HomePage_Banner
HomePage_Banner
HomePage_Banner

ವಿದ್ಯುತ್ ಅವಘಡದಿಂದ ಪೈಂಟರ್ ಮೃತ್ಯು ಪ್ರಕರಣ: ಮೆಸ್ಕಾಂ, ಆಸ್ಪತ್ರೆ ವಿರುದ್ಧವೂ ದೂರು ದಾಖಲಿಸದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ-ದ.ಕ. ದಲಿತ್ ಸೇವಾ ಸಮಿತಿ ಪತ್ರಿಕಾಗೋಷ್ಠಿ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಪೈಂಟ್ ಕೆಲಸ ಮಾಡುತ್ತಿದ್ದ ಯುವಕ ವಿದ್ಯುತ್ ಅವಘಡದಿಂದ ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ಕೇವಲ ಗುತ್ತಿಗೆದಾರರ ವಿರುದ್ಧ ಮಾತ್ರವಲ್ಲ. ನಿರ್ಲಕ್ಷ್ಯ ವಹಿಸಿದ ಮೆಸ್ಕಾಂ ಮತ್ತು ಆಸ್ಪತ್ರೆಯ ವಿರುದ್ಧವೂ ಪ್ರಕರಣ ದಾಖಲಿಸಬೇಕು. ವಾರದೊಳಗೆ ಪ್ರಕರಣ ದಾಖಲಿಸಿಲ್ಲ ಎಂದಾದರೆ ಪುತ್ತೂರು ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ದಲಿತ್ ಸೇವಾ ಸಮಿತಿ ಸ್ಥಾಪಕ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಫೆ.6ಕ್ಕೆ ಪ್ರಗತಿ ಆಸ್ಪತ್ರೆಯಲ್ಲಿ ಪೈಂಟಿಂಗ್ ಕೆಲಸ ಮಾಡುವ ಸಮಯ ಬಪ್ಪಳಿಗೆ ದಿ.ಬಾಬು ಆದಿದ್ರಾವಿಡ ಎಂಬವರ ಪುತ್ರ ದೀಕ್ಷಿತ್ ಅವರಿಗೆ ವಿದ್ಯುತ್ ಶಾಕ್ ಹೊಡೆದಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಿತ್ತಾದರೂ ಫೆ. 10ರಂದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸದೆ ತುರ್ತಾಗಿ ಪೈಂಟಿಂಗ್ ಗುತ್ತಿಗೆ ಪಡೆದು ಕೊಂಡಿದ್ದ ಪುರುಷೋತ್ತಮ ಎಂಬವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಸತ್ಯಾಸತ್ಯತೆಯನ್ನು ಅರಿತು ಅವರು ಕ್ರಮಕೈಗೊಳ್ಳಬಹುದಿತ್ತು. ಒಟ್ಟು ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ಡಾ.ಶ್ರೀಪತಿ ರಾವ್ ಮತ್ತು ಮೆಸ್ಕಾಂ ಅವರ ನಿರ್ಲಕ್ಷ್ಯವೂ ಇದೆ ಎಂದ ಶೇಷಪ್ಪ ಬೆದ್ರಕಾಡು ಅವರು ಆಸ್ಪತ್ರೆಯ ಮತ್ತು ಮೆಸ್ಕಾಂ ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ವಾರದೊಳಗೆ ಪುತ್ತೂರು ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ನೀರು ಚಿಮ್ಮಿ ಶಾಕ್ ಹೊಡೆದಿಲ್ಲ:
ದೀಕ್ಷಿತ್ ಅವರಿಗೆ ನೀರಿನ ಹನಿಯಿಂದಾಗಿ ವಿದ್ಯುತ್ ಶಾಕ್ ತಗುಲಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ನಿಜವಾಗಿ ಆಸ್ಪತ್ರೆಯ ಎದುರು ಇಳಿಸಿರುವ ಶೀಟ್ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕ ಸಮೀಪವೆ ಇದ್ದು, ದೀಕ್ಷಿತ್ ಶೀಟ್ ಮೇಲೆ ಹತ್ತಿ ಕೆಲಸ ಮಾಡಲೆಂದು ಕುಳಿತ್ತಲ್ಲಿಂದ ಎದ್ದು ನಿಂತಾಗ ಆತನ ತಲೆಗೆ ವಿದ್ಯುತ್ ಪರಿವರ್ತಕದ ರಾಡ್ ತಾಗಿ ಶಾಕ್ ತಗುಲಿದೆ. ಒಂದು ವೇಳೆ ಅಲ್ಲಿ ಅಪಾಯ ಇದೆ ಎಂದಾಗ ಯಾರೆ ಆಗಲಿ ಕಾರ್ಮಿಕರಿಗೆ ಕಟ್ಟಡದ ಮಾಲಿಕ ಮೊದಲೆ ತಿಳಿಸಬೇಕು. ಮೆಸ್ಕಾಂ ಅವರು ಈಗಾಗಲೇ ನಮ್ಮಲ್ಲಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಎಂದು ಪತ್ರದ ಮೂಲಕ ಕೊಡಲಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.

ಸರಕಾರದಿಂದ ಮೃತ ಕುಟುಂಬಕ್ಕೆ ಪರಿಹಾರ:
ಮೃತ ದೀಕ್ಷಿತ್ ಕುಟುಂಬ ಕಡು ಬಡತನದಲ್ಲಿದ್ದು, ಆತನ ಕುಟುಂಬಕ್ಕೆ ಸರಕಾರದಿಂದ ಆರ್ಥಿಕ ಪರಿಹಾರ ನೀಡಬೇಕೆಂದು ಈಗಾಗಲೇ ಶಾಸಕರು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ ಎಂದು ಸೇಸಪ್ಪ ಬೆದ್ರಕಾಡು ತಿಳಿಸಿದರು.

ಅಧಿಕಾರಿಗಳ ಮಾತಿಗೂ ಬೆಲೆ ಕೊಡದ ಮಂಗಳೂರು ಆಸ್ಪತ್ರೆ:
ದೀಕ್ಷಿತ್ ಅವರ ಚಿಕಿತ್ಸಾ ವೆಚ್ಚ ಭರಿಸದೆ ಮೃತದೇಹ ಬಿಟ್ಟು ಕೊಡುವುದಿಲ್ಲ ಎಂದು ಮಂಗಳೂರು ಎ.ಜೆ.ಆಸ್ಪತ್ರೆ ಪಟ್ಟು ಹಿಡಿದಾಗ ಪುತ್ತೂರು ಸಹಾಯಕ ಕಮೀಷನರ್ ಮೂಲಕ ನಾವು ಮೃತ ದೇಹ ಬಿಟ್ಟು ಕೊಡಿಸುವಂತೆ ಮನವಿ ಮಾಡಿದ್ದೆವು. ಅವರು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಎ.ಜೆ.ಆಸ್ಪತ್ರೆಗೆ ಕಳುಹಿಸಿದ್ದರು. ಅವರ ಮಾತಿಗೂ ಆಸ್ಪತ್ರೆಯವರು ಬೆಲೆ ಕೊಡದಿದ್ದಾಗ ಪುತ್ತೂರಿನಿಂದಲೇ ತಹಶೀಲ್ದಾರ್ ಮಂಗಳೂರಿಗೆ ತೆರಳಿ ಮಾತುಕತೆ ನಡೆಸಿದರೂ ಆ ಸಂದರ್ಭದಲ್ಲೂ ಆಸ್ಪತ್ರೆ ಒಪ್ಪದಿದ್ದಾಗ ಅಲ್ಲೇ ಇದ್ದ ಗುತ್ತಿಗೆದಾರ ಪುರುಷೋತ್ತಮ ಅವರ ಮೂಲಕ ರೂ. 50ಸಾವಿರ ಕೊಡಿಸಿ ಉಳಿದ ಹಣಕ್ಕೆ ಒಂದು ವಾರದ ಗಡುವಿಗೆ ಬಾಂಡ್ ಬರೆಯಿಸಿಕೊಂಡ ಆಸ್ಪತ್ರೆ ಮತ್ತೆ ಮೃತ ದೇಹವನ್ನು ಬಿಟ್ಟು ಕೊಟ್ಟಿದ್ದಾರೆ ಎಂದು ಸೇಸಪ್ಪ ಬೆದ್ರಕಾಡು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು, ಉಪಾಧ್ಯಕ್ಷ ಮನೋಹರ್ ಕೋಡಿಜಾಲ್, ಕೋಡಿಂಬಾಡಿ ಗ್ರಾಮ ಸಮಿತಿ ಅಧ್ಯಕ್ಷ ಶಶಿಧರ್ ಕೆ, ಮೃತ ದೀಕ್ಷಿತ್ ಅವರ ಸಹೋದರ ಲೋಕೇಶ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.