ಪುತ್ತೂರು: ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆಯ ಕೇಪುಳು ಸರ್ಕಲ್ ಬಳಿ ಅತ್ಯಾಧುನಿಕತೆಯನ್ನು ಒಳಗೊಂಡ ಹವಾನಿಯಂತ್ರಿತ ಕೊಠಡಿ ಸೇರಿದಂತೆ ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ನೂತನವಾದ ಶ್ರೀ ಗುರು ಆರ್ಕೆಡ್ ಮತ್ತು ಸಂಜೀವಿನಿ ಹವಾನಿಯಂತ್ರಿತ ಬ್ಯಾಂಕ್ವೆಟ್ ಹಾಲ್ನ ಉದ್ಘಾಟನೆ ಜ.20ರಂದು ಸಂಜೆ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವೇ ಮೂ ಜಯರಾಮ ಭಟ್ ಮತ್ತು ವೇ ಮೂ ಕೃಷ್ಣಪ್ರಸಾದ್ ಅವರ ಪೌರೋಹಿತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ನೂತನ ಆರ್ಕೇಡ್ನ್ನು ಶ್ರೀಮತಿ ಲಲಿತಾ ಅವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು. ಉದ್ಘಾಟನಾ ಬಳಿಕ ಕೊಳಲು ಸಂಗೀತ ರಸ ಸಂಜೆ ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಬಿಇಒ ಗೋಪಾಲಕೃಷ್ಣ ಭಟ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹರಿಣಾಕ್ಷ, ಸ್ನೇಹ ಟೆಕ್ಸ್ಟೈಲ್ಸ್ನ ಮಾಲಕ ಸತೀಶ್, ಎಸ್ಸಿಡಿಸಿಸಿ ಬ್ಯಾಂಕ್ ನಿವೃತ್ತ ಮೆನೇಜರ್ ಉಮೇಶ್ ಗೌಡ, ಉಮೇಶ್ ನಾಯಕ್, ಬಾಳಪ್ಪ ಪೂಜಾರಿ ಕೇಪುಳು, ಸ್ವಾಮಿ ಮಾಧವ, ಗೋಪಾಲ್ ರಾವ್, ಕ್ಷಾತ್ರಿಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕೆಮ್ಮಿಂಜೆ, ಕ್ಷಾತ್ರೀಯ ಸಮಾಜದ ಅಧ್ಯಕ್ಷ ನಿತಿನ್ ಕುಮಾರ್ ಮಂಗಳ, ಮಾಜಿ ಅಧ್ಯಕ್ಷ ನವೀನ್ ಪುನರ್ವಸು, ಶ್ರೀನಿವಾಸ್ ಕಲ್ಲಾರೆ, ಉಡುಪಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಮೋದ್, ಗಣೇಶ್ ಬಾಳಿಗ ಸೇರಿದಂತೆ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಅರುಣ್ ಕುಮಾರ್ ಅವರ ಪತ್ನಿ ಆಶಾಲತಾ ಅತಿಥಿಗಳನ್ನು ಬರಮಾಡಿಕೊಂಡರು. ಪುತ್ರರಾದ ಕಾರ್ತಿಕ್ ಮತ್ತು ವೈಶಾಖ್ ಸ್ವಾಗತಿಸಿದರು. ಸ್ವಾಮಿ ಹಾಲ್ನ ರೋಶನ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ನೂತನ ಸಂಸ್ಥೆಯ ೩ನೇ ಅಂತಸ್ತಿನಲ್ಲಿ ಹವಾನಿಯಂತ್ರಿತ ಸಭಾಂಗಣವಿದ್ದು, ಅದರ ಕೆಳಗಿನ ಅಂತಸ್ತಿನಲ್ಲಿ ಪ್ರತ್ಯೇಕ ಡೈನಿಂಗ್ ಹಾಲ್ ಇದೆ. ಜೊತೆಗೆ 2 ಅತಿಥಿ ಗೃಹಗಳು, ಪ್ರತ್ಯೇಕ ಶೌಚಾಲಯ, ಕೆಳಗಿನ ಅಂತಸ್ತಿನಲ್ಲಿ ವಾಣಿಜ್ಯ ವ್ಯವಹಾರ ಅಥವಾ ವ್ಯಾಪಾರ ವಹಿವಾಟುಗಳಿಗೆ ಅಂಗಡಿ ಕೋಣೆಗಳು ಲಭ್ಯವಿದ್ದು ಕಟ್ಟಡದಲ್ಲಿ ಲಿಫ್ಟ್ ಸೌಲಭ್ಯವಿದೆ. ಆರ್ಕೇಡ್ನ ಎದುರುಗಡೆ ವಿಶಾಲವಾದ ಪಾರ್ಕಿಂಗ್ ಸೌಲಭ್ಯವೂ ಇದೆ ಎಂದು ಸಂಸ್ಥೆಯ ಮಾಲಕ ಅರುಣ್ ಕುಮಾರ್ ತಿಳಿಸಿದರು.