Home_Page_Advt
Home_Page_Advt
Breaking News

ಅರಣ್ಯ ಇಲಾಖೆಯ ಜಾಗವೂ ಪಹಣಿ ಪತ್ರದಲ್ಲಿ ದಾಖಲಾಗಲಿ ಒಳಮೊಗ್ರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ

ಒಳಮೊಗ್ರು ಗ್ರಾ.ಪಂ ಗ್ರಾಮ ಸಭೆ ಫೆ.೨೪ರಂದು ಕುಂಬ್ರ ರೈತ ಸಭಾ ಭವನದಲ್ಲಿ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.

ಕಂದಾಯ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಭೂಮಿಯೂ ಪಹಣಿಪತ್ರದಲ್ಲಿ ದಾಖಲಾಗಿದೆ. ಆದರೆ ಅರಣ್ಯ ಇಲಾಖೆಯ ಜಾಗ ಪಹಣಿಪತ್ರದಲ್ಲಿ ಇಲ್ಲದೇ ಇರುವುದು ಸಮಸ್ಯೆಯನ್ನು ಹುಟ್ಟು ಹಾಕುತ್ತಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಗ್ರಾಮಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
ತಾಪಂ ಸದಸ್ಯ ಹರೀಶ್ ಬಿಜತ್ರೆ, ಗ್ರಾಪಂ ಉಪಾಧ್ಯಕ್ಷೆ ಸುನಂದ ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಮಹೇಶ್ ಕೇರಿ, ಉಷಾ ನಾರಾಯಣ, ಚಂದ್ರಕಲಾ,, ತ್ರಿವೇಣಿ, ವಸಂತಿ ಆರ್ ಶೆಟ್ಟಿ, ಸುಂದರಿ, ವಿಶ್ವನಾಥ, ಶೀನಪ್ಪ ನಾಯ್ಕ, ಶಶಿಕಿರಣ್ ರೈ ಉಪಸ್ಥಿತರಿದ್ದರು. ಪಶುವೈದ್ಯಾಧಿಕಾರಿ ಡಾ. ಪ್ರಕಾಶ್ ನೋಡೆಲ್ ಅಧಿಕಾರಿಯಾಗಿ ಭಾಘವಹಿಸಿದ್ದರು. ಪಿಡಿಒ ಗೀತಾ ವರದಿ ವಾಚಿಸಿದರು. ಸಿಬ್ಬಂದಿಗಳಾದ ಜಾನಕಿ, ಗುಲಾಬಿ, ಕೇಶವ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.