ಪುತ್ತೂರು: ಬಂಟಸಿರಿ ವಿವಿದೋದ್ದೇಶ ಸಹಕಾರ ಸಂಘದಿಂದ ಜ. 21 ರಂದು ಸಂಘದ ಪ್ರಧಾನ ಕಚೇರಿಯಲ್ಲಿ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ನಿರ್ದೇಶಕ ಬೂಡಿಯಾರ್ ರಾಧಾಕೃಷ್ಣ ರೈಯವರನ್ನು ಸಂಘದ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ ಮತ್ತು ಉಪಾಧ್ಯಕ್ಷ ಅರಿಯಡ್ಕ ಲಕ್ಷ್ಮಿನಾರಾಯಣ ಶೆಟ್ಟಿರವರು ಗೌರವಾರ್ಪಣೆ ಸಲ್ಲಿಸಿದರು.
ಸಂಘದ ನಿರ್ದೇಶಕರುಗಳಾದ ಜಯರಾಮ ರೈ ನುಳಿಯಾಲು, ಸಂಜೀವ ಆಳ್ವ ಹಾರಾಡಿ, ಮಿತ್ರಂಪಾಡಿ ಪುರಂದರ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಜೈರಾಜ್ ಭಂಡಾರಿ ನೊಣಾಲು, ಬಾಲಕೃಷ್ಣ ಶೆಟ್ಟಿ ಕೊಂಡೆವೂರು, ವಿದ್ಯಾಪ್ರಸಾದ್ ಆಳ್ವ ಉಪ್ಪಳಿಗೆ, ಅನಿತಾ ಹೇಮನಾಥ ಶೆಟ್ಟಿ ಕಾವು ರವರುಗಳು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ಸ್ವಾಗತಿಸಿ, ಸಂಘದ ಅಲಂಕಾರು ಶಾಖೆಯ ಮ್ಯಾನೇಜರ್ ಸುಮತಿ ವಂದಿಸಿದರು.