ಪುತ್ತೂರು: ಅಪ್ರಾಪ್ತೆಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಬೆಳ್ಳಾರೆ ಪೊಲೀಸರು ವ್ಯಕ್ತಿಯೋರ್ವರನ್ನು ವಶಕ್ಕೆ ಪಡೆದು ಕೊಂಡಿರುವ ಘಟನೆ ಫೆ.14 ರಂದು ವರದಿಯಾಗಿದೆ. ಕುದ್ಮಾರು ನಿವಾಸಿ ಅಬ್ದುಲ್ಲಾ ಎಂಬವರು ಪೊಲೀಸ್ ವಶದಲ್ಲಿರುವ ಆರೋಪಿಯಾಗಿದ್ದು. 5 ನೇ ತರಗತಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಆತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.