HomePage_Banner
HomePage_Banner
HomePage_Banner
HomePage_Banner

‘ಸರಕಾರದ ನೀತಿಯಿಂದ ಕನ್ನಡ ಶಾಲೆಗಳು ಮುಚ್ಚುವ ಭೀತಿ’ ಸಾಹಿತ್ಯ ಸಮ್ಮೇಳನ ಕನ್ನಡ ವಿಚಾರಗೋಷ್ಠಿಯಲ್ಲಿ ಪ್ರಭಾಕರ ಜೋಶಿ

Puttur_Advt_NewsUnder_1
Puttur_Advt_NewsUnder_1


ರಾಮಕುಂಜ: ಸರಕಾರಿ ಶಾಲೆಗಳು ಬಡವರಿಗೆ, ದಲಿತರಿಗೆ ಎಂಬಂತೆ ಆಗಿವೆ. ಸರಕಾರಗಳ ತಪ್ಪು ನೀತಿಗಳಿಂದ ಈಗಾಗಲೇ ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಇನ್ನು 50-60ವರ್ಷಗಳಲ್ಲಿ ರಾಜ್ಯದಲ್ಲಿ ಕನ್ನಡ ಶಾಲೆಗಳೇ ಇರುವುದಿಲ್ಲ ಎಂದು ಹಿರಿಯ ವಿದ್ಯಾಂಸ ಡಾ| ಎಂ.ಪ್ರಭಾಕರ ಜೋಷಿ ಮಂಗಳೂರು ಹೇಳಿದರು.

ಅವರು ರಾಮಕುಂಜ ವಿಶ್ವೇಶನಗರ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಅರ್ಬಿ ಶ್ರೀಮತಿ ರಾಜಮ್ಮ ಮತ್ತು ಶ್ರೀನಿವಾಸ ಭಟ್ಟ ಸಮ್ಮೇಳನಾಂಗಣದ ಡಾ| ಎಂ.ಚಿದಾನಂದ ಮೂರ್ತಿ ಸಭಾಂಗಣದ ಪರಮಪೂಜ್ಯ ವಿಶ್ವೇಶತೀರ್ಥ ವೇದಿಕೆಯಲ್ಲಿ ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಫೆ.29ರಂದು ಬೆಳಿಗ್ಗೆ ನಡೆದ ಕನ್ನಡ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಶಾಲೆಗಳನ್ನು ಅದರಷ್ಟಕ್ಕೇ ಸಾಯುವಂತಹ ವಾತಾವರಣವನ್ನು ಕಳೆದ ನಲವತ್ತು ವರ್ಷಗಳಿಂದ ಸರಕಾರವೇ ನಿರ್ಮಾಣ ಮಾಡಿದೆ, ಉತ್ತಮ ಕನ್ನಡ ಶಿಕ್ಷರಿದ್ದರೆ ಕನ್ನಡ ಶಾಲೆಗಳ ಬೆಳವಣಿಗೆಗೆ ಪೂರಕವಾಗಬಹುದು, ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಮ್ಮೇಳನಗಳು ಮೂಲಭೂತ ನಿಲುವುಗಳಿಂದ ಹೊರಬಂದು ಕನ್ನಡದ ಉಳಿವಿಗೆ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಡಾ| ಎಂ.ಪ್ರಭಾಕರ ಜೋಷಿ ಹೇಳಿದರು.

ಶ್ರೀ ರಾಮಕುಂಜೇಶ್ವರ ಪ.ಪೂ ಕಾಲೇಜಿನ ಉಪನ್ಯಾಸಕ ಗಣರಾಜ್ ಕುಂಬ್ಳೆಯವರು ಎಸೆವ ಕನ್ನಡಕ್ಕೆ ಯಕ್ಷಗಾನದ ಒಸಗೆ, ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸಿಬಂತಿ ಪದ್ಮನಾಭರವರು ಶಿಕ್ಷಣದಲ್ಲಿ ಕನ್ನಡ- ಸಾಧ್ಯತೆ, ಸವಾಲು, ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ ನಿರ್ದೇಶಕ ಡಾ| ಧನಂಜಯ ಕುಂಬ್ಳೆಯವರು ಕನ್ನಡ ಸಾಹಿತ್ಯದ ಇತ್ತೀಚಿನ ಒಲವು ನಿಲುಗಳು ಎಂಬ ವಿಷಯಗಳ ಮಂಡನೆ ಮಾಡಿದರು. ಸಮ್ಮೇಳನಾಧ್ಯಕ್ಷ ನಾರಾಯಣ ಭಟ್ ಟಿ.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುಮ್ಮಣ್ಣ ಗೌಡ ಸ್ವಾಗತಿಸಿ, ನವೀನ್ ಎಸ್.ಎ ವಂದಿಸಿದರು. ಅಜಿತ್ ಹಾಗೂ ಶಂಕರಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.