ಹಾರಾಡಿ ಶಾಲಾ ವಿದ್ಯಾರ್ಥಿಗಳ ಕವನಸಂಕಲನಗಳ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1
  • ತುಡಿತಗಳು ಅಭಿವ್ಯಕ್ತಿಗಳಾಗಲಿ- ಡಾ. ಎಚ್. ಕುಮಾರಸ್ವಾಮಿ
  • ಮಕ್ಕಳಿಗೆ ಪೂರಕ ವಾತಾವರಣ ಹಾರಾಡಿ ಶಾಲೆ-ನೀಲಾವರ ಸುರೇಂದ್ರ ಅಡಿಗ
  • ಪ್ರತಿ ಮನೆಯ ಅಂಗಳವೂ ಕವಿ ಸಮ್ಮೇಳನದ ತಾಣವಾಗಲಿ- ಐ.ಕೆ.ಬೊಳುವಾರು

ಪುತ್ತೂರು: ಸದಾ ಚಟುವಟಿಕೆಯಲ್ಲಿ ತೊಡಗಿರುವ ಹಾರಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ನಡೆಯುವ ಡಾ. ಶಿವರಾಮ ಕಾರಂತ ಸಾಹಿತ್ಯ ವೇದಿಕೆ ಮೂಲಕ ಪ್ರಕಟಣೆಗೊಂಡ ಕವನ ಸಂಕಲನದ ಬಿಡುಗಡೆ ಸಮಾರಂಭ ಮಾ.೧ರಂದು ಹಾರಾಡಿ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ವಿದ್ಯಾರ್ಥಿಗಳಾದ ಲೋಕೇಶ್ವರಿ ಬಿ ಅವರ ಬಣ್ಣದ ಕೊಡೆ, ಸೌಮ್ಯ ಕೆ ಅವರ ಚಿಟ್ಟೆಯ ಬಟ್ಟೆ, ಅಭಿಲಾಷ ದೋಟ ಅವರ ಸಕ್ಕರೆ ಚೀಲ, ಭೂಮಿಕಾ ಬಿ ಅವರ ಚಿನ್ನದ ಗರಿ ಕವನ ಸಂಕಲವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಬಿಡುಗಡೆಗೊಳಿಸಿದರು. ತುಳುನಾಡಿನ ಪರಂಪರೆಯಂತೆ ಕಳಸೆಯಿಂದ ನಾಲ್ಕು ಕವನಗಳ ಪುಸ್ತಕವನ್ನು ಹೊರತೆಗೆಯುವ ಮೂಲಕ ಬಿಡುಗಡೆಗೊಳಿಸಿದರು.

ತುಡಿತಗಳು ಅಭಿವ್ಯಕ್ತಿಗಳಾಗಲಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ಹಿರಿಯ ಉಪನ್ಯಾಸಕ ಡಾ.. ಕುಮಾರಸ್ವಾಮಿ ಅವರು ಮಾತನಾಡಿ ಕವಿ ಭಾವದ ಸಹಜವಾದ ಅಭಿವ್ಯಕ್ತಿಗಳು ಸಾರ್ವಕಾಲಿಕತೆಯನ್ನು ಪಡೆಯುತ್ತವೆ. ಮಕ್ಕಳಲ್ಲಿ ಸಹಜವಾದ ತುಡಿತಗಳು ಅಭಿವ್ಯಕ್ತಿಗಳಾಗಲಿ .ಮಕ್ಕಳ ಬಾಲ್ಯವನ್ನು ನೋಡಿದಾಗ ಹಿರಿತನದ ಅನಿವಾರ್ಯತೆಗೆ ಒಳಗಾಗಬೇಕಾದ ಸನ್ನಿವೇಶದ ಬಗ್ಗೆ ಕೋಪ ಬರುತ್ತದೆ. ನಮ್ಮಲ್ಲಿ ನೈಜ ಯೋಚನೆಗಳ ಧ್ಯಾನವು ಹರಳುಗಟ್ಟಲಿ ಎಂದರು.

ಮಕ್ಕಳಿಗೆ ಪೂರಕ ವಾತಾವರಣ ಹಾರಾಡಿ ಶಾಲೆ:
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಪುಸ್ತಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ಮಕ್ಕಳ ಬೆಳವಣಿಗೆ ಸಹಜವಾಗಿ ನಡೆದಾಗ ಕಲಿಕೆ ಉಂಟಾಗುತ್ತದೆ. ಹಾರಾಡಿ ಶಾಲೆಯ ಕಲಿಕಾ ವಾತಾವರಣ ಮಕ್ಕಳಿಗೆ ಪೂರಕವಾಗಿದೆ. ಇಲ್ಲಿನ ಮಕ್ಕಳು ಪುಣ್ಯವಂತರು ಎಂದರು.

ಪ್ರತಿ ಮನೆಯ ಅಂಗಳವೂ ಕವಿ ಸಮ್ಮೇಳನದ ತಾಣವಾಗಲಿ:
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ರಂಗಕರ್ಮಿ ಐ.ಕೆ. ಬೊಳುವಾರು ಮಾತನಾಡಿ ” ಹಾರಾಡಿ ಶಾಲೆಯಿಂದ ಆರಂಭಗೊಂಡ ಕವಿ ಭಾವದ ಪ್ರಸ್ತುತಿ ಪ್ರತಿ ಮನೆಯನ್ನು ತಟ್ಟಲಿ. ಪ್ರತಿ ಮನೆಯ ಅಂಗಳವೂ ಕವಿ ಸಮ್ಮೇಳನದ ತಾಣವಾಗಲಿ ಎಂದರು. ವಿವೇಕಾನಂದ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ ಶ್ರೀಶಕುಮಾರ್ ಮಾತನಾಡಿ ” ಕವಿಯ ಭಾವವನ್ನು ತುಡಿಯುವ ವಸ್ತು ಸಾಮರ್ಥ್ಯವು ಕವನದ ಜೀವ ತುಂಬುವ ಭಾಗ. ಮಕ್ಕಳಲ್ಲಿ ಪೂರ್ಣ ಕೋನದ ಚಿಂತನೆ ಇರುತ್ತದೆ. ಅದಕ್ಕೆ ಕಣ್ಕಾಪು ಕಟ್ಟುವ ಕಾರ್ಯ ಹಿರಿಯರಿಂದ ಆಗದಿರಲಿ ” ಎಂದು ನುಡಿದರು. ಮಕ್ಕಳ ಸಾಹಿತಿ ರಮೇಶ್ ಉಳಯ ಮಾತನಾಡಿ ” ಪ್ರತಿಯೊಬ್ಬರ ಹೃದಯದಲ್ಲಿ ಕವಿತ್ವದ ಶಕ್ತಿ ಇರುತ್ತದೆ. ಹಾರಾಡಿ ಶಾಲೆಯಲ್ಲಿ ಅಂತಹ ಶಕ್ತಿಗೆ ಪ್ರಸ್ತುತಿ ಗೊಳ್ಳುವ ಅವಕಾಶ ನಿರಂತರವಾಗಿ ದೊರಕುತ್ತಿದೆ ” ಎಂದು ನುಡಿದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಪ್ರತಿಮಾ ಯು ರೈ, ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಪ್ರಿಯಾ ಕುಮಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕವಿಗಳಾದ ಅಭಿಲಾಷ ದೋಟ ,ಲೋಕೇಶ್ವರಿ ಬಿ, ಭೂಮಿಕಾ ಜಿ, ಸೌಮ್ಯ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಪೋಷಕರಾದ ಲಕ್ಷ್ಮಣ ದೋಟ ಹಾಗೂ ಸ್ಮಿತಾ ಪಿ.ಜಿ., ರಾಮಕೃಷ್ಣ ಹಾಗೂ ಶ್ರೀಮತಿ ಉಮಾವತಿ, ಗಣೇಶ ಆಚಾರ್ಯ ಹಾಗೂ ಶ್ರೀಮತಿ ಚಂದ್ರಕಲಾ, ಸುರೇಶ್ ಹಾಗೂ ಶ್ರೀಮತಿ ಗಾಯತ್ರಿ ಅತಿಥಿಗಳನ್ನು ಗೌರವಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪೋಷಕರಾದ ಡಾ. ಸ್ಮಿತಾ ಪಿ ಜಿ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶ್ರೀಮತಿ ಧನ್ಯ ಕುಮಾರಿ ಈ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ವನಿತ ವಂದಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭಾ ಸದಸ್ಯೆ ಶ್ರೀಮತಿ ಪ್ರೇಮಲತಾ ಜಿ ,ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ ಎಚ್ ಮಾಧವ ಭಟ್, ಹಾರಾಡಿ ಸಮೂಹ ಸಂಪನ್ಮೂಲ ವ್ಯಕ್ತಿ ನಾರಾಯಣ ಪುಣಚ, ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೂಪಕಲಾ ರೈ, ಮುಕ್ವೆ ಶಾಲಾ ಶಿಕ್ಷಕ ಚರಣ್ ಕುಮಾರ್, ನಿವೃತ್ತ ಶಿಕ್ಷಕಿ ಶ್ರೀಮತಿ ಮಹಾಲಕ್ಷ್ಮೀ, ರವಿ ಪ್ರಸಾದ್ ಶೆಟ್ಟಿ ಬನ್ನೂರು , ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂಶುದ್ದೀನ್ ಸಂಪ್ಯ ,ಪೋಷಕರಾದ ಲೋಕೇಶ್ ಬನ್ನೂರು, ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ,ಹಿರಿಯ ವಿದ್ಯಾರ್ಥಿ ಲೋಕೇಶ್ ಗೌಡ, ದಿವಿತ್ ಯು.ರೈ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಗುರುಪ್ರಸಾದ್, ಪೂವಪ್ಪ ನಾಯ್ಕ್, ಕೃಷ್ಣ ನಾಯ್ಕ್, ನಾರಾಯಣ ಪ್ರಭು ,ಶ್ರೀಮತಿ ಖತೀಜ, ಶ್ರೀಮತಿ ಸೌಮ್ಯ ,ಶ್ರೀಮತಿ ವೀಣಾ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.