‘ಕಥೆಗಳು ಮನಕಲಕುವಂತೆ ಇರಬೇಕು’: ಸಾಹಿತ್ಯ ಸಮ್ಮೇಳನ ವಿದ್ಯಾರ್ಥಿ ಕಥಾಗೋಷ್ಠಿಯಲ್ಲಿ ಗಣರಾಜ್ ಕುಂಬ್ಳೆ

 

ರಾಮಕುಂಜ: ಕಥೆಗಳಲ್ಲಿ ಮಾನವೀಯ ಮೌಲ್ಯ, ಮನಸ್ಸನ್ನು ಮುಟ್ಟುವಂತೆ ಆಕರ್ಷತೆ, ರೋಚಕತೆ ಹಾಗೂ ಮನಕಲಕುವಂತೆ ಇರಬೇಕೆಂದು ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಗಣರಾಜ್ ಕುಂಬ್ಳೆ ಹೇಳಿದರು. ಅವರು ರಾಮಕುಂಜ ವಿಶ್ವೇಶನಗರ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಅರ್ಬಿ ಶ್ರೀಮತಿ ರಾಜಮ್ಮ ಮತ್ತು ಶ್ರೀನಿವಾಸ ಭಟ್ಟ ಸಮ್ಮೇಳನಾಂಗಣದ ಡಾ| ಎಂ.ಚಿದಾನಂದ ಮೂರ್ತಿ ಸಭಾಂಗಣದ ಪರಮಪೂಜ್ಯ ವಿಶ್ವೇಶತೀರ್ಥ ವೇದಿಕೆಯಲ್ಲಿ ಫೆ.೨೯ರಂದು ನಡೆದ ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿ ಕಥಾಗೋಷ್ಠಿಯ ಸಮನ್ವಯಕಾರರಾಗಿ ಮಾತನಾಡಿದರು. ಮಕ್ಕಳಲ್ಲೂ ಸಾಕಷ್ಟು ಕಲ್ಪನೆಗಳಿವೆ. ಕಲ್ಪನೆಗಳೇ ಕಥೆಗಳಾಗುತ್ತವೆ. ಕಥೆಗಳು ಘಟನೆಯೊಂದನ್ನೇ ಆಯ್ಕೆಮಾಡಿ ರಚನೆಗೊಂಡಿರುತ್ತವೆ. ಘಟನೆಯೊಂದರ ಸುತ್ತ ಹೆಣೆದ ವಿವರಣೆಯಾಗಿರುತ್ತದೆ ಎಂದು ಹೇಳಿದರು. ಸಮ್ಮೇಳನಾಧ್ಯಕ್ಷ ನಾರಾಯಣ ಭಟ್ ಟಿ.,ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಸುಶ್ಮಿತಾ(ಮಾನವೀಯತೆ), ರತ್ನಶ್ರೀ(ಅನಾಥರು), ಆಲಂಕಾರು ಶ್ರೀ ಭಾರತಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಸ್ಪರ್ಧಾ ಐ.ಶೆಟ್ಟಿ(ಆ ಒಂದು ರಾತ್ರಿಯ ಕನಸು), ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ರಾಮಪ್ರಕಾಶ ರೈ ಕಲ್ಲುಗುಡ್ಡೆ (ಅಜ್ಞಾತ ಮೌನ) ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಮಯೂರಿ, ಅಂಜಿಲಿ ಎ.ಆರ್.,(ಮನ ಪರಿವರ್ತನೆ)ರವರು ಕಥೆಗಳನ್ನು ಪ್ರಸ್ತುತಪಡಿಸಿದರು. ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬರವರು ವಿದ್ಯಾರ್ಥಿಗಳನ್ನು ಗೌರವಿಸಿದರು. ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಜಾನ್ ವೇಗಸ್ ಸ್ವಾಗತಿಸಿ, ಉಪನ್ಯಾಸಕ ತಿಲಕಾಕ್ಷ ವಂದಿಸಿದರು. ಉಪನ್ಯಾಸಕ ಗುರುಕಿರಣ್ ಕಾರ್‍ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ರೇವತಿ ನಿರ್ವಹಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.