HomePage_Banner
HomePage_Banner
HomePage_Banner
HomePage_Banner

ಜ.24, 25, 26: ಬೊಳುವಾರು ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದ ನಾಲ್ಕನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ, ಚಂಡಿಕಾಯಾಗ ಹಾಗೂ ದೈವಗಳಿಗೆ ನೇಮೋತ್ಸವವು ಜ.24, 25, 26ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.


ಜ.24ರಂದು ಬೆ.8ರಿಂದ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಮಹಾಗಣಪತಿ ಹೋಮ, ಚಂಡಿಕಾಯಾಗ ಪ್ರಾರಂಭ, ಪಂಚವಿಂಶತಿ ಕಲಶಪೂಜೆ, ಕಲಶಾಭಿಷೇಕ, ನಾಗದೇವರಿಗೆ ಪಂಚಾಮೃತಾಭಿಷೇಕ, ತಂಬಿಲ ಸೇವೆ, ಮಲರಾಯ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ. ಮಧ್ಯಾಹ್ನ 11ಕ್ಕೆ ಚಂಡಿಕಾ ಯಾಗದ ಪೂರ್ಣಾಹುತಿ, ಸುವಾಸಿನಿ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 5.30ರಿಂದ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಳ್ತಿ) ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಲಲಿತಾ ಸಹಸ್ರ ನಾಮಾರ್ಚನೆ, ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ (ಸ್ಥಳೀಯ ಪ್ರತಿಭೆಗಳಿಂದ) ಹಾಗೂ ಶ್ರೀ ದುರ್ಗಾ ಉಳ್ಳಾಳ್ತಿ ಯಕ್ಷ ಶಾಲಾ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ತಾಮಾಸುರ ವಧೆ ಎಂಬ ಪೌರಾಣಿಕ ಪ್ರಸಂಗ ಹಾಗೂ ಹಿರಿಯ ಸದಸ್ಯರಿಂದ ನೂತನ ಪ್ರಸಂಗ ಪ್ರದರ್ಶನ ನಡೆಯಲಿದೆ. ರಾತ್ರಿ 7ಕ್ಕೆ ಶ್ರೀ ದೇವರಿಗೆ ಸರ್ವಾಲಂಕಾರ ಸಹಿತ ಕಲ್ಪೋಕ್ತ ದುರ್ಗಾಪೂಜೆ, ರಂಗಪೂಜೆ, ರಾತ್ರಿ 8ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿರುವುದು.
ಜ.25ರಂದು ಸಂಜೆ 6ಕ್ಕೆ ಮಲರಾಯ ಮತ್ತು ಸಪರಿವಾರ ದೈವಗಳ ಭಂಡಾರ ತೆಗೆಯುವುದು. ರಾತ್ರಿ 7.30ಕ್ಕೆ ಶ್ರೀ ದೇವರಿಗೆ ದುರ್ಗಾಪೂಜೆ, ರಂಗ ಪೂಜೆ, ಪ್ರಸಾದ ವಿತರಣೆ, ರಾತ್ರಿ 8ಕ್ಕೆ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ರಕ್ತೇಶ್ವರಿ, ಕಲ್ಕುಡ ಕಲ್ಲುರ್ಟಿ, ಪಂಜುರ್ಲಿ ದೈವಗಳ ನೇಮ ನಡೆಯಲಿರುವುದು. ಜ.26ರಂದು ಬೆಳಿಗ್ಗೆ 10ಕ್ಕೆ ಮಲರಾಯ ದೈವದ ನೇಮೋತ್ಸವ ಸಿರಿಮುಡಿ ಗಂಧ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 3.30ಕ್ಕೆ ಗುಳಿಗ ದೈವದ ನೇಮೋತ್ಸವವು ನಡೆಯಲಿರುವುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.