HomePage_Banner
HomePage_Banner
HomePage_Banner

ಎಲ್.ಐ.ಸಿ ಸಹಾಯಕ ಆಡಳಿತಾಧಿಕಾರಿ ಕೆ.ವಿಶ್ವನಾಥ ಗೌಡರ -ನಿವೃತಿಯೊಂದಿಗೆ ಹುಟ್ಟು ಹಬ್ಬದ ಸೌಹಾರ್ದ ಕೂಟ

Puttur_Advt_NewsUnder_1
Puttur_Advt_NewsUnder_1

 

ಕರ್ತವ್ಯ, ನಿಷ್ಠೆ, ಪ್ರಾಮಾಣಿಕತೆಗೆ ಮಾದರಿ – ಚಿದಾನಂದ ಬೈಲಾಡಿ
ಜೀವನದುದ್ದಕ್ಕೂ ಪ್ರವೃತರಾಗಿರುತ್ತಾರೆ – ಹೆಚ್.ಡಿ.ಶಿವರಾಮ್
ಶಿಸ್ತಿನ ಸಿಪಾಯಿ ಆಗಿದ್ದರು – ಗೀತಾ
ಮುಂದೆ ಸಂಘ ಜೀವಿಯಾಗಿಯೇ ಉಳಿಯುತ್ತೇನೆ – ಕೆ. ವಿಶ್ವನಾಥ ಗೌಡ

ಪುತ್ತೂರು: ಭಾರತೀಯ ಜೀವ ವಿಮಾ ನಿಗಮ ಪುತ್ತೂರಿನಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ನಿವೃತಿ ಹೊಂದಿದ ಕೆಯ್ಯೂರು ವಿಶ್ವನಾಥ ಗೌಡರ ಹುಟ್ಟು ಹಬ್ಬ ಮತ್ತು ಸೇವಾ ನಿವೃತಿಯ ಸೌಹಾರ್ದ ಕೂಟ ಫೆ.29 ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಹಿರಿಯರಾದ ದುಗ್ಗಪ್ಪ ಗೌಡ ಮತ್ತು ವಿಶ್ವನಾಥ ಗೌಡ ಅವರು ದೀಪ ಪ್ರಜ್ವಲನೆ ಮಾಡಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳು, ಸ್ನೇಹಿತರು, ಸಹುದ್ಯೋಗಿಗಳು ಹುಟ್ಟು ಹಬ್ಬ ಮತ್ತು ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.
ಕರ್ತವ್ಯ, ನಿಷ್ಠೆ, ಪ್ರಾಮಾಣಿಕತೆಗೆ ಮಾದರಿ:
ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ಚಿದಾನಂದ ಬೈಲಾಡಿ ಅವರು ಮಾತನಾಡಿ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಗೆ ವಿಶ್ವನಾಥ ಗೌಡರು ತಮ್ಮ ವೃತ್ತಿ ಜೀವನದಲ್ಲಿ ಮಾದರಿಯಾಗಿದ್ದಾರೆ. ಅವರು ಗೌಡ ಸಂಘದ ಸೊತ್ತು. ಹಾಗಾಗಿ ಅವರ ಪ್ರಾಮಾಣಿಕತೆಗೆ ತಕ್ಕಂತೆ ಮುಂದೆ ಸಂಘದ ವತಿಯಿಂದಲೂ ದೊಡ್ಡ ಹುದ್ದೆ ನೀಡುವ ಸಿದ್ಧತೆಯಲ್ಲಿ ನಾವೆಲ್ಲರು ಕಾತುರತೆಯಿಂದ ಇದ್ದೇವೆ ಎಂದರು.
ಜೀವನದುದ್ದಕ್ಕೂ ಪ್ರವೃತರಾಗಿರುತ್ತಾರೆ:
ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಹೆಚ್.ಡಿ ಶಿವರಾಮ್ ಅವರು ಮಾತನಾಡಿ ವಿಶ್ವನಾಥ ಗೌಡರು ವೃತ್ತಿ ಜೀವನದಲ್ಲಿ ನಿವೃತ್ತಿ ಹೊಂದಿದರೂ ಮುಂದೆ ಅವರು ಜೀವನದುದ್ದಕ್ಕೂ ಪೃವತ್ತರಾಗಿ ಸಂಘದ ಮೂಲಕ ಉತ್ತಮ ಕಾರ್ಯಚಟುವಟಿಕೆ ನಡೆಸಲಿದ್ದಾರೆ ಎಂದರು.
ಶಿಸ್ತಿನ ಸಿಪಾಯಿ ಆಗಿದ್ದರು:
ಭಾರತೀಯ ಜೀವ ವಿಮಾ ನಿಗಮದಲ್ಲಿ ವಿಶ್ವನಾಥ ಗೌಡರ ಸಹುದ್ಯೋಗಿಯಾಗಿರುವ ಗೀತಾ ಅವರು ಮಾತನಾಡಿ ನಾನು ಕಾಣಿಯೂರು ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ವೇಳೆ ಲೆಕ್ಕದ ಶಿಕ್ಷಕರಾಗಿದ್ದ ವಿಶ್ವನಾಥ ಗೌಡ ಮುಂದೆ ಭಾರತೀಯ ಜೀವ ವಿಮಾ ನಿಗಮದಲ್ಲಿ ಸಹುದ್ಯೋಗಿಯಾಗಿರುವುದರಿಂದ ಅವರ ಮಾರ್ಗದರ್ಶನ ಲಭಿಸಿದೆ. ಅವರು ಶಿಸ್ತಿನ ಸಿಪಾಯಿ, ಅವರ ಸಮಯ ಪಾಲನೆ ನಮಗೆ ಪ್ರೇರಣೆ ನೀಡಿದೆ ಎಂದರು.
ಮುಂದೆ ಸಂಘ ಜೀವಿಯಾಗಿಯೇ ಉಳಿಯುತ್ತೇನೆ:
ನಿವೃತ್ತ ಮತ್ತು ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕೆಯ್ಯೂರು ವಿಶ್ವನಾಥ ಗೌಡರು ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ. ನನ್ನನ್ನು ಉನ್ನತ ಸ್ಥಾನಕ್ಕೆ ಏರಿಸಿ ಉತ್ತಮ ಅವಕಾಶ ನೀಡಿದ್ದು, ನನ್ನ ಸಂಸ್ಥೆ. ಗೌರವ ಸಿಕ್ಕಿದ್ದು ಸಂಘಟನೆ ಹಾಗೂ ಗೌಡ ಸಮಾಜದ ಮೂಲಕ. ಹಾಗಾಗಿ ಸಂಸ್ಥೆ ಮತ್ತು ಸಂಘಟನೆಯನ್ನು ಮರೆಯಲಾರೆ. ಸಂಘಟನೆಯಲ್ಲಿ ತೊಡಗಿದ್ದ ವೇಳೆ ನಾಯಕತ್ವ ವಹಿಸಿ ಯಶಸ್ವಿಯಾಗಿದ್ದೆ. ಮುಂದೆಯೂ ಸಂಘ ಜೀವಿಯಾಗಿಯೇ ಉಳಿಯುತ್ತೇನೆ ಎಂದರು. ಭಾರತೀಯ ಜೀವ ವಿಮಾ ನಿಗಮದ ನಿವೃತ ಆಡಳಿತಾಧಿಕಾರಿ ರವೀಂದ್ರ ಅವರು ನಿವೃತ್ತಿ ಹೊಂದಿದ ವಿಶ್ವನಾಥ ಗೌಡರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಹಿರಿಯರಾದ ದುಗಪ್ಪ ಗೌಡ, ವಿಶ್ವನಾಥ ಗೌಡರ ಪತ್ನಿ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವೇದಾವತಿ, ಬೆಂಗಳೂರಿನ ಐಟಿ ಸಿಸ್ಟಮ್ ಕನ್ಸಲ್ಟೆಂಟ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಪುತ್ರ ಸುಜಿತ್ ಕೆ.ವಿ ಮತ್ತು ಗ್ರೀನ್ ಬ್ರೋಕ್ ಸಂಸ್ಥೆಯಲ್ಲಿ ಪ್ರೊಜೆಕ್ಟ್ ಇಂಜಿನಿಯರ್ ಆಗಿರುವ ಪುತ್ರಿ ವಿಜೇತ ಕೆ.ವಿ ಉಪಸ್ಥಿತರಿದ್ದರು. ಪ್ರತಿಜ್ಞಾ ಪ್ರಾರ್ಥಿಸಿದರು. ಉಪನ್ಯಾಸಕ ದಾಮೋದರ ಗೌಡ ನಂದಿಲ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳು, ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿಗಳು, ಸಿಬಂದಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.