HomePage_Banner
HomePage_Banner
HomePage_Banner
HomePage_Banner

ವೀರಕಂಬದಲ್ಲಿ ಆಕಸ್ಮಿಕ ಬೆಂಕಿ! ಹೊತ್ತಿ ಉರಿದ ಮನೆ – ಅಂಗಡಿ!! ಭಾರೀ ಅಪಾಯದಿಂದ ಪಾರಾದ ಮನೆಮಂದಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಇಲ್ಲಿಗೆ ಸಮೀಪದ ವೀರಕಂಭ ಎಂಬಲ್ಲಿನ ರಸ್ತೆ ಬದಿಯಲ್ಲಿರುವ ದಿನಸಿ ಸಾಮಾಗ್ರಿ ಹಾಗೂ ಬೀಡಿ ಬ್ರೆಂಚ್ ಹೊಂದಿದ್ದ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಫೆ.12ರಂದು ರಾತ್ರಿ 9.30ಕ್ಕೆ ನಡೆದ ಬಗ್ಗೆ ವರದಿಯಾಗಿದೆ.

ವೀರಕಂಭ ಗ್ರಾಮ ಪಂಚಾಯತ್ ಕಟ್ಟಡದ ಮುಂಭಾಗ ಇರುವ ಅಬ್ದುಲ್ ಹಮೀದ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದೆ. ಅಂಗಡಿ ಮನೆಗೆ ತಾಗಿಕೊಂಡೇ ಇರುವುದರಿಂದ ಮನೆಯ ಮಹಡಿಯ ಮೇಲ್ಛಾವಣಿಗೆ ಕೂಡ ಬೆಂಕಿ ತಗಲಿ ಅಪಾರ ಹಾನಿ ಉಂಟಾಗಿದೆ.

ಅಂಗಡಿಯೊಳಗಿದ್ದ ರೆಫ್ರಿಜರೇಟರ್ ಸಹಿತ ದಿನಸಿ ಸಮಾಗ್ರಿ, ಬೀಡಿಗೆ ಸಂಬಂಧಿಸಿದ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿದೆ. ಅಂಗಡಿಯಲ್ಲಿ ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಂಗಡಿ ಪಕ್ಕದಲ್ಲಿರುವ ಮನೆಯವರನ್ನು ಹೊರಕ್ಕೆ ಸುರಕ್ಷಿತವಾಗಿ ಕರೆತಂದು ಬಳಿಕ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬಂದಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿರುವ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.