ಕಡಬ: ಕುಟ್ರುಪ್ಪಾಡಿ ಗ್ರಾ.ಪಂ.ನ ಬಲ್ಯ ಗ್ರಾಮದ ಹೊಸಮಠ ದೇರಾಜೆ ಕ್ರಾಸ್ ನ ರಾಜ್ಯ ಹೆದ್ದಾರಿಯಲ್ಲಿರುವ ಅನಧಿಕೃತ ಕಟ್ಟಡಕ್ಕೆ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ನಿಂದ ಜ.20 ರಂದು ಬೀಗ ಜಡಿಯಲಾಗಿದೆ.
ಉಪ್ಪಿನಂಗಡಿ ಕಡಬ ರಾಜ್ಯ ಹೆದ್ದಾರಿಯ ಪಿಡಬ್ಲ್ಯೂಡಿ ಮಾರ್ಜಿನಲ್ಲಿ ಅನುಮತಿ ರಹಿತವಾಗಿ ರಸ್ತೆ ಬದಿಯಲ್ಲಿ ಕಟ್ಟಿದ ಕಟ್ಟಡವನ್ನು ಸಾರ್ವಜನಿಕರ ದೂರಿನ ಅನ್ವಯ ಗ್ರಾ.ಪಂ ನ ನಿರ್ಣಯದಂತೆ ಕಡಬ ಪೊಲೀಸರ ಸಮ್ಮುಖದಲ್ಲಿ ಬೀಗ ಜಡಿಯಲಾಗಿದೆ ಎಂದು ಕುಟ್ರುಪ್ಪಾಡಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ತಿಳಿಸಿದ್ದಾರೆ.
ಗೋಪಾಲಕೃಷ್ಣ ಶೆಟ್ಟಿ ಎಂಬವರು ವಾಸ್ತವ್ಯದ ಮನೆ ಕಟ್ಟಿದ್ದಲ್ಲದೆ ರೋಡ್ ಮಾರ್ಜಿನ್ನಲ್ಲಿ ವಿಸ್ತಾರವಾದ ಅನದಿಕೃತ ಕಟ್ಟಡ ಕಟ್ಟಿದ್ದು ಸುಮಾರು 16 ಜನರಿಗೆ ಬಾಡಿಗೆಗೆ ನೀಡಿದ್ದರು. ಈ ಕಟ್ಟಡವನ್ನು ತೆರವುಗೊಳಿಸುವಂತೆ ಹಲವು ಬಾರಿ ಕಟ್ಟಡ ಮಾಲೀಕರಿಗೆ ನೋಟಿಸು ನೀಡಲಾಗಿತ್ತು. ತೆರವುಗೊಳಿಸುವ ಯವುದೇ ಲಕ್ಷಣ ಕಂಡು ಬಾರದ ಹಿನ್ನೆಲೆಯಲ್ಲಿ ಗ್ರಾ.ಪಂ ಕಾನೂನು ಕ್ರಮಕ್ಕೆ ಮುಂದಾಗಿದೆ.
ಬಲ್ಯ ಗ್ರಾಮದ ಸ.ನಂಬ್ರ 23/3ರಲ್ಲಿ 0.02 ಎಕ್ರೆ ಹಾಗೂ 31/4ರಲ್ಲಿ 0.02ಎಕ್ರೆ ಭೂಮಿಯನ್ನು ಮುಂಡಪ್ಪ ಪೂಜಾರಿಯವರ ಮಗ ಪೂವಪ್ಪ ಪೂಜಾರಿಯವರು ತನ್ನ ವಾಸ್ತವ್ಯಕ್ಕೆಂದು ಸಂಪೂರ್ಣ ರೋಡ್ ಮಾರ್ಜಿನ್ ಬಿಟ್ಟು ಭೂ ಪರಿವರ್ತನೆಗೊಳಿಸಿದ್ದು ಇದೇ ಭೂಮಿಯನ್ನು ಪಡೆದುಕೊಂಡ ಗೋಪಾಲಕೃಷ್ಣ ಶೆಟ್ಟಿ ಎಂಬವರು ವಾಸ್ತವ್ಯದ ಮನೆ ಕಟ್ಟಿ ಬಳಿಕ ರೋಡ್ ಮಾರ್ಜಿನಲ್ಲಿ ವಿಸ್ತಾರವಾದ ಅನಧಿಕೃತ ಕಟ್ಟಡ ಕಟ್ಟಿದ್ದರು – ವಿಲ್ಸೆಡ್ ಲಾರೆನ್ಸ್ ರೋಡ್ರಿಗಸ್ ಅಭಿವೃದ್ಧಿ ಅಧಿಕಾರಿ ಕುಟ್ರುಪ್ಪಾಡಿ ಪಂಚಾಯತ್