯಾಂಕ್‌ನ ಗ್ರಾಹಕ ಸೇವಾ ಕೇಂದ್ರದಿಂದ ಎಸ್‌ಎಂಎಸ್ ಮಾಹಿತಿ ರವಾನೆಯಾಗಿ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸುವಂತೆ ಕೋರಲಾಗಿತ್ತು. ಇದೇ ಸಮಯಕ್ಕೆ ಹೊಟೇಲ್‌ಗೆ ಆಗಮಿಸಿದ ಪುತ್ತೂರು ನಗರಸಭಾ ಸದಸ್ಯರಾದ ಬಿಜೆಪಿ ನಗರ ಮಂಡಲದ ನಿಯೋಜಿತ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್ ಬಳಿ ಗೋಪಾಲಕೃಷ್ಣ ಹೇರಳೆಯವರು ವಿಷಯ ತಿಳಿಸಿದ್ದರು.

ವರು ಕರ್ಣಾಟಕ ಬ್ಯಾಂಕ್‌ನ ಪುತ್ತೂರು ಶಾಖೆಯ ಮೆನೇಜರ್‌ನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಮೆನೇಜರ್ ಅವರನ್ನು ಸಂಪರ್ಕಿಸಿದಾಗ ಬ್ಯಾಂಕ್ ಹೊಟೇಲ್ ಮಾಲಕರ ಎಟಿಎಂ ಕಾರ್ಡ್‌ನ್ನು ಆ ವೇಳೆಗಾಗಲೇ ಸ್ಥಗಿತಗೊಳಿಸಿರುವ ವಿಚಾರವನ್ನು ಸೇವಾ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಹೀಗೆ ಒಟ್ಟಿನಲ್ಲಿ ಪಿನ್ ನಂಬರ್ ನೀಡದೆ ಸಮಯ ಪ್ರಜ್ಞೆ ತೋರಿಸಿದ ಕಾರಣ ಹೊಟೇಲ್ ಮಾಲಕ ಗೋಪಾಲಕೃಷ್ಣ ಹೇರಳೆಯವರು ಹಣ ವಂಚನೆಯಿಂದ ಪಾರಾಗಿದ್ದಾರೆ. ಒಟ್ಟು ಘಟನೆಯ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ವ್ಯಕ್ತಿಯ ಮೊಬೈಲ್ ನಂಬರ್ ಸಹಿತ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.