HomePage_Banner
HomePage_Banner
HomePage_Banner

ಎಪಿಎಂಸಿ ರೈಲ್ವೇ ಅಂಡರ್‌ಪಾಸ್ ಯೋಜನೆಗೆ ನಗರಸಭೆ ಅನುದಾನ ಶೂನ್ಯ: ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ದಿನೇಶ್ ಮೆದು ಆರೋಪ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಪಿಎಂಸಿ ರೈಲ್ವೇ ಅಂಡರ್‌ಪಾಸ್ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕಿದೆ. ಇನ್ನು ರಾಜ್ಯ ಸರಕಾರ ಎಷ್ಟು ಹಣ ವಿನಿಯೋಗಿಸುತ್ತದೆ ಎಂದು ನೋಡಿ ಉಳಿದ ಹಣವನ್ನು ಎಪಿಎಂಸಿ ಭರಿಸಲಿದೆ. ಆದರೆ ಎಪಿಎಂಸಿ ರಸ್ತೆಯ ಸುತ್ತಮುತ್ತ ಅಂಗಡಿ, ಮನೆಗಳಿಂದ ತೆರಿಗೆ ಸಂಗ್ರಹ ಮಾಡುತ್ತಿರುವ ಪುತ್ತುರು ನಗರಸಭೆ ಯೋಜನೆಗೆ ಅನುದಾನ ನೀಡುತ್ತಿಲ್ಲ. ನಗರಸಭೆಯಿಂದ ಅನುದಾನ ಇಲ್ಲ ಎಂದು ಆಡಳಿತಾಧಿಕಾರಿ ತಿಳಿಸಿರುವುದಾಗಿ ಎಪಿಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಹೇಳಿದರು.

ಫೆ.29ರಂದು ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರದಿಂದ ಎಪಿಎಂಸಿ ರೈಲ್ವೇ ಅಂಡರ್‌ಪಾಸ್ ಬ್ರಿಡ್ಜ್‌ಗೆ ಅನುಮೋದನೆ ಸಿಕ್ಕಿದೆ. ಮುಂದೆ ಮೂಲಭೂತ ಸೌಕರ್ಯ ಇಲಾಖೆಯಿಂದ ಅನುದಾನ ಸಿಗಲಿದೆ. ಇದಕ್ಕೆ ಸರಕಾರ ಎಷ್ಟು ಹಣ ವಿನಿಯೋಗಿಸಲಿದೆ ಎಂದು ನೋಡಿ ಉಳಿದ ಹಣ ಎಪಿಎಂಸಿ ಭರಿಸಲಿದೆ. ಈ ನಿಟ್ಟಿನಲ್ಲಿ ಮುಂದಿನ ವಾರ ರೈಲ್ವೇ ಮೈಸೂರು ವಿಭಾಗೀಯ ಕೇಂದ್ರಕ್ಕೆ ಎಪಿಎಂಸಿ ನಿಯೋಗ ಹೋಗಿ ಅವರಿಗೆ ಎಪಿಎಂಸಿ ಕಡೆಯಿಂದ ಅನುದಾನದ ಪತ್ರ ಕೊಡಲಿದ್ದೇವೆ. ಮೈಸೂರಿನ ವಿಭಾಗೀಯ ಕಚೇರಿಯಿಂದ ರಾಜ್ಯ ಮೂಲಭೂತ ಸೌಕರ್ಯ ಇಲಾಖೆಗೆ ಅಂದಾಜು ಪಟ್ಟಿ ಹೋಗಲಿದೆ. ಈ ನಡುವೆ ಸಂಸದರು, ಶಾಸಕರ ಉಪಸ್ಥಿತಿಯಲ್ಲಿ ರಾಜ್ಯದಿಂದ ಹೆಚ್ಚಿನ ಅನುದಾನ ನೀಡುವ ಕುರಿತು ಮಾತುಕತೆ ನಡೆಸಲಾಗುವುದು ಎಂದ ಅವರು ಸಾರ್ವಜನಿಕ ಉಪಯೋಗ ಅಭಿವೃದ್ಧಿ ದೃಷ್ಟಿಯಿಂದ ಯೋಜನೆ ರೂಪಿಸಿದರೂ ಪುತ್ತೂರು ನಗರಸಭೆ ಅನುದಾನ ನೀಡಿಲ್ಲ. ಎಪಿಎಂಸಿ ರಸ್ತೆ ಎಪಿಎಂಸಿ ಸುಪರ್ದಿಗೆಯಲ್ಲಿದ್ದರೂ ಅದರ ಬಹುತೇಕ ಉಪಯೋಗ ಪಡೆಯುವುದು ನಗರಸಭೆ, ರಸ್ತೆ ಬದಿಯ ಅಂಗಡಿ, ಮನೆಗಳಿಂದ ತೆರಿಗೆ ಸಂಗ್ರಹ ಮಾಡುವುದು ನಗರಸಭೆ. ಆದರೆ ಯೋಜನೆಗೆ ನಗರಸಭೆ ಅನುದಾನ ಇಲ್ಲ ಎಂದು ಅವರು ಹೇಳಿದರು. ಎಪಿಎಂಸಿ ಸದಸ್ಯರು ಧ್ವನಿಗೂಡಿಸಿದರು.

18-29ರ ಕ್ರೀಯಾಯೋಜನೆ ಪೂರ್ಣ:
ಕಳೆದ 2018-19ನೇ ಸಾಲಿನ ಕ್ರೀಯಾಯೋಜನೆ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ರೂ.1 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಗೋದಾಮಿನಲ್ಲಿ ಶೀಟ್ ಅಳವಡಿಸುವ ಕೆಲಸ ಮಾತ್ರ ಬಾಕಿ ಇದೆ. ಅದನ್ನು ತಿಂಗಳೊಳಗೆ ಪೂರ್ಣಗೊಳಿಸಿಕೊಡಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ ಅಧ್ಯಕ್ಷರು ಮುಂದೆ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲು ಸದಸ್ಯರಿಂದ ಸಲಹೆ ಪಡೆದರು.

ದೊಡ್ಡ ಉದ್ಯಮದಿಂದ ಸಣ್ಣ ವ್ಯಾಪಾರಿಗಳಿಗೆ ಹೊಡೆತ:
ದೊಡ್ಡ ದೊಡ್ಡ ಉದ್ಯಮದಿಂದಾಗಿ ಸಣ್ಣ ವ್ಯಾಪಾರಿಗಳಿಗೆ ಹೊಡೆತ ಉಂಟಾಗಿದೆ. ಅಲ್ಲದೆ ದೊಡ್ಡ ಉದ್ಯಮಗಳಿಂದ ವ್ಯವಹಾರದ ಹಣ ಬೇರೆ ಕಡೆ ಹೋಗುತ್ತದೆ. ಸಣ್ಣ ವ್ಯಾಪಾರಿಗಳಿಂದ ವ್ಯವಹರಿಸಿದ ಹಣ ಪರಿಸರದಲ್ಲೆ ರೊಟೆಡ್ ಆಗುತ್ತದೆ ಎಂದು ನಿರ್ದೇಶಕ ಶಕೂರ್ ಹಾಜಿ ಅವರು ಸಭೆಯಲ್ಲಿ ಪ್ರಸ್ತಾಪಿಸಿದರಲ್ಲದೆ ರಿಲಾಯನ್ಸ್‌ನಲ್ಲಿ ಸೀಯಾಳವನ್ನು ಕೃಷಿಕರಿಂದ ಪಡೆಯುವ ಹಣಕ್ಕಿಂತಲೂ ಕಡಿಮೆ ಇಟ್ಟು ಮಾರಾಟ ಮಾಡುವ ಮೂಲಕ ಸಣ್ಣ ವ್ಯಾಪಾರಿಗಳಿಗೆ ಹೊಡೆತ ಕಾಣುತ್ತಿದೆ ಎಂದು ಪ್ರಸ್ತಾಪಿಸಿದರು. ಈ ಕುರಿತು ನಿರ್ದೇಶಕರು ಚರ್ಚಿಸಿದರು. ಅಧ್ಯಕ್ಷರು ಮಾತನಾಡಿ ಅದು ಗ್ರಾಹಕರನ್ನು ತಮ್ಮ ಕಡೆ ಎಳೆಯುವ ಸ್ಪರ್ಧೆ ಆಗಿರಬಹುದು ಎಂದರು.

ಪ್ರಾಂಗಣದಲ್ಲಿ ಕ್ಯಾಲಿಟಿ ನೀರಿನ ಪೈಪ್ ಅಳವಡಿಸಿ:
ಪ್ರಾಂಗಣದಲ್ಲಿರುವ ನೀರು ಪೂರೈಕೆಯ ಪೈಪ್ ಲೈನ್ ವಿಸ್ತರಣೆ ಮತ್ತು ಹಳೆಯ ಪೈಪ್ ಲೈನ್ ಬದಲಾವಣೆ ಸೇರಿದಂತೆ ದುರಸ್ಥಿ ಕಾರ್ಯದಲ್ಲಿ ಟೆಂಡರ್‌ದಾರರಿಗೆ ಉತ್ತಮ ಕ್ವಾಲಿಟಿಯ ಪೈಪ್ ಹಾಕಲು ಸೂಚಿಸಬೇಕು. ನೀರಿನ ಬಳಕೆ ಮಿತ ಮತ್ತು ನೀರು ಸೋರಿಕೆಯಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಕಾಮಗಾರಿಯ ಕ್ವಾಲಿಟಿ ಉತ್ತಮ ಆಗಿರಬೇಕೆಂದು ನಿರ್ದೇಶಕಿ ಪುಲಸ್ತ್ಯಾ ರೈ ಸಭೆಯಲ್ಲಿ ಪ್ರಸ್ತಾಪಿಸಿದರು. ಉತ್ತರಿಸಿದ ಅಧ್ಯಕ್ಷರು ಎಲ್ಲವೂ ಉತ್ತಮ ಕ್ಯಾಲಿಟಿ ಪೈಪ್ ಅಳವಡಿಸುವ ಕುರಿತು ಸೂಚನೆ ನೀಡಬೇಕೆಂದು ಕಾರ್ಯದರ್ಶಿಯವರಿಗೆ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್, ನಿರ್ದೇಶಕರಾದ ಕುಶಾಲಪ್ಪ ಗೌಡ, ತೀರ್ಥಾನಂದ ದುಗ್ಗಳ, ಮೇದಪ್ಪ ಗೌಡ, ಬೂಡಿಯರ್ ರಾಧಾಕೃಷ್ಣ ರೈ, ಕೃಷ್ಣಕುಮಾರ್ ರೈ ಉಪಸ್ಥಿತರಿದ್ದರು. ಪ್ರಭಾರ ಕಾರ್ಯದರ್ಶಿ ರಾಮಚಂದ್ರ ಸಭಾ ವಿಷಯದ ಟಿಪ್ಪಣಿ ಮಾಹಿತಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.