HomePage_Banner
HomePage_Banner
HomePage_Banner
HomePage_Banner

ಕಡಬದಲ್ಲಿ ಎಸ್.ಎಸ್.ಎಫ್ ವತಿಯಿಂದ ರಕ್ತದಾನ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕರ್ನಾಟಕ ರಾಜ್ಯ “ಸುನ್ನಿಸ್ಟೂಡೆಂಟ್ ಪೆಡರೇಶನ್”(ಎಸ್.ಎಸ್.ಎಫ್)ಕಡಬ ಸೆಕ್ಟರ್ ವತಿಯಿಂದ ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಹಬಾಗಿತ್ವದಲ್ಲಿ ಫೆ.೯ರಂದು ಕಡಬ ಅಂಬೆಡ್ಕರ್ ಭವನದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು.ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಬ್ಲೆಡ್ ಸೈಬೋ ಉಸ್ತುವಾರಿ ಕರೀಂ ಖದ್ಕರ್ ಉದ್ಘಾಟಿಸಿ ಶುಭಾಹಾರೈಸಿದರು.ಕಡಬ ಬ್ರಾಂಚ್ ಎಸ್.ವೈ.ಎಸ್ ಅಧ್ಯಕ್ಷ ಹಕೀಮ್ ಮದನಿ ದುವಾಃ ಪ್ರಾರ್ಥನೆ ಗೈದರು.

ಕಡಬ ಎಸ್.ಎಸ್.ಎಫ್ ಸೆಕ್ಟರ್ ಅಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಯುವ ಸಮುದಾಯ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಸಮಾಜದ ಜನರಪಾಲಿಗೆ ಸಹಕಾರಿಯಾಗಿಬೇಕೆಂದರು.ಎಸ್.ಎಸ್.ಎಫ್ ಬ್ಲೆಡ್ ಸೈಬೋ ಉಪ್ಪಿನಂಗಡಿ ಉಸ್ತುವಾರಿ ಇಸಾಕ್ ಮದನಿ ಮಾತನಾಡಿ ರಕ್ತದಾನ ಮಹಾದಾನವಾಗಿದ್ದು ನಾವು ಇಂತಹ ರಕ್ತದಾನ ಕ್ರಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ನೀಡಿ ನಾವು ನೀಡುವ ರಕ್ತವು ಅದೇಷ್ಟೂ ರೋಗಿಗಳಿಗೆ ಜೀವದಾನ ನೀಡಲು ಸಹಕರಿಯಾಗುತ್ತದೆ ಎಂದು ರಕ್ತದಾನದ ಮಹತ್ವವನ್ನು ಸವಿಸ್ತಾರವಾಗಿ ವಿವರಿಸುತ್ತಾ ದ.ಕ ಜಿಲ್ಲಾ ೧೪೧ನೇ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದು ಇಲ್ಲಿಯ ಯುವಸಮುದಾಯ ಸಹಭಾಗಿತ್ವ ಅತೀವ ಸಂತೋಷ ತಂದಿದೆ ಎಂದರು.ಮರ್ದಾಳ ತಕ್ವೀಯತುಲ್ ಇಸ್ಲಾಂ ಜಮಾಅತ್ ಅಧ್ಯಕ್ಷ ಕೆ.ಎಸ್ ಹಮೀದ್ ತಂಗಳ್ ,ಸಲಾಉದ್ದೀನ್ ತುರಾಬ್ ತಂಗಳ್, ಮರ್ದಾಳ ಜಮಾಅತ್ ಖತಿಬಾರಾದ ಹನೀಫ್‌ಸಖಾಫಿಎಮ್ಮೆಮ್ಮಾಡ್,ಕೇಪುಕೈರುಲ್‌ಕರೀಂ ಮಸೀದಿಯ ಹಝ್ರತ್ ರಿಝ್ವಾನ್ ರಝ್ವ, ಕಲ್ಲಾಜೆ ಮಸೀದಿ ಖತೀಬರಾದ ಹಝೀಜ್ ಲತೀಫಿ,,ಉಪ್ಪಿನಂಗಡಿ ಬ್ಲೆಡ್ ಸೈಬೋಉಸ್ತುವಾರಿ ಆಸೀಫ್ ಕೊಯಿಲ, ಕರ್ನಾಟಕ ರಾಜ್ಯ ಗಣಿಮತ್ತು ಭೂ ವಿಜ್ಙಾನ ಇಲಾಖಾ ಉಡುಪಿ ಜಿಲ್ಲಾ ಭೂ ವಿಜ್ಞಾನಿ ಹಾಜಿರಾ ಸಜನಿ.ಯಸ್,ಬೆಳ್ತಂಗಡಿ ಮನ್ಸರ್ ಪ್ಯಾರಾ ಮೆಡಿಕಲ್ ನ ಪ್ರಾನ್ಸ್‌ಪಾಲರಾದ ಹೈದರ್ ಮರ್ದಾಳ,ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಡಬ ತಾಲೂಕು ಕಾರ್‍ಯದರ್ಶಿ ನವಾಜ್ ಪನ್ಯ,ಪ್ರಮುಖರಾದ ಆಶ್ರಫ್ ಸಾಹಿರಾ ಫಾನ್ಸಿ,ಸಾಧಿಕ್‌ಮರ್ದಾಳ,ಹಂಝ ಕಳಾರ,ಹಮೀದ್ ಕಜೆಮೂಲೆ, ಅಜೀಜ್ ಕೋಡಿಂಬಾಳ,ಕಮರುದ್ದೀನ್ ಅಲೆಕ್ಕಾಡಿ, ನೌಶಾದ್ ಸೇರಿದಂತೆ ನೂರಾರು ಮಂದಿ ಶಿಬಿರಾರ್ಥಿಗಳಾಗಿ ರಕ್ತದಾನ ಮಾಡಿದರು.

ಎಸ್.ಎಸ್.ಎಫ್ ಕಡಬ ಸೆಕ್ಟರ್‌ನ ಹಾರಿಸ್ ಕೋಡಿಂಬಾಳ ಸ್ವಾಗತಿಸಿ ಎಸ್.ಎಸ್.ಎಫ್ ಕಡಬ ಸೆಕ್ಟರ್‌ನ ಕಾರ್ಯದರ್ಶಿ ಶೆರೀಫ್ ಕಲ್ಲಾಜೆ ವಂದಿಸಿದರು.ಎಸ್.ಎಸ್.ಎಫ್ ಕಡಬ ಸೆಕ್ಟರ್‌ನ ಉಪಾಧ್ಯಕ್ಷ ಝಿಯಾರ್ ಕೋಡಿಂಬಾಳ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.