ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಇಲ್ಲಿನ ಸಮಾಜಕಾರ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಭಾರತ ಎಂಬ ಶೀರ್ಷಿಕೆಯೊಂದಿಗೆ ಬೀದಿನಾಟಕವನ್ನು ಬೆಟ್ಟಂಪಾಡಿಯ ರೆಂಜ ವೃತ್ತದಲ್ಲಿ ಪ್ರದರ್ಶಿಸಲಾಯಿತು. ಪ್ರಸ್ತುತ ದಿನದಲ್ಲಿ ಪ್ಲಾಸ್ಟಿಕ್ ಮುಕ್ತ ಚೀಲಗಳನ್ನು ಮತ್ತು ಇತರೆ ವಸ್ತುಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಬಳಸುತ್ತಿರುವುದರಿಂದ ವಾತಾವರಣದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ವಿವಿಧ ಅಣುಕುಗಳ ಮೂಲಕ ಪ್ರದರ್ಶಿಸಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಡೆಯುವಂತೆ ಅರಿವು ಮೂಡಿಸಲಾಯಿತು. ಕಾಲೇಜಿನ ಉಪನ್ಯಾಸಕರಾದ ಡಾ. ದೇವರಾಜ ಆರ್, ಮಮತ, ಕಾವ್ಯ, ರಾಧಾಕೃಷ್ಣ, ಶರ್ಮಿಳಾ ಮತ್ತು ಅರ್ಚನಾ ಉಪಸ್ಥಿತರಿದ್ದರು.