ಪುತ್ತೂರು: ಕಲಿಯುಗದ ಕಲೆ ಕಾರ್ಣಿಕ ಇತಿಹಾಸ ಪ್ರಸಿದ್ಧ ಕೆಮ್ಮಿಂಜೆ ಶ್ರೀಕ್ಷೇತ್ರ ಮಜಲು ಸ್ವಾಮಿ ಕೊರಗಜ್ಜ ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ನೆಲೆನಿಂತು ಭಕ್ತರನ್ನು ಹರಸುತ್ತಿರುವ ಸ್ವಾಮಿ ಕೊರಗಜ್ಜ ದೈವಜ ಮೂರ್ತಿಗೆ ಪ್ರಭಾವಳಿ ಸಮರ್ಪಣೆ ಕಾರ್ಯಕ್ರಮ ಫೆ. 13ರಂದು ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಪ್ರಭಾವಳಿಯನ್ನು ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿ ಬಳಿಕ ಗಣಪತಿ ಹವನ ನಡೆಸಲಾಯಿತು. ನಂತರ ಪ್ರಭಾವಳಿಯನ್ನು ಸಮರ್ಪಣೆ ಮಾಡಲಾಯಿತು. ಕ್ಷೇತ್ರದ ಧರ್ಮದರ್ಶಿ ಮಣಿ ಸ್ವಾಮಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರಗಿತು. ಪ್ರಭಾವಳಿಯನ್ನು ಕ್ಷೇತ್ರದ ವತಿಯಿಂದ ಸುಮಾರು ರೂ.1.80 ಲಕ್ಷ ವೆಚ್ಚದಲ್ಲಿ ರಚನೆ ಮಾಡಲಾಗಿದೆ. ಜನಾರ್ದನ ಆಚಾರ್ಯ ಮತ್ತು ಮಕ್ಕಲು ಬೀರಮಲೆ ಇವರು ಪ್ರಭಾವಳಿಯನ್ನು ರಚನೆ ಮಾಡಿದ್ದಾರೆ.