Breaking News

`ಯುವ ಜನಾಂಗ ಕಂಬಳದತ್ತ ಆಕರ್ಷಿತವಾಗಬೇಕು’ ಉಪ್ಪಿನಂಗಡಿ ಕಂಬಳ ಸಮಾರೋಪದಲ್ಲಿ ಅಶೋಕ್ ಕುಮಾರ್ ರೈ ಆಶಯ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ತುಳುನಾಡ ಮಣ್ಣಿನ ಅಂತಃಸತ್ವವುಳ್ಳ ವೀರ ಕ್ರೀಡೆ ಕಂಬಳವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕ್ರೀಡೆಯನ್ನು ಜಗತ್ತಿನೆಲ್ಲೆಡೆ ಹಬ್ಬಿಸಿ ತುಳುನಾಡಿನ ಭವ್ಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಣಬಡಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಯಾವುದೇ ಶಕ್ತಿಗಳು ಈ ಕ್ರೀಡೆಗೆ ಅಡ್ಡ ಬಂದರೂ ಕಂಬಳ ಕ್ರೀಡೆಯ ಉಳಿವಿಗಾಗಿ ಅದನ್ನು ಒಗ್ಗೂಡಿ ವಿರೋಧಿಸೋಣ ಎಂದು ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು. ಉಪ್ಪಿನಂಗಡಿ ಕೂಟೇಲು ಬಳಿಯ ಹಳೆಗೇಟುವಿನ ನೇತ್ರಾವತಿ ನದಿ ಕಿನಾರೆಯಲ್ಲಿ ಮಾ.1ರಂದು ನಡೆದ ವಿಜಯ- ವಿಕ್ರಮ ಜೋಡುಕರೆ ಕಂಬಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಎಲ್ಲರ ಒಗ್ಗೂಡುವಿಕೆ, ಸಹಕಾರದಿಂದ ಮಾತ್ರ ಯಶಸ್ವಿಯಾಗಿ ಕಂಬಳವನ್ನು ನಡೆಸಲು ಸಾಧ್ಯ. ಯುವ ಜನಾಂಗವೂ ಕಂಬಳದತ್ತ ಆಕರ್ಷಿತವಾಗಬೇಕಿದೆ. ಇದನ್ನು ಉಳಿಸಿ- ಬೆಳೆಸಲು ಮುಂದಾಗಬೇಕಿದೆ ಎಂದರಲ್ಲದೆ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.

ವೇದಿಕೆಯಲ್ಲಿ ತಾ.ಪಂ. ಸದಸ್ಯ ಮುಕುಂದ ಗೌಡ ಬಜತ್ತೂರು, ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ ಕೂಳೂರು ಪೊಯ್ಯೊಲ್, ಕಂಬಳದ ಪ್ರಧಾನ ತೀರ್ಪುಗಾರರಾದ ಎಂ. ರಾಜೀವ ಶೆಟ್ಟಿ ಎಡ್ತೂರು, ತೀರ್ಪುಗಾರರ ಸಂಚಾಲಕರಾದ ರವೀಂದ್ರ ಕುಮಾರ್ ಕುಕ್ಕುಂದೂರು, ವಿಜಯ ಕುಮಾರ್ ಜೈನ್ ಕಂಗಿನಮನೆ, ವಿದ್ಯಾಧರ ಜೈನ್ ರೆಂಜಾಳ, ಉದ್ಯಮಿಗಳಾದ ರಾಜೇಶ್ ರೈ, ನಟೇಶ್ ಪೂಜಾರಿ, ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ ಶೆಣೈ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆ ಹಿತ್ಲು, ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ವಿಠಲ ರೈ ಕೊಲ್ಯೊಟ್ಟು, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ಸಹ ಸಂಚಾಲಕ ಜಯಪ್ರಕಾಶ್ ಬದಿನಾರು, ಸಮಿತಿಯ ದಿಲೀಪ್ ರೈ ಕರಾಯ, ಶಿವರಾಮ ಶೆಟ್ಟಿ ಗೋಳ್ತಮಜಲು, ಪ್ರಜೀತ್ ಕೋಡಿಂಬಾಡಿ, ಜಯಂತ ಪೊರೋಳಿ, ಕೇಶವ ಪದಬರಿ, ಜಗದೀಶ್ ಕುಮಾರ್ ಪರಕಜೆ ಮತ್ತಿತರರು ಉಪಸ್ಥಿತರಿದ್ದರು. ಕಂಬಳ ಸಮಿತಿಯ ಕೇಶವ ರಂಗಾಜೆ ಸ್ವಾಗತಿಸಿದರು. ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ: ಈ ಬಾರಿಯ ವಿಜಯ- ವಿಕ್ರಮ ಕಂಬಳದಲ್ಲಿ ೧೪೨ ಜೊತೆ ಕೋಣಗಳು ಭಾಗವಹಿಸಿವೆ.

ಕನೆಹಲಗೆ ವಿಭಾಗ: ಬಾರಕೂರು ಶಾಂತರಾಮ ಶೆಟ್ಟಿ ( ಕೋಣ ಓಡಿಸಿದವರು: ಮಂದಾರ್ತಿ ಶೀರೂರು ಗೋಪಾಲ ನಾಯ್ಕ) ಹಾಗೂ ವಾಮಂಜೂರು ತಿರುವೈಲುಗುತ್ತು ಅಭಯ ನವೀನ್‌ಚಂದ್ರ ಆಳ್ವ (ಕೋಣ ಓಡಿಸಿದವರು: ಬೈಂದೂರು ಭಾಸ್ಕರ್) ಆರೂವರೆ ಕೋಲು ನಿಶಾನಿಗೆ ನೀರು ಹಾಯಿಸುವ ಮೂಲಕ ಬಹುಮಾನವನ್ನು ತಮ್ಮದಾಗಿಸಿಕೊಂಡಿವೆ.

ಹಗ್ಗ ಹಿರಿಯ ವಿಭಾಗ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಬಿ) ( ಕೋಣ ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್- 10.೪೪ಸೆ.) ಪ್ರಥಮ ಬಹುಮಾನವನ್ನು ತನ್ನದಾಸಿಕೊಂಡರೆ, ನಂದಳಿಕೆ ಶ್ರೀಕಾಂತ್ ಭಟ್ (ಎ) (ಕೋಣ ಓಡಿಸಿದವರು: ವಿಜಾರು ಅಶ್ವಥಪುರ ಶ್ರೀನಿವಾಸ ಗೌಡ- ೧೦.೫೦ ಸೆ.) ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಗ್ಗ ಕಿರಿಯ ವಿಭಾಗ: ಏರ್ಮಾಳು ರೋಹಿತ್ ಹೆಗ್ಡೆ (ಬಿ) (ಕೋಣ ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ- ೧೪.೧೨ಸೆ.) ಪ್ರಥಮ ಹಾಗೂ ಮಿಜಾರು ಪ್ರಸಾದ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ (ಕೋಣ ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ- ೧೪.೨೧ ಸೆ.) ದ್ವಿತೀಯ ಬಹುಮಾನ ಪಡೆದಿದ್ದಾರೆ.

ಅಡ್ಡ ಹಲಗೆ: ಬೋಳಾರ ತ್ರಿಶಾಲ್ ಕೆ. ಪೂಜಾರಿ (ಬಿ) (ಕೋಣ ಓಡಿಸಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ ೧೪.೪೩) ಪ್ರಥಮ ಹಾಗೂ ಮೋರ್ಲಾ ಗಿರೀಶ್ ಆಳ್ವ (ಕೋಣ ಓಡಿಸಿದವರು: ನಾರಾವಿ ಯುವರಾಜ್ ಜೈನ್ – ೧೪.೮೨ಸೆ.) ದ್ವಿತೀಯ ಬಹುಮಾನ ಪಡೆದಿದ್ದಾರೆ.

ನೇಗಿಲು ಹಿರಿಯ: ಮೂಡಬಿದ್ರೆ ನ್ಯೂ ಪಡಿವಾಳ, ಹಾರ್ದಿಕ್ ಹರ್ಷವರ್ಧನ ಪಡಿವಾಳ್ (ಕೋಣ ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ – ೧೪.೦೭) ಪ್ರಥಮ ಹಾಗೂ ಕಕ್ಯಪದವು ಪೆಂರ್ಗಾಲ್ ಬಾಬು ವೆಂಕಪ್ಪ ಗೌಡ (ಬಿ) ( ಕೋಣ ಓಡಿಸಿದವರು: ಬೆಳ್ಳಾರೆ ಪನ್ನೆ ನಾಸೀರ್- ೧೪.೪೩ ಸೆ.) ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ನೇಗಿಲು ಕಿರಿಯ: ಉಡುಪಿ ಹಿರೆಬೆಟ್ಟು ಶಂಕರದೇವಾಡಿಗ (ಕೋಣ ಓಡಿಸಿದವರು: ಹಿರೇಬೆಟ್ಟು ಆಕಾಶ್ – ೧೪.೪೩ಸೆ.) ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಸಿದ್ದಕಟ್ಟೆ ಹೊಂಗಾರಹಿತ್ಲು ಮೋಕ್ಷಿತ್ ಕಾಂತಣ್ಣ ಶೆಟ್ಟಿ (ಕೋಣ ಓಡಿಸಿದವರು: ಬಾರಾಡಿ ನತೇಶ್ – ೧೪.೮೮ ಸೆ.) ತಮ್ಮದಾಗಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.