ಪುತ್ತೂರು: ಸಂಪ್ಯ ಉದಯಗಿರಿ ಶ್ರೀಅನ್ನಪೂರ್ಣೇಶ್ವರಿ ದೇವರ ಜಾತ್ರೋತ್ಸವ ಹಾಗೂ ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲ ಫೆ.೧೪ ರಿಂದ ೧೬ರವರೆಗೆ ನಡೆಯಲಿದೆ.
ಕಾರ್ಯಕ್ರಮ: ಫೆ.೧೪ರಂದು ಬೆಳಿಗ್ಗೆ ೭.೦೦ರಿಂದ ಗಣಪತಿ ಹವನ, ಕಲಶ ಪೂಜೆ, ಕಲಶಾಭಿಷೇಕ, ನಾಗತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಶ್ರೀದೇವರ ಬಲಿ ಹೊಟು ಉತ್ಸವ, ರಥೋತ್ಸವ, ಸವರಿ ನಡೆಯಲಿದೆ. ಫೆ.೧೫ರಂದು ಬೆಳಿಗ್ಗೆ ೮.೦೦ರಿಂದ ಶ್ರೀದೇವರ ಬಲಿ ಹೊರಟು ಉತ್ಸವ, ರಥೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೭.೦೦ ರಿಂದ ಶ್ರೀವಿಷ್ಣುಮೂರ್ತಿ ದೇವಸ್ಥಾನದಿಂದ ದೈವದ ಭಂಡಾರ ಬರುವುದು. ಮೇಲೇರಿಗೆ ಬೆಂಕಿ ಕೊಡುವುದು, ಅನ್ನಸಂತರ್ಪಣೆ, ಕುಳಿಚಟ್ಟು ದೈವ ಪ್ರಾರಂಭ, ಫೆ.೧೬ರಂದು ಬೆಳಿಗ್ಗೆ ೪.೩೦ರಿಂದ ಶ್ರೀವಿಷ್ಣುಮೂರ್ತಿ ದೈವ ಮೇಲೇರಿಗೆ ಬೀಳುವುದು. ಬಾರಣೆ, ಮಾರಿಕಳ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ಬೆಳಿಗ್ಗೆ ೬.೩೦ರಿಂದ ಗುಳಿಗ ದೈವದ ನೇಮ ಜರಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಫೆ.೧೫ರಂದು ರಾತ್ರಿ ೧೧.೩೦ರಿಂದ ಶರತ್ ಆಳ್ವ ಕೂರೇಲು ಸಾರಥ್ಯದ ಬೊಳ್ಳಿಬೊಲ್ಪು ಕಲಾವಿದೆರ್ ಪುತ್ತೂರು ಅಭಿನಯಿಸುವ ರಂಗ್ ಮಾಣಿಕ್ಯ ಸುಬ್ಬು ಸಂಟ್ಯಾರ್ ರಚಿಸಿ ನಟಿಸಿ ನಿರ್ದೇಶಿಸಿರುವ ತುಳು ಹಾಸ್ಯ ನಾಟಕ ಸೀತೆ ಸೋತೆರ್ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.