HomePage_Banner
HomePage_Banner
HomePage_Banner

ಕ್ರಿಕೆಟ್ ಪಂದ್ಯಾಟದಲ್ಲಿ ಗೆದ್ದ ಬಹುಮಾನವನ್ನು ಬುದ್ಧಿಮಾಂದ್ಯರ ಕೇಂದ್ರಕ್ಕೆ ಅರ್ಪಿಸಿ ಮಾನವೀಯತೆ ಮೆರೆದ ಮೆಸ್ಕಾಂ ಮಾಪಕ ಓದುಗರ ತಂಡ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾಗಿ ಗಳಿಸಿದ ಬಹುಮಾನದ ಹಣವನ್ನು ಬುದ್ಧಿಮಾಂದ್ಯ ಮಕ್ಕಳಿಗೆ ನೀಡುವ ಮೂಲಕ ತಂಡವೊಂದು ಮಾದರಿಯಾಗಿದೆ. ಫೆ. 8ರಂದು ಪುತ್ತೂರಿನಲ್ಲಿ ಮೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಲ್ ಆಶ್ರಯದಲ್ಲಿ ಪುತ್ತೂರು ವಿಭಾಗೀಯ ಮಟ್ಟದ ಲೀಗ್ ಮಾದರಿಯ ಮೆಸ್ಕಾಂ ಟ್ರೋಫಿ ಕ್ರಿಕೆಟ್ ಪಂದ್ಯಾಟ ನಡೆದಿತ್ತು. ಈ ಪಂದ್ಯಾಟದಲ್ಲಿ ಜಗದೀಶ್ ಮಾಲಕತ್ವದ ಪುತ್ತೂರು ಮೆಸ್ಕಾಂ ಮಾಪಕ ಓದುಗರ ಮೆಸ್ಕಾಂ M.R.Lions ತಂಡ ದ್ವಿತೀಯ ಬಹುಮಾನ ಗಳಿಸಿತ್ತು. ಈ ಬಹುಮಾನದ ಮೊತ್ತವನ್ನು ತಂಡದ ಆಟಗಾರರು ಬನ್ನೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಜ್ಞಾ ಮಾನಸಿಕ ವಿಕಲಚೇತನ (ಬುದ್ಧಿಮಾಂದ್ಯ) ವಸತಿ ಕೇಂದ್ರಕ್ಕೆ ಅರ್ಪಿಸಿದ್ದಾರೆ. ಇಲ್ಲಿನ ಬುದ್ಧಿಮಾಂದ್ಯರಿಗೆ ಹಣ್ಣುಹಂಪಲು ಹಾಗೂ ಆಟದ ಸಾಮಾಗ್ರಿಗಳನ್ನು ಬಹುಮಾನದ ಹಣದಲ್ಲಿ ನೀಡಲಾಗಿದ್ದು ಆಟಗಾರರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ತಂಡದ ಮಾಲಕ ಜಗದೀಶ್, ವ್ಯವಸ್ಥಾಪಕ ಅಕ್ಷಯ್ ಶೆಟ್ಟಿ, ನಾಯಕ ಮಾಧವ ಬಿ, ಉಪನಾಯಕ ಚಿದಾನಂದ ಕೆ, ಸದಸ್ಯರಾದ ಚಿದಾನಂದ,ಹರೀಶ.ಪಿ,ಸಂದೇಶ್ ಶೆಟ್ಟಿ,ರೂಪೇಶ್.ಕೆ, ಹರಿಶ್ಚಂದ್ರ.ಎಂ, ರವೀಶ ಕುಮಾರ್, ವಿನೋದ್ ಕುಮಾರ್, ಸುಜಿತ್ ಕುಮಾರ್, ಚರಣರಾಜ್, ಮನೋಜ್.ಎಸ್, ದೀಕ್ಷಿತ್.ಎ.ಎನ್. ಮತ್ತು ಕೇಶವರವರು ‘ಪ್ರಜ್ಞಾ’ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಕೊಡುಗೆ ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.