ವಿಟ್ಲ: ವಿವಿಧ ರೀತಿಯ ವಿನ್ಯಾಸಗಳ ಅಪಾರ ಸಂಗ್ರಹದ ಉಡುಪುಗಳ ಮಳಿಗೆ `ಕ್ಯೂಬಿ ಫ್ಯಾಶನ್’ ವಿಟ್ಲ ರೀಹಾ ಪ್ಲಾನೆಟ್ನಲ್ಲಿ ಫೆ.13ರಂದು ಶುಭಾರಂಭಗೊಂಡಿತು. ಅಸ್ಸಯ್ಯದ್ ಕೆ.ಆಸ್ ಆಟಕೋಯ ತಂಙಳ್ ಕುಂಬೋಳ್ರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಸಯ್ಯದ್ ಶರಫುದ್ದೀನ್ ತಂಙಳ್ ಸಾಲ್ಮರ ದುವಾ ನೆರವೇರಿಸಿದರು. ಮಹಮೂದುಲ್ ಫೈಝಿ ಓಲೆಮುಂಡೋವು, ಸಯ್ಯದ್ ಮುಸ್ತಫಾ ತಂಙಳ್ ಕುಂಬೋಳ್, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಮುಹಮ್ಮದ್ ಅಲೀ ಫೈಝಿ ಇರ್ಫಾನಿ, ಮಸ್ಜಿದುಲ್ ಅಶ್ಹರಿಯಾದ ಅಬ್ಬಾಸ್ ಮದನಿ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ, ಜಿ.ಪಂ ಸದಸ್ಯ ಎಂ.ಎಸ್ ಮುಹಮ್ಮದ್, ಹಸನುಲ್ ಫೈಝಿ ಆದೂರು, ಎಸ್.ಡಿ.ಪಿ.ಐ ಮುಖಂಡ ಶಾಕಿರ್ ಅಳಕೆಮಜಲು, ಶೀತಲ್ ಗ್ರೂಪ್ನ ಉಮರ್ ಹಾಜಿ ಪರ್ಲಡ್ಕ, ನಿಝಾರ್ ಹಾಜಿ, ಅಹ್ಮದ್ ಸುಳ್ಯ, ಕುಂಞಿಮೋನು ಹಾಜಿ ಸ್ಟೈಲ್ಪಾರ್ಕ್ ಮತ್ತಿತರ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಅತಿಥಿಗಳನ್ನು ಸ್ವಾಗತಿ ಸತ್ಕರಿಸಿದ ಕ್ಯೂಬಿ ಫ್ಯಾಶನ್ ಮಳಿಗೆಯ ಪಾಲುದಾರರು ಮಾತನಾಡಿ ನಮ್ಮಲ್ಲಿ ಎಲ್ಲಾ ವಿಧದ, ವಿವಿಧ ವಿನ್ಯಾಸದ ಉಡುಪುಗಳು ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.