HomePage_Banner
HomePage_Banner
HomePage_Banner
HomePage_Banner

ನವ ವಧು-ವರರಿಂದ ಪೌರತ್ವ ಕಾಯ್ದೆಗೆ ಬೆಂಬಲ.. ವಾಟ್ಸ್ ಆಪ್, ಫೇಸ್ ಬುಕ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು!! ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ನವ ವಿವಾಹಿತ ಜೋಡಿಯೊಂದು ಮದುವೆ ಮಂಟಪದಲ್ಲೇ ಪೌರತ್ವ ಕಾಯ್ದೆಗೆ ಬೆಂಬಲ ನೀಡುವ ಮೂಲಕ ಗಮನ ಸೆಳೆಯುವ ಜೊತೆಗೆ ವಾಟ್ಸ್ ಆಪ್, ಫೇಸ್ ಬುಕ್ ಮೊದಲಾದ ಸೋಶಿಯಲ್ ಮೀಡಿಯಾಗಳಲ್ಲೂ ಭರ್ಜರಿಯಾಗಿ ಸದ್ದು ಮಾಡಿದೆ.

ಬೆಳ್ತಂಗಡಿ ತಾಲೂಕು ಹಲೇಜಿ ನಿವಾಸಿ ಸುಧೀರ್ ಕೆ.ಎನ್. ಅವರ ವಿವಾಹ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗಿಯಾಗಿರುವ ಪುತ್ತೂರು ತಾಲೂಕಿನ  ಮಮಿತಾ ಅವರೊಂದಿಗೆ ಇತ್ತೀಚೆಗೆ ಪುತ್ತೂರಿನ ಖಾಸಗಿ ಸಭಾಭವನದಲ್ಲಿ ನೆರವೇರಿತ್ತು. ಈ ಸಂದರ್ಭ ವಧು-ವರರಿಬ್ಬರೂ ಸಿಎಎ ಹಾಗೂ ಎನ್‌ಆರ್‌ಸಿಗೆ ನಮ್ಮ ಬೆಂಬಲವಿದೆ ಹಾಗೂ ಸರಕಾರದ ಕಾರ್ಯಗಳಿಗೆ ನಮ್ಮ ಬೆಂಬಲವಿದೆ ಎಂಬ ಬರಹವುಳ್ಳ ಚಿತ್ರ ಹಿಡಿದು ಬೆಂಬಲ ಸೂಚಿಸುವ ಜೊತೆಗೆ ಮದುವೆಗೆ ಆಗಮಿಸಿದ ಸಂಬಂದಿಕರು, ಸ್ನೇಹಿತರಿಗೂ ಪೌರತ್ವ ಕಾಯ್ದೆಯ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಿದ್ದರು. ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲೂ ಹರಡುವ ಜೊತೆಗೆ ಜನ ಮೆಚ್ಚುಗೆಗೂ ಪಾತ್ರವಾಗಿತ್ತು. ಸುಧೀರ್ ಅವರು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾಗಿದ್ದು, ನಿರೂಪಣೆ, ಉಪನ್ಯಾಸ ಸೇರಿದಂತೆ ಸಾಮಾಜಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದಾರೆ. ಮಕ್ಕಳಿಗೆ ಸದಾ ಸ್ಪೂರ್ತಿಯ ಮಾತುಗಳ ಮೂಲಕ ಪ್ರೋತ್ಸಾಹ ನೀಡುವ ಉಪನ್ಯಾಸಕರು, ಜನತೆಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದು ಜನಮೆಚ್ಚುಗೆ ಪಾತ್ರವಾಗಿದೆ. ನವಜೀವನಕ್ಕೆ ಕಾಲಿಡುವ ಸಂದರ್ಭ ನವ ಜೋಡಿ ಇಂತಹ ವಿಶೇಷ ಕಾರ್ಯ ಮಾಡುವ ಮೂಲಕ ತಮ್ಮ ವಿವಾಹ ಮಹೋತ್ಸವವನ್ನು ಚಿರಸ್ಥಾಯಿಯಾಗಿ ಮಾಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.