HomePage_Banner
HomePage_Banner
HomePage_Banner
HomePage_Banner

ಐತ್ತೂರು ಗ್ರಾ.ಪಂ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1

ಕಡಬ : ಐತ್ತೂರು ಗ್ರಾ.ಪಂನಲ್ಲಿ ಮಾಸಿಕ ಸಾಮಾನ್ಯ ಸಭೆಯು ಫೆ. 29ರಂದು ಗ್ರಾ.ಪಂನ ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷ ಸತೀಶ್.ಕೆ ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬೇಸಿಗೆ ಕಾಲವಾಗಿದ್ದು ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿ ಸಮಸ್ಯೆ ಅನುಭವಿಸುತ್ತಿರುವ ಬಳಕೆದಾರರು ನಿರಂತರ ಗ್ರಾ.ಪಂನ ಮೇಲೆ ಒತ್ತಡ ತಂದು ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸುತ್ತಿದ್ದಾರೆ, ಆದರೆ ನಿರಂತರ ವಿದ್ಯುತ್ ಸಮಸ್ಯೆಯಿಂದ ಎಷ್ಟೇ ಪ್ರಯತ್ನಿಸಿದ್ದರು ಟ್ಯಾಂಕಿಗೆ ನೀರು ಸಂಗ್ರಹವಾಗುತ್ತಿಲ್ಲ ಆದರು ಸಮಸ್ಯೆ ಬಗ್ಗೆ ಹೆಚ್ಚು ಗಮನಹರಿಸಿದ್ದು ಒಬ್ಬ ಸಿಬ್ಬಂದಿಗೆ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದ್ದು ಪ್ರತಿ ಸ್ಥಾವರ ವ್ಯಾಪ್ತಿಯ ನೀರು ನಿರ್ವಾಹಕರನ್ನು ಸಂಪರ್ಕದಲ್ಲಿರಿಸಿಕೊಂಡು ಫಲಾನುಭವಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದರು.

ಗ್ರಾ.ಪಂನಲ್ಲಿ ನಡೆಯುವ ಕೆಡಿಪಿ ಸಭೆಯನ್ನು ಮುಂದಿನ ಮಾರ್ಚ್ 13ಕ್ಕೆ ನಡೆಸುವುದಾಗಿ ನಿರ್ಣಯಿಸಲಾಯಿತು. ಬ್ರಾಂತಿಕಟ್ಟೆ-ಕೋಡಿಂಕಿರಿ ರಸ್ತೆ ದುರಸ್ತಿಗೆ ಗ್ರಾ.ಪಂನಿಂದ 4.ಲಕ್ಷ ಅನುದಾನ ಇಡಲಾಗಿದ್ದು, ಈ ರಸ್ತೆಯು ಸಡಕ್ ಯೋಜನೆಯಲ್ಲಿ ಸಂಪೂರ್ಣ ಅಭಿವೃದ್ಧಿಯಾಗಲಿರುವುದರಿಂದ ಗ್ರಾ.ಪಂ.ನ ಅನುದಾನವನ್ನು ಬದಲಿ ವ್ಯವಸ್ಥೆ ಮಾಡಿ ಇದೇ ವಾರ್ಡಿನ ಅತೀ ಅಗತ್ಯ ಕಾಮಾಗಾರಿಗೆ ನೀಡುವಂತೆ ನಿರ್ಣಯಿಸಲಾಯಿತು. ಮಾರ್ಚ್ ಕೊನೆಯ ವಾರದಲ್ಲಿ ಗ್ರಾ.ಪಂ.ನಲ್ಲಿ ಜನಪ್ರತಿನಿಧಿಗಳನ್ನೊಳಗೊಂಡ ಸಾರ್ವಜನಿಕ ಸಭೆ ಕರೆದು ಗ್ರಾಮಸ್ಥರಿಗೆ ವಿವಿಧ ಸೌಲಭ್ಯಗಳನ್ನು ಹಂಚುವ ಮೂಲಕ ಗ್ರಾ.ಪಂ,ನ 5 ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಸಾರ್ವಜನಿಕರಿಗೆ ಅರಿವು ಮೂಡಿಲಾಗುವುದು ಎಂದು ನಿರ್ಣಯಿಸಲಾಯಿತು. ಕಳೆದ ಸಭೆಯಲ್ಲಿ ಸಲ್ಲಿಕೆಯಾದ  9-11, ಕಟ್ಟಡ ಪರವಾನಿಗೆ, ಕೆರೆ ನೀರಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ಗ್ರಾಮಸ್ಥರಿಂದ ಬಂದ ಅರ್ಜಿಗಳ ಬಗ್ಗೆ ಪರಿಶೀಲಿಸಲಾಗಿ ಮಂಜೂರಾತಿ ನೀಡಲಾಯಿತು.

ಗ್ರಾ.ಪಂ ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರಾದ ಪಿ.ಪಿ ಮತ್ಯಾಸ್, ಯಂ.ಪಿ ಯೂಸುಫ್, ಇಸ್ಮಾಯಿಲ್ ಎಮ್.ಎಚ್, ಶ್ರೀಧರ ಗೌಡ, ಧರ್ಮಪಾಲ, ನಸೀರಾ ಕೆ.ಸಿ, ಮುತ್ತು ಕುಮಾರಿ, ಜಯಲಕ್ಷ್ಮೀ, ಗೋಮತಿ, ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶೇಖರ್ ಸ್ವಾಗತಿಸಿ, ಲೆಕ್ಕ ಪತ್ರ ವರದಿ ಮಂಡಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.