ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ವಿಜ್ಞಾನದ ತಿಳುವಳಿಕೆಯಿಂದ ನಾವು ನಿಸರ್ಗದ ಸೌಂದರ್ಯವನ್ನು ಗಮನಿಸುತ್ತೇವೆ. ಆದರೆ ಆ ಸೌಂದರ್ಯವು ಮುದುಡಿಹೋಗದಂತೆ ಎಚ್ಚರವಹಿಸುವುದೂ ಕೂಡಾ ನಮ್ಮ ಹೊಣೆಗಾರಿಕೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಡಾ.ಬಿ.ಕೆ.ಸರೋಜಿನಿ ಹೇಳಿದರು ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂಲ ವಿಜ್ಞಾನ ವಿಭಾಗ ಮತ್ತು ಐಎಸ್‌ಟಿಇ ನವದೆಹಲಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ ವಿಜ್ಞಾನದ ವಿಷಯದಲ್ಲಿ ಏಷ್ಯಕ್ಕೇ ಮೊದಲ ನೋಬೆಲ್ ಪ್ರಶಸ್ತಿ ಪಡೆದ ಸರ್.ಸಿ.ವಿ ರಾಮನ್ ಅವರ ವಿನೂತನ ಸಂಶೋಧನೆ ರಾಮನ್ ಎಫೆಕ್ಟ್‌ನ್ನು ಜಗತ್ತಿಗೆ ಪರಿಚಯಿಸಿದ ದಿನದ ಸವಿ ನೆನಪಿಗಾಗಿ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಈ ಮಹಾನ್ ವಿಜ್ಞಾನಿಯ ಆದರ್ಶಗಳನ್ನು ಅನುಸರಿಸುತ್ತ ಸಮಾಜಮುಖೀ ಸಂಶೋಧನೆಗಳನ್ನು ನಡೆಸಬೇಕು ಎಂದರು. ಕೇವಲ ಪರೀಕ್ಷೆಗಾಗಿ ಮಾತ್ರ ಅಭ್ಯಾಸವನ್ನು ನಡೆಸುವ ರೂಢಿಯನ್ನು ನಿಲ್ಲಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ.ಸತೀಶ್ ರಾವ್ ಮಾತನಾಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ, ಅವರ ಚಟುವಟಿಕೆಗಳಿಗೆ ಬೇಕಾದ ಅವಕಾಶವನ್ನು ಒದಗಿಸಲಾಗುತ್ತದೆ. ಇದನ್ನು ಉಪಯೋಗಿಸಿಕೊಂಡು ಸಂಸ್ಥೆಯ ಮತ್ತು ಸಮಾಜದ ಉನ್ನತಿಗೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.

ವಿಜ್ಞಾನ ದಿನದ ಅಂಗವಾಗಿ ನಡೆದ ಪೆನ್ಸಿಲ್ ಸ್ಕೆಚ್ ಸ್ಪರ್ಧೆಯ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಮಹೇಶ್.ಕೆ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ದೇವದತ್ತ ಭಟ್ ಸ್ವಾಗತಿಸಿದರು. ಸ್ವಸ್ತಿಕ್. ಕೆ. ಎಸ್ ರಾಷ್ಟ್ರೀಯ ವಿಜ್ಞಾನ ದಿನದ ಬಗ್ಗೆ ಮಾಹಿತಿ ನೀಡಿದರು. ಸೋನಮ್.ಎಸ್.ಎಸ್ ವಂದಿಸಿದರು. ಸಂತೃಪ್ತಿ. ಎಸ್ ಮತ್ತು ಆಶಿಕಾ.ಡಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ದ ಸಾಗಾ ಆಫ್ ಸೈನ್ಸ್ ಎಂಡ್ ಇಂಜಿನಿಯರಿಂಗ್-ಮಲೆಕ್ಯುಲ್ಸ್ ಟೂ ಮಟೀರಿಯಲ್ಸ್ ಎನ್ನುವ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.