HomePage_Banner
HomePage_Banner
HomePage_Banner
HomePage_Banner

ಗ್ರಾ.ಪಂ ನ 50 ಸಾವಿರ ಅನುದಾನದಲ್ಲಿ 3 ಕಿ.ಮೀ ರಸ್ತೆ ದುರಸ್ತಿ: ಗ್ರಾಮಸ್ಥರಿಂದ ಶ್ಲಾಘನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗ್ರಾಮ ಪಂಚಾಯತ್‌ನ ಕೇವಲ 50 ಸಾವಿರ ರೂ.ಅನುದಾನದಲ್ಲಿ ಬರೋಬ್ಬರಿ 3 ಕಿ.ಮೀ ವ್ಯಾಪ್ತಿಯ ಕಚ್ಚಾ ರಸ್ತೆಯನ್ನು ಸಂಪೂರ್ಣ ದುರಸ್ತಿ ಮಾಡುವ ಮೂಲಕ ಇಲ್ಲೊಬ್ಬ ಕಂಟ್ರಾಕ್ಟರ್ ಗ್ರಾಮಸ್ಥರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಹೊಂಡಗುಂಡಿಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದ ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಮೇರ್ಲ-ನೂಜಿ-ಕೋಡಂಬು ರಸ್ತೆಯನ್ನು ಗ್ರಾಪಂನ ಅನುದಾನದಲ್ಲಿ ಸಂಪೂರ್ಣ ದುರಸ್ತಿ ಮಾಡಲಾಗಿದೆ. ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರ ಮುತುವರ್ಜಿಯಲ್ಲಿ ಕಂಟ್ರಾಕ್ಟ್‌ದಾರ ಗಫೂರ್ ನಿಡ್ಪಳ್ಳಿಯವರು ದುರಸ್ತಿ ಕಾಮಗಾರಿ ನಿರ್ವಹಿಸಿದ್ದಾರೆ.

ಮೇರ್ಲ-ನೂಜಿ-ಕೋಡಂಬು ರಸ್ತೆಯು ದುರಸ್ತಿ ಕಾಣದೇ ಹಲವು ವರ್ಷಗಳು ಆಗಿವೆ. ರಸ್ತೆ ದುರಸ್ತಿಗಾಗಿ ಹಲವು ವರ್ಷಗಳಿಂದ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ರಸ್ತೆ ಕಾಂಕ್ರಿಟೀಕರಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕರಿಗೆ ಈ ಭಾಗದ ಗ್ರಾಮಸ್ಥರು ಮನವಿ ಕೂಡ ಸಲ್ಲಿಸಿದ್ದಾರೆ. ಸುಮಾರು 3 ಕಿ.ಮೀ ವ್ಯಾಪ್ತಿಯ ರಸ್ತೆ ಇದಾಗಿದ್ದು ಹಲವು ಮನೆಗಳಿಗೆ ಸಂಪರ್ಕ ರಸ್ತೆಯಾಗಿದೆ.ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಇಲ್ಲದೆ ಮಳೆ ನೀರು ರಸ್ತೆ ಮೇಲೆಯೇ ಹರಿದು ಹೋಗಿ ರಸ್ತೆ ಮಧ್ಯೆಯೆ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದರಿಂದ ವಾಹನ ಸಂಚಾರ ಕಷ್ಟಸಾಧ್ಯವಾಗಿತ್ತು.

ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರು ಗ್ರಾಪಂನಿಂದ ೫೦ ಸಾವಿರ ಅನುದಾನ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರು. ಅದರಂತೆ ಬಿಡುಗಡೆಗೊಂಡ ಅನುದಾನದಲ್ಲಿ 3 ಕಿ.ಮೀ ವ್ಯಾಪ್ತಿಯ ರಸ್ತೆಯನ್ನು ಸಂಪೂರ್ಣ ದುರಸ್ತಿ ಮಾಡಲಾಗಿದೆ. ಅರ್ಥ್ ವರ್ಕ್‌ಗೆ ಅಬ್ದುಲ್ ಖಾದರ್ ಮೇರ್ಲರವರೇ ತನ್ನ ಜೆಸಿಬಿಯನ್ನು ಒದಗಿಸಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ವ್ಯವಸ್ಥಿತವಾದ ಚರಂಡಿಗಳನ್ನು ನಿರ್ಮಿಸಲಾಗಿದೆ. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಲಾಗಿದೆ. ಕಾಮಗಾರಿಯನ್ನು ವೀಕ್ಷಿಸಿದ ಜಿಪಂ ಇಂಜಿನಿಯರ್ ಶುತಿಯವರು ಕೂಡ ಗ್ರಾಪಂ ಸಾಮಾನ್ಯ ಸಭೆಯಲ್ಲಿ ೫೦ ಸಾವಿರಕ್ಕಿಂತ ಹೆಚ್ಚಿನ ಕೆಲಸ ಆಗಿದೆ ಎಂದು ಹೇಳಿದ್ದರು. ಒಟ್ಟಿನಲ್ಲಿ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ 

ಯಾವುದೇ ಲಾಭವನ್ನು ಇಟ್ಟುಕೊಂಡು ಕೆಲಸ ಮಾಡಿಲ್ಲ. ೫೦ ಸಾವಿರ ಅನುದಾನದಲ್ಲಿ ಎಲ್ಲವನ್ನೂ ರಸ್ತೆ ದುರಸ್ತಿಗೆ ಬಳಸಿಕೊಂಡಿದ್ದೇವೆ. ಅರ್ಥ್ ವರ್ಕ್‌ಗೆ ಅಬ್ದುಲ್ ಖಾದರ್‌ರವರು ತನ್ನ ಜೆಸಿಬಿಯನ್ನು ಕೊಟ್ಟಿದ್ದಾರೆ. ಇಕ್ಕೆಲಗಳಲ್ಲಿ ಚರಂಡಿ ಮಾಡಿ, ರಸ್ತೆ ಸಮತಟ್ಟು ಮಾಡುವ ಮೂಲಕ ಸುಮಾರು ೩ ಕಿ.ಮೀ ರಸ್ತೆ ದುರಸ್ತಿ ಮಾಡಲಾಗಿದೆ ಗಫೂರ್ ನಿಡ್ಪಳ್ಳಿ, ಕಂಟ್ರಾಕ್ಟರ್

ಮೇರ್ಲ-ನೂಜಿ-ಕೋಡಂಬು ರಸ್ತೆ ದುರಸ್ತಿ ಕಾಣದೆ ಬಹಳ ವರ್ಷಗಳೇ ಆಗಿದೆ. ಹಲವು ವರ್ಷಗಳಿಂದ ಈ ಭಾಗದ ಗ್ರಾಮಸ್ಥರು ರಸ್ತೆ ದುರಸ್ತಿಗಾಗಿ ಮನವಿ ಮಾಡುತ್ತಲೇ ಬಂದಿದ್ದಾರೆ. ಇದು ಸಂಪೂರ್ಣ ಕಚ್ಚಾ ರಸ್ತೆ ಆಗಿದ್ದರಿಂದ ಕಾಂಕ್ರೀಟ್ ಮಾಡುವುದೇ ಉತ್ತಮವಾಗಿದೆ. ಇದಕ್ಕೆ ಲಕ್ಷಾಂತರ ರೂ.ಅನುದಾನ ಬೇಕಾಗುತ್ತದೆ. ಸದ್ಯಕ್ಕೆ ಗ್ರಾಪಂನ ೫೦ ಸಾವಿರ ಅನುದಾನದಲ್ಲಿ ರಸ್ತೆಯನ್ನು ಸಂಪೂರ್ಣ ದುರಸ್ತಿ ಮಾಡಿಸಿದ್ದೇವೆ.ಅನುದಾನವನ್ನು ಸಂಪೂರ್ಣವಾಗಿ ರಸ್ತೆ ದುರಸ್ತಿಗೆ ಬಳಸಿಕೊಳ್ಳಲಾಗಿದೆ ಅಬ್ದುಲ್ ಖಾದರ್ ಮೇರ್ಲ, ಸದಸ್ಯರು ಗ್ರಾಪಂ

ಒಳ್ಳೆಯ ಕೆಲಸ. ೫೦ ಸಾವಿರ ಅನುದಾನದಲ್ಲಿ ರಸ್ತೆ ದುರಸ್ತಿ ಕೆಲಸ ಶ್ಲಾಘನೀಯ. ಅನುದಾನದ ಸಂಪೂರ್ಣ ಬಳಕೆ ಆಗಿದೆ ಎಂಬುದು ರಸ್ತೆ ದುರಸ್ತಿ ನೋಡುವಾಗ ತಿಳಿಯುತ್ತದೆ ಹರಿಶ್ಚಂದ್ರ ಆಚಾರ್ಯ ಕೋಡಂಬು, ಗ್ರಾಮಸ್ಥ, ಮಾಜಿ ಅಧ್ಯಕ್ಷರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.