ಪುತ್ತೂರು: ಸುದಾನ ಸೆಂಟರ್ ಫಾರ್ ರೂರಲ್ ಡೆವಲಲಪ್ಮೆಂಟ್ ಎಂಡ್ ಎಜ್ಯುಕೇಶನ್ ಇದರ ಅಂಗ ಸಂಸ್ಥೆಯಾದ ಸುದಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ಮೆಂಟ್ ಸ್ಟಡೀಸ್ ಪುತ್ತೂರು ಇದರ ಆಶ್ರಯದಲ್ಲಿ ಫೆ.15ರಂದು ಸಾಧನೆಯ ಹಾದಿ ಸಾಕ್ಷಚಿತ್ರ ಲೋಕಾರ್ಪಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಸುದಾನ ಶಾಲಾ ಆವರಣದಲ್ಲಿನ ಎಡ್ವರ್ಡ್ ಮೆಮೋರಿಯಲ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಲಿದೆ.
ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ|ಡಾ|ತುಕಾರಾಮ ಪೂಜಾರಿರವರು ಸಾಕ್ಷಚಿತ್ರ ಲೋಕಾರ್ಪಣೆ ಮಾಡಲಿದ್ದು ಬಳಿಕ ವಸ್ತು ಸಂಗ್ರಹಾಲಯಗಳು ಮತ್ತು ತುಳು ಸಂಸ್ಕೃತಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ರೆ|ವಿಜಯ ಹಾರ್ವಿನ್ರವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ಮೆಂಟ್ ಸ್ಟಡೀಸ್ ಪುತ್ತೂರು ಇದರ ಅಧ್ಯಕ್ಷ ಹಾಗೂ ನಿರ್ದೇಶಕರಾದ ಪ್ರೊ|ಡಾ|ಪೀಟರ್ ವಿಲ್ಸನ್ ಪ್ರಭಾಕರ್ ಹಾಗೂ ಕಾರ್ಯದರ್ಶಿ ಆಸ್ಕರ್ ಆನಂದ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.