ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಸಾಲ್ಮರದ ಕೇಪುಳು ಕಾಲೋನಿಯಲ್ಲಿನ ಬಾವಿಗೆ ಬಿದ್ದ ವ್ಯಕ್ತಿಯನ್ನು ಪುತ್ತೂರು ಅಗ್ನಿಶಾಮಕದಳದವರು ರಕ್ಷಣೆ ಮಾಡಿದ ಘಟನೆ ಫೆ.14 ರಂದು ಬೆಳಿಗ್ಗೆ ನಡೆದಿದೆ.
ಕೇಪುಳು ಎಸ್ಸಿ ಕಾಲೋನಿ ನಿವಾಸಿ ನಾರಾಯಣ ಎಂಬವರು (30ವ.) ಬಾವಿಗೆ ಬಿದ್ದವರು. ಅವರು ಬೆಳಗ್ಗೆ ಗಂಟೆ 4 ಕ್ಕೆ ಬಾವಿ ಕಡೆಯಿಂದ ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಬಾವಿಯಿಂದ ರಕ್ಷಣೆಗಾಗಿ ಕೂಗು ಕೇಳಿಸಿಕೊಂಡ ಸ್ಥಳೀಯರು ಬಾವಿ ಬಳಿ ಬಂದು ನೋಡಿದಾಗ ನಾರಾಯಣ ಅವರು ಬಾವಿಗೆ ಬಿದ್ದಿರುವುದು ಬೆಳಕಿಗೆ ಬಂದಿದ್ದ ಬೆನ್ನಲ್ಲೆ ಅಗ್ನಿಶಾಮಕ ದಳಕ್ಕೆ ಫೋನಾಯಿಸಿದರು. ತಕ್ಷಣ ಕಾರ್ಯ ಪ್ರವರ್ತರಾದ ಅಗ್ನಿಶಾಮಕದಳದ ಠಾಣಾಧಿಕಾರಿ ಸುಂದರ ಅವರ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಪ್ರಮುಖ ಅಗ್ನಿಶಾಮಕದಳದ ಲೀಲಾಧರ್, ಚಾಲಕ ಶ್ರೀಧರ್, ಫೈರ್ ಮೆನ್ ಅಬ್ದುಲ್ ಅಝೀಝ್, ಹೋಮ್ ಗಾರ್ಡ್ಗಳಾದ ಸೂರಜ್, ಶಿವಪ್ರಸಾದ್, ಜೋಸೆಫ್ ರಕ್ಷಣಾ ಕಾರ್ಯ ನಡೆಸಿದ್ದರು. ಬಳಿಕ ಪುತ್ತೂರು ಆದರ್ಶ ಆಸ್ಪತ್ರೆಯ ಅ್ಯಂಬುಲೆನ್ಸ್ ಚಾಲಕ ದಯಾನಂದ ಅವರು ನಾರಾಯಣ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಗ್ನಿಶಾಮಕದಳದ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.