ವುಹಾನ್ ಕೊರಾನ ವೈರಸ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಈ ಹೊಸ ವೈರಸ್‌ನಿಂದ ಉಂಟಾದ ಕಾಯಿಲೆಗೆ ದಿನನಿತ್ಯ ವರದಿ ವೃತ್ತ ಪತ್ರಿಕೆ, ಟಿ.ವಿಯಲ್ಲಿ ನೋಡುತ್ತಿದ್ದೇವೆ.  ಇದು ೨೦೧೯-ಟಿ-CN ಕೊರನಾ ವೈರಸ್ ಚೈನಾದ ವುಹಾನ್ ನಗರದಲ್ಲಿ ಕಂಡು ಬಂದಿರುವ ಪ್ಲೂ ತರಹದ ರೋಗ. ಸುಮಾರು ೧ ಕೋಟಿ ಜನ ಸಂಖ್ಯೆ ಇರುವ ಈ ಚೈನಾದ ನಗರದಲ್ಲಿ ೨೦೧೯ ಡಿಸೆಂಬರ್ ೩೧ ರಂದು ಮೊದಲು ಕಂಡುಬಂತು ಹಾಗೂ ಈ ವರೆಗೆ ಸುಮಾರು ೨೭೦೦ ಜನರು ಈ ರೋಗಕ್ಕೆ ತುತ್ತಾಗಿದ್ದು ಸುಮಾರು ೮೦ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ತದನಂತರ ಈ ರೋಗ ತೈಲಾಂಡ್, ದಕ್ಷಿಣ ಕೊರಿಯಾ, ಜಪಾನ್, ಮೆಕಾವು, ಹಾಂಕಾಂಗ್, ಅಮೇರಿಕಾ, ಸಿಂಗಾಪುರ ವಿಯೆಟ್ನಾಂ, ಫ್ರಾನ್ಸ್, ನೇಪಾಳ, ಆಸ್ಟ್ರೇಲಿಯಾ, ಮಲೇಶಿಯಾದಲ್ಲೂ ಹಾಗೂ ಮುಂಬಯಿನಲ್ಲಿ ಕೂಡಾ ಒಂದು ಕೇಸ್‌ನ ವರದಿ ಬಂದಿದೆ.

೧೯ನೇ ಜನವರಿ ೨೦೨೦ರಲ್ಲಿ ಮೊದಲ ಸಾವು ವುಹಾನ್‌ನಲ್ಲಿ ಕಂಡು ಬಂದಿದೆ ಹಾಗೂ ಈ ವರೆಗೆ ೮೦ಕ್ಕೂ ಅಧಿಕ ಜನರು ಚೈನಾದಲ್ಲಿ ಸಾವನ್ನಪ್ಪಿದ್ದಾರೆ. ಮೊದಲು ಈ ನಗರದಲ್ಲಿ ನ್ಯುಮೋನಿಯಾವು ಯಾವುದೇ ಬ್ಯಾಕ್ಟೀರಿಯಾದಿಂದ ಬರದ ಕಾರಣ ಈ ವೈರಸ್‌ನ ಸಂಶೋಧನೆ ಆಯಿತು. ಸಮುದ್ರ ಮೀನಿನ ಮಾರ್ಕೆಟ್‌ನಿಂದ ಇದು ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಇಲ್ಲಿ ಮಾರ್ಕೆಟ್‌ನಲ್ಲಿ ಮೀನು, ಕೋಳಿ, ಬಾವಲಿ, ವಿಷಕಾರಿ ಹಾವು, ಮತ್ತು ಮೊಲದಂತಹ ಪ್ರಾಣಿಗಳನ್ನು ಖರೀದಿಸಲಾಗುತ್ತದೆ. ಈ ರೋಗ ಪ್ರಾಣಿ ಜನ್ಯ (Zonosis) ಎಂದು ಅಂದಾಜಿಸಲಾಗಿದೆ. ಹೆಚ್ಚಾಗಿ ಬಾವಲಿ ಹಾಗೂ ವಿಷಕಾರಿ ಹಾವಿನಿಂದ ಇದು ಮನುಷ್ಯರಿಗೆ ಹರಡುವ ರೋಗ ಎಂದು ಅಂದಾಜಿಸಲಾಗಿದೆ.

ಈ ರೋಗದ ಇಂಕ್ಯೂಬೇಶನ್ ೨ರಿಂದ ೧೬ ದಿನ ಇದ್ದು ಮೊದಲಿಗೆ ಜ್ವರ, ಕೆಮ್ಮು, ಮಾಂಸಖಂಡದ ನೋವು ಮತ್ತು ದಣಿವು, ಇನ್ನೂ ಉಸಿರಾಟದ ತೊಂದರೆ (ನ್ಯುಮೋನಿಯಾದಲ್ಲಿ), ಕಫದಲ್ಲಿ ರಕ್ತ, ತಲೆನೋವು ಹಾಗೂ ಅಪರೂಪದಲ್ಲಿ ಭೇದಿ. ಸುಮಾರು ೧/೨ದಷ್ಟು ಜನರಲ್ಲಿ ಉಸಿರಾಟದ ತೊಂದರೆ ಬಂದು ICU ನಲ್ಲಿ ಇರಿಸಬೇಕಾಗುತ್ತದೆ. ವಯೋವೃದ್ಧರಲ್ಲಿ ಮತ್ತು ಮಕ್ಕಳಲ್ಲಿ ಈ ಕಾಯಿಲೆ ತೀವ್ರ ಸ್ವರೂಪದ್ದಾಗಿದ್ದು ಸಾವಿಗೆ ಕಾರಣವಾಗಬಹುದು. ಸಿಹಿ ಮೂತ್ರ ಇರುವವರಲ್ಲಿ ಕೂಡಾ ನ್ಯುಮೋನಿಯಾ ಹೆಚ್ಚಾಗಿ ಕಾಣಿಸುತ್ತದೆ.

ಹೆಚ್ಚಾಗಿ ಸಾಮಾನ್ಯ ಶೀತ ಜ್ವರದಂತೆ ಮೊದಲು ಕಾಣಿಸಿಕೊಂಡು ನಂತರ ನ್ಯುಮೋನಿಯಾದಲ್ಲಿ ಸಾವನ್ನಪ್ಪಬಹುದು. ಮನುಷ್ಯರಿಗೆ ಪ್ರಾಣಿಗಳಿಂದ ಹರಡಿದರೂ ಇದು ಮನುಷ್ಯರಿಂದ ಮನುಷ್ಯರಿಗೆ, ಕೆಮ್ಮು ಅಥವಾ ಸೀನು ಮತ್ತು ರೋಗಿಯ ಸಂಪರ್ಕದಿಂದ ಇದು ಹರಡುತ್ತದೆ. ಈ ತನಕ ಈ ರೋಗಕ್ಕೆ ಔಷಧ ಲಭ್ಯವಿಲ್ಲ ಹಾಗೂ ವ್ಯಾಕ್ಸಿನ್ ಸಂಶೋಧನೆ ಹಂತದಲ್ಲಿ ಇದೆ. ಈ ರೋಗವನ್ನು PCR ಟೆಸ್ಟ್ ಗುರುತಿಸಬಹುದು. ರಕ್ತ ಪರೀಕ್ಷೆಯಲ್ಲಿ ಬಿಳಿರಕ್ತಕಣ ಕಡಿಮೆಯಾಗುವುದು. ನ್ಯುಮೋನಿಯದಲ್ಲಿ ರಕ್ತಪರೀಕ್ಷೆ ಮತ್ತು PCR ಮೂಲಕ ಗುರುತಿಸಬಹುದು.

ರೋಗ ಬಾರದ ಹಾಗೆ ತಡೆಗಟ್ಟುವ ವಿಧಾನ: ಕೈಯನ್ನು ಸಾಬೂನಿನಿಂದ ಸರಿಯಾಗಿ ತೊಳೆದುಕೊಳ್ಳುವುದು. ಕಣ್ಣು ಮೂಗು ಹಾಗೂ ಬಾಯಿಯನ್ನು ಕೈ ತೊಳೆದೇ ಮುಟ್ಟುವುದು. ರೋಗಿಯ ಸಂಪರ್ಕದಿಂದ ದೂರವಿರುವುದು. ರೋಗಿಯು ಸಾಕಷ್ಟು ನೀರು ಕುಡಿಯುವುದು, ವಿಶ್ರಾಂತಿ ಮನೆಯಲ್ಲೇ ತೆಗೆದುಕೊಳ್ಳುವುದು. ನಿಮಗೆ ಉಸಿರಾಟದ ತೊಂದರೆ ಇದ್ದಲ್ಲಿ ಹತ್ತಿರದ ಆಸ್ಪತ್ರೆ ಸಂಪರ್ಕಿಸುವುದು.

ಮುಖ್ಯ ಕೊರನಾ ವೈರಸ್ RNA ವೈರಸ್ ಆಗಿದ್ದು ಬೇರೆ ವೈರಸ್‌ನಂತೆ ವರ್ತಿಸುವುದು. ಕೆಲವರಲ್ಲಿ ಮಾತ್ರ ನ್ಯುಮೋನಿಯಾ, ಅಥವಾ ಬ್ರಾಂಕೈಟಿಸ್‌ನ ಲಕ್ಷಣ ಕಂಡು ಬರುತ್ತದೆ ಹಾಗೂ ಅವರಲ್ಲಿ ಕೆಲವರು ಸಾವನ್ನಪ್ಪಬಹುದು. ಈಗ ಸದ್ಯ ಈ ರೋಗಕ್ಕೆ ಸರಿಯಾದ ಔಷಧೋಪಚಾರ ಅಥವಾ ವ್ಯಾಕ್ಸಿನ್ ಇಲ್ಲದಿರುವುದರಿಂದ ರೋಗವನ್ನು ತಡೆಗಟ್ಟುವ ಕ್ರಮಗಳೂ ತುಂಬಾ ಉಪಯೋಗಕಾರಿ, ವುಹಾನ್ ನಗರದಿಂದ ಬರುವ ಪ್ರಯಾಣಿಕರು ಜಾಗ್ರತೆ ವಹಿಸುವುದು ಮುಖ್ಯ. ವುಹಾನ್ ನಗರದಲ್ಲಿ ಹಲವು ವೈದ್ಯಕೀಯ ವಿದ್ಯಾರ್ಥಿಗಳು ಭಾರತದವರಿರುವುದರಿಂದ ಮುಂಜಾಗ್ರತಾ ಕ್ರಮ ಭಾರತದ ವಿಮಾನ ನಿಲ್ದಾಣಗಳಲ್ಲಿ ತೆಗೆದುಕೊಳ್ಳುವುದು ಮುಖ್ಯ..

✍ಜೆ.ಸಿ ಅಡಿಗ
ವೈದ್ಯಕೀಯ ತಜ್ಞರು, ಪುತ್ತೂರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.