ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಈಶ್ವರಮಂಗಲದಲ್ಲಿ ಜನಜಾಗೃತಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
  • ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ‌ ನೀಡಿ – ಅನಿತಾ ಹೇಮನಾಥ ಶೆಟ್ಟಿ

 

ಪುತ್ತೂರು: ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ಸಮಾಜದಲ್ಲಿ ಉತ್ತಮ ಬೆಳವಣಿಗೆ ಆಗಲು ಸಾಧ್ಯ ಎಂದು ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.

 

ರಾಷ್ಡ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ದ.ಕ ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾ.ಪಂ, ಶಿಶು ಅಭಿವ್ರದ್ದಿ ಯೋಜನೆಯ ಮೂಲಕ ಈಶ್ವರಮಂಗಲ‌ ಗ್ರಾ.ಪಂ ನಲ್ಲಿ ನಡೆದ ಹೆಣ್ಣು ಮಕ್ಕಳನ್ನು ಉಳಿಸಿ, ಓದಿಸಿ ಎಂಬ ವಿಷಯದಲ್ಲಿ ಜಾಗ್ರತಿ‌ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿ, ಉತ್ತಮ ಶಿಕ್ಷಣ ಕೊಡಿಸಿ ಎಂದ ಅವರು ಸರಕಾರಿ ಶಾಲೆಯಲ್ಲಿ ಕಲಿತವರಿಗೆ ಮೊದಲ ಆದ್ಯತೆ ಇದೆ ಅದನ್ನು ಸದುಪಯೋಗ‌ಪಡಿಸಿಕೊಳ್ಳಿ ಎಂದರು.

ಸಿಡಿಒ ಶ್ರೀಲತಾ ಅವರು ಮಾತನಾಡಿ ಸಮಸ್ಯೆಗೆ ಪ್ರತಿರೂಪವಾಗಿ ಕಾರ್ಯಕ್ರಮ ಸರಕಾರದ ಮೂಲಕ ನಡೆಯುತ್ತಿರುವು ಬಹಳ ಅರ್ಥಪೂರ್ಣವಾಗಿದೆ.ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತ ಸಮಾನವಾಗಿ ಇಡಬೇಕು. ಇಲ್ಲವಾದರೆ ಮುಂದೆ ಸಮಸ್ಯೆ ಉದ್ಭವಿಸಬಹುದು ಎಂದು ಎಚ್ಚರಿಸಿದ ಅವರು ತೊಟ್ಡಿಲು ತೂಗುವ ಕೈ ದೇಶವನ್ನು ಆಳುತ್ತದೆ ಎಂದರು.ತಾ.ಪಂ ಸದಸ್ಯೆ ಪೌಝಿಯಾ ಇಬ್ರಾಹಿಂ ಅವರು ಮಾತನಾಡಿ ಹೆಣ್ಣು ಇಲ್ಲದ ಮನೆ, ಮನೆಯೇ ಅಲ್ಲ. ಈ ನಿಟ್ಟಿ ಹೆಣ್ಣನ್ನು ಕೀಳಾಗಿ ನೋಡದೆ ಹೆಣ್ಣಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಎಂದರು. ನೆಟ್ಡಣಿಗೆ‌ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ಶ್ರೀರಾಮ ಪಕ್ಕಳ ಅವರು ಮಾತನಾಡಿ ಹೆಣ್ಣಿಗೆ ಸರಕಾರ ಚಿಂತನೆ ಮಾಡಿದೆ. ಈ ನಿಟ್ಡಿನಲ್ಲಿ ಬಹಳಷ್ಡು ಜನ ಜನಪ್ರತಿನಿಧಿಗಳು ಹೆಣ್ಣಿಗೆ ಪ್ರಾಶಸ್ತ್ಯ ಇದೆ.

 

ದಕ್ಷಿಣ ಕನ್ನಡದಲ್ಲಿ ಹೆಣ್ಣು ಗಂಡು ಬೇಧಭಾವ ಇಲ್ಲ, ಎಲ್ಲಾ ರೀತಿಯಲ್ಲಿ ದ.ಕ ಜಿಲ್ಲೆಯಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಶಸ್ತ್ಯ ಇದೆ ಎಂದರು. ಗ್ರಾ.ಪಂ ಅಧ್ಯಕ್ಷೆ ಶಂಕರಿ ಭಂಡಾರು ಅವರು ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕಿ ಸರೋಜಿನಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಜಾಗ್ರತಿ ಜಾಥ ನಡೆಯಿತು. ಇದೆ ಸಂದರ್ಭದಲ್ಲಿ ಹೆಣ್ಣು ಮಗುವನ್ನು ಉಳಿಸಿ ಎಂಬ ವಿಚಾರದಲ್ಲಿ ಸಂಸಾರ ತಂಡ ಪುತ್ತೂರು ಇದರ ನಿರ್ದೇಶಕ ಸಂಶುದ್ದೀನ್ ಸಂಪ್ಯ ಅವರ ನೇತ್ರತ್ವದಲ್ಲಿ ಈಶ್ವರಮಂಗಲದಲ್ಲಿ ಬೀದಿ ನಾಟಕ ಪ್ರದರ್ಶನಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.