Home_Page_Advt
Home_Page_Advt
Breaking News

ರಾಷ್ಟ್ರಮಟ್ಟದ ಗೋಲ್ಡನ್ ಆರೋ ಅವಾರ್ಡ್ ಪಡೆದ ವಿದ್ಯಾರ್ಥಿಗಳಿಗೆ ಕಡಬದಲ್ಲಿ ಅದ್ದೂರಿ ಸ್ವಾಗತ, ಮೆರವಣಿಗೆ

ಕಡಬ: ರಾಷ್ಟ್ರಮಟ್ಟದ ಬುಲ್ ಬುಲ್ ಗೋಲ್ಡನ್ ಆರೋ ಅವಾರ್ಡ್ ಪಡೆದ ಕಡಬದ ಪಿಜಕಳ ಸರಕಾರಿ ಕಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಫೆ.೨೬ರಂದು ಬೆಳಗ್ಗೆ ಕಡಬ ಪೇಟೆಯಲ್ಲಿ ಅದ್ದೂರಿಯ ಸ್ವಾಗತ ನೀಡಲಾಯಿತು.

ದೆಹಲಿಯಲ್ಲಿ ಫೆ. ೧೯ ರಿಂದ ೨೩ ರ ತನಕ ಜರಗಿದ ಬುಲ್ ಬುಲ್ ಗೋಲ್ಡನ್ ಆರೋ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಕಡಬಕ್ಕೆ ಆಗಮಿಸಿದ ಪುರಸ್ಕಾರ ಪಡೆದ ವಿದ್ಯಾರ್ಥಿಗಳಾದ ಸುಧಾಲಕ್ಷ್ಮೀ, ಹಸ್ತಾ ಕೆ.ಬಿ., ಮೌಲ್ಯಾ ಪಿ. ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ಪಿಜಕಳ ಶಾಲಾ ಮುಖ್ಯ ಶಿಕ್ಷಕಿ ಚೇತನಾ ಅವರನ್ನು ಪಿಜಕಳ ಶಾಲಾಭಿವೃದ್ಧಿ ಸಮಿತಿ ಹಾಗೂ ಪಿಜಕಳ ಕುಮಾರಧಾರ ಯುವಕ ಮಂಡಲದ ನೇತೃತ್ವದಲ್ಲಿ ಕಡಬದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಡಬ ತಹಶೀಲ್ದಾರ್ ಕಚೇರಿ ಬಳಿ ಸಂಭ್ರ್ರಮದಿಂದ ಬರಮಾಡಿಕೊಳ್ಳಲಾಯಿತು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳು, ರಾಜಕೀಯ ಹಾಗೂ ಸಾಮಾಜಿಕ ಮುಂದಾಳುಗಳು ಸಾಧಕ ವಿದ್ಯಾರ್ಥಿಗಳನ್ನು ಹೂಗುಚ್ಛ ನೀಡಿ, ಶಾಲು ಹಾಕಿ, ಹಾರ ಸಮರ್ಪಿಸಿ ಗೌರವಿಸಿದರು. ಬಳಿಕ ತೆರೆದ ವಾಹನದಲ್ಲಿ ಸಾಧಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯನ್ನು ಮೆರವಣಿಗೆಯ ಮೂಲಕ ಕರೆದೊಯ್ದು ಕಡಬದ ಪೇಟೆಯ ಪಂಚಾಯತ್ ವಾಣಿಜ್ಯ ಸಂಕೀರ್ಣದ ಬಳಿ ಜರಗಿದ ಸಮಾರಂಭದಲ್ಲಿ ಗೌರವಿಸಲಾಯಿತು. ದೆಹಲಿಯಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಪಡೆದ ಜಿಲ್ಲೆಯ ಏಕೈಕ ಸರಕಾರಿ ಶಾಲೆ ಎನ್ನುವ ಹೆಗ್ಗಳಿಕೆಯೊಂದಿಗೆ ಗ್ರಾಮೀಣ ಭಾಗದ ಸರಕಾರಿ ಶಾಲೆಯ ಸಾಧನೆ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಅವರು ಪಿಜಕಳದಂತಹ ಗ್ರಾಮೀಣ ಭಾಗದಲ್ಲಿನ ಬುಲ್ ಬುಲ್ ವಿಭಾಗದ ಮಕ್ಕಳು ರಾಷ್ಟ್ರದ ರಾಜಧಾನಿ ದೆಹಲಿಗೆ ತೆರಳಿ ಅಲ್ಲಿ ಪ್ರತಿಷ್ಠಿತ ಪುರಸ್ಕಾರ ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತ ತಲುಪಿ ಪಿಜಕಳ ಶಾಲೆಯಲ್ಲಿ ಸ್ಥಳೀಯ ಯುವಕ ಮಂಡಲ ಹಾಗೂ ಊರವರ ಸಹಕಾರದೊಂದಿಗೆ ಮಕ್ಕಳ ಸಂಖ್ಯೆ ಏರಿಕೆಯಾಗುವುದರೊಂದಿಗೆ ಇಂತಹ ಉನ್ನತ ಸಾಧನೆ ಮಾಡಲು ಕಾರಣಕರ್ತರಾದ ಶಿಕ್ಷಕಿ ಚೇತನಾ ಅವರು ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಅವರು ಮಾತನಾಡಿ ಪಿಜಕಳ ಶಾಲಾ ಮಕ್ಕಳ ಸಾಧನೆ ಇಡೀ ಊರಿಗೆ ಹೆಮ್ಮೆ ತರುವಂತದ್ದು. ಕೆಲ ದಿನಗಳ ಹಿಂದೆ ಅಂತರಾಷ್ಟ್ರೀಯ ಮಟ್ಟದ ಕ್ರಿಡಾಕೂಟಕ್ಕೆ ಆಯ್ಕೆಯಾಗಿರುವ ಮೋಹನ ಕೆರೆಕ್ಕೋಡಿ ಅವರನ್ನು ಇದೇ ರೀತಿ ಗೌರವಿಸಿದ್ದೇವೆ. ಇದೀಗ ಅದೇ ರೀತಿಯ ಮತ್ತೊಂದು ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗುವ ಅವಕಾಶ ಸಿಕ್ಕಿರುವುದು ನಮಗೆಲ್ಲಾ ಸಂತಸದ ವಿಚಾರ ಎಂದರು. ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಕಡಬ ರಹ್ಮಾನಿಯಾ ಟೌನ್‌ಜುಮಾ ಮಸೀದಿಯ ಅಧ್ಯಕ್ಷ ಎಸ್.ಅಬ್ದುಲ್‌ಖಾದರ್, ಗ್ರಾ.ಪಂ.ಸದಸ್ಯರಾದ ನೀಲಾವತಿ ಶಿವರಾಂ, ಕೆ.ಎಂ.ಹನೀಫ್, ಪಿಜಕಳ ಕುಮಾರಧಾರ ಯುವಕ ಮಂಡಲದ ಗೌರವಾಧ್ಯಕ್ಷ ಶ್ಯಾಮ್‌ಥಾಮಸ್, ಶ್ರೀರಾಮ ಯುವಕ ಮಂಡಲದ ಮೋಹನ ಕೆರೆಕ್ಕೋಡಿ ಮಾತನಾಡಿ ಶುಭ ಹಾರೈಸಿದರು. ಕಡಬ ತಾಲೂಕು ಕಚೇರಿಯ ಉಪ ತಹಶೀಲ್ದಾರ್ ಕೆ.ಟಿ.ಮನೋಹರ್, ಕಡಬ ಸಿ.ಎ ಬ್ಯಾಂಕ್ ನಿರ್ದೇಶಕ ಸತೀಶ್ ನಾಕ್ ಮೇಲಿನಮನೆ, ಕಡಬ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ರಾಘವ ಕಳಾರ, ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಸರೋಜಿನಿ ಆಚಾರ್ಯ, ಹರ್ಷ ಕೋಡಿ, ಎ.ಎಸ್.ಶರೀಫ್, ಕಡಬ ಜೇಸಿ ಅಧ್ಯಕ್ಷ ಮೋಹನ ಕೋಡಿಂಬಾಳ, ಪೂರ್ವಾಧ್ಯಕ್ಷ ಜಯರಾಮ ಆರ್ತಿಲ, ಪಿಜಕಳ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮೋಹನ ಗೌಡ ಗೊಡಾಲ್, ಮಾಜಿ ಅಧ್ಯಕ್ಷ ದಯಾನಂದ ಗೌಡ ಪೊಯ್ಯೆತಡ್ಡ, ಕುಮಾರಧಾರ ಯುವಕ ಮಂಡಲದ ಅಧ್ಯಕ್ಷ ಪ್ರಭಾಕರ ಪಿ.ಎ., ಮಾಜಿ ಅಧ್ಯಕ್ಷ ಸುಂದರ ಗೌಡ ಪಾಲೋಳಿ, ರಂಜೀವ್ ಪಿಜಕಳ, ಕಾರ್ತಿಕ್ ಪಿಜಕಳ, ಪ್ರಮುಖರಾದ ಕೃಷ್ಣಪ್ಪ ಗೌಡ, ಯತೀಂದ್ರ ಗೌಡ ಗೊಡಾಲು, ಥಾಮಸ್ ಇಡೆಯಾಳ ಮುಂತಾದವರು ಉಪಸ್ಥಿತರಿದ್ದರು. ಸಚಿನ್ ಪಿಜಕಳ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಣ ಇಲಾಖೆಯ ಸಿಆರ್‌ಪಿ ಕುಮಾರ್ ಕೆ.ಜೆ. ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.