ಪುತ್ತೂರು: ಮೆಸ್ಕಾಂ ಜನಸಂಪರ್ಕ ಸಭೆಯು ಜ.21ರಂದು ಪುತ್ತೂರು ನಗರಸಭೆ ಸಮುದಾಯ ಭವನದಲ್ಲಿ ಮೆಸ್ಕಾಂ ಮಂಗಳೂರು ವೃತ್ತ ಅಧೀಕ್ಷಕ ಮಂಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾ.ಪಂ ಉಪಾಧ್ಯಕ್ಷೆ ಲಲಿತಾ ಈಶ್ವರ್, ಮೆಸ್ಕಾಂ ವಿಭಾಗ ಕಾರ್ಯಪಾಲಕ ಇಂಜಿನಿಯರ್ ನರಸಿಂಹ, ಕೆಪಿಟಿಸಿಎಲ್ ಇಇ ಗಂಗಾಧರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ತಾ.ಪಂ ಸದಸ್ಯರಾದ ಮೀನಾಕ್ಷಿ ಮಂಜುನಾಥ್, ತೇಜಸ್ವಿನಿ ಕಟ್ಟಪುಣಿ, ಸುಜಾತ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಗ್ರಾಹಕರಾದ ನಾರಾಯಣ ಪ್ರಕಾಶ್, ನ್ಯಾಯವಾದಿ ಕೃಪಾ ಶಂಕರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.