HomePage_Banner
HomePage_Banner
HomePage_Banner
HomePage_Banner

ಐತ್ತೂರು : ಕೋಡಿಂಕಿರಿ-ಕೋಡಿಂಬಾಳ ಸಡಕ್ ರಸ್ತೆಗೆ 30ಕೋಟಿ.

Puttur_Advt_NewsUnder_1
Puttur_Advt_NewsUnder_1

ಕಡಬ:ಐತ್ತೂರು-ಬ್ರಾಂತಿಕಟ್ಟೆ-ಕೋಡಿಂಕಿರಿ-ಕೇರ್ಪಳ-ಕರ್ಮಾಯಿ-ಕೋರಿಯಾರ್-ಬೊಳ್ಳುರು-ಕೋಡಿಂಬಾಳ ಸಂಪರ್ಕ ರಸ್ತೆಗೆ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ ೩೦ಕೋಟಿ ರೂ. ಮಂಜೂರಾಗಿದ್ದು ರಸ್ತೆ ಅಳತೆ ಕಾರ್ಯ ಫೆ. 27ರಂದು ನಡೆಸಲಾಗಿದೆ ಎಂದು ಐತ್ತೂರು ಗ್ರಾ.ಪಂ ಅಧ್ಯಕ್ಷ ಸತೀಶ್.ಕೆ ರವರು ತಿಳಿಸಿದ್ದಾರೆ.

ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯಿಂದ ಐತ್ತೂರು ಗ್ರಾ.ಪಂನ ಬ್ರಾಂತಿಕಟ್ಟೆಯಿಂದ ಕೋಡಿಂಬಾಲ ಮೂಲಕ ಸುಳ್ಯ-ಕಡಬ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಐತ್ತೂರು -102ನೆಕ್ಕಿಲಾಡಿ-ಕೋಡಿಂಬಾಳ ಗ್ರಾಮಗಳನ್ನೊಳಗೊಂಡ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾಗಿರುವ ರಸ್ತೆ ಅಭಿವೃದ್ಧಿಗೆ ನಿರಂತರ ಒತ್ತಡಗಳು ಬಂದಿದ್ದು ಐತ್ತೂರು ಗ್ರಾಮಸಭೆಗಳಲ್ಲೂ ನಿರ್ಣಯಿಸಲಾಗಿತ್ತು. ಗ್ರಾ.ಪಂ ಅಧ್ಯಕ್ಷ ಸತೀಶ್ ಕೆ. ರವರು ಜಿ.ಪಂ ಮಾಜಿ ಸದಸ್ಯ ಕೃಷ್ಣ ಶೆಟ್ಟಿಯವರ ಮುಖಾಂತರ ಕ್ಷೇತ್ರದ ಶಾಸಕ ಎಸ್.ಅಂಗಾರ ಹಾಗೂ ಲೋಕಸಭಾ ಸದಸ್ಯರಾದ ನಳೀನ್ ಕುಮಾರ್ ಕಟೀಲ್‌ರವರಿಗೆ ಮನವಿ ಮಾಡಿಕೊಂಡಂತೆ ಸಂಸದರ ಶಿಫಾರಸ್ಸಿನ ಮೇರೆಗೆ ರಸ್ತೆಗೆ ಪಿ.ಎಮ್.ಜಿ.ಎಸ್.ವೈ ಯೋಜನೆಯಲ್ಲಿ ೩೦ಕೋಟಿ ರೂ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು ಈಗಾಗಲೇ ಸರ್ವೆ ಕಾರ್ಯ ನಡೆಸಲಾಗಿದೆ ಎಂದರು.  ಅಳತೆ ನಡೆಯುವ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಸತೀಶ್.ಕೆ , ಕಡಬ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ, ಗ್ರಾ.ಪಂ ಮಾಜಿ ಸದಸ್ಯ ವಿ.ಎಂ ಕುರಿಯನ್, ಸ್ಥಳೀಯರಾದ ಯೋಗಿಶ್ ಪಂಜೋಡಿ, ಹರೀಶ್ ಗೌಡ ಕೋರಿಯಾರ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.