102ನೇ ನೆಕ್ಕಿಲಾಡಿ: ಅಕ್ರಮ ಮರಳು ಸಾಗಾಟದ ಮಿನಿ ಲಾರಿಗೆ ಸ್ಕೂಟರ್ ಡಿಕ್ಕಿ ರಾಜಸ್ಥಾನದ ಕಾರ್ಮಿಕ ಸಾವು ಪ್ರಕರಣ: ಕಡಬಕ್ಕೆ ಎಸ್ಪಿ ಲಕ್ಷ್ಮೀಪ್ರಸಾದ್ ಭೇಟಿ

Puttur_Advt_NewsUnder_1
Puttur_Advt_NewsUnder_1

 

  • ಸಾಕ್ಷಿ ನಾಶಕ್ಕೆ ಯತ್ನ: ಮತ್ತೊಂದು ಪ್ರಕರಣ ದಾಖಲು
  • ಡಿವೈಎಸ್ಪಿ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಎಸ್ಪಿ ಆದೇಶ
  • ಪೋಲಿಸರು ಲಾರಿಯವರ ಪರವಾಗಿ ಪ್ರಕರಣ ದಾಖಲಿಸಿದ್ದರು-ಆರೋಪ

 

ಕಡಬ: 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ಮಾ.1ರಂದು ಅಕ್ರಮ ಮರಳು ಸಾಗಾಟದ ಕೇರಳ ನೋಂದಾಣಿಯ ಮಿನಿ ಲಾರಿ (407) ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಟೈಲ್ಸ್ ಅಳವಡಿಸುವ ಕಾರ್ಮಿಕ ರಾಜಸ್ಥಾನ ಮೂಲದ ಸವಾಯ್‌ಮಾದ್‌ಪುರ್ ಜಿಲ್ಲೆಯ ಬಾನಾವಾಸ ತಾಲೂಕಿನ ಲಾಡ್‌ಪುರಿಯ ನಿವಾಸಿ ಮೇಘರಾಜ (32) ಸ್ಥಳದಲ್ಲೇ ಮೃತಪಟ್ಟ ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅಪಘಾತ ನಡೆದ ವೇಳೆ ಮಿನಿ ಲಾರಿಯಲ್ಲಿ ಮರಳು ತುಂಬಿಸಿಕೊಂಡಿದ್ದು ಅಪಘಾತ ನಡೆದ ಬಳಿಕ ಮಿನಿ ಲಾರಿಯನ್ನು ಬೇರೆಡೆಗೆ ಕೊಂಡೊಯ್ದು ಮರಳು ಖಾಲಿ ಮಾಡಿಸಿ ಬಳಿಕ ಘಟನೆ ನಡೆದ ರಸ್ತೆಯಲ್ಲಿ ನಿಲ್ಲಿಸಲಾಗಿ ಪೋಲಿಸರಿಗೆ ತಪ್ಪು ಮಾಹಿತಿ ನೀಡಲಾಗಿತ್ತು. ಈ ಬಗ್ಗೆ ಮೃತರ ಸ್ನೇಹಿತರು ಆರೋಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಆಗಮಿಸಿ ಸಾಕ್ಷಿ ನಾಶಕ್ಕೆ ಯತ್ನಿಸಿದ ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿ, ಪ್ರಕರಣದ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್ಪಿ ದಿನಕರ ಶೆಟ್ಟಿಯವರಿಗೆ ಆದೇಶ ನೀಡಿದ್ದಾರೆ.

 

                                                                 ಮೇಘರಾಜ

 

ಘಟನೆಯ ಹಿನ್ನಲೆ:
ಕೋಡಿಂಬಾಳ ಗ್ರಾಮದ ಮುಳಿಯ ಹೊನ್ನಪ್ಪ ಗೌಡರ ಹೊಸ ಮನೆಯ ಟೈಲ್ಸ್ ಅಳವಡಿಸುವ ಕೆಲಸ ಮಾಡಿಕೊಂಡಿದ್ದ ಮೇಘರಾಜ್ ಮಾ.1ರಂದು ಪೈಂಟ್ ತರಲೆಂದು ಕಡಬಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ಅಪಘಾತದ ವೇಳೆ ಲಾರಿಯ ಹಿಂಬಂದಿ ಚಕ್ರ ಅವರ ತಲೆಯ ಮೇಲೆ ಹರಿದು ತಲೆ ಪೂರ್ತಿ ಛಿದ್ರಗೊಂಡಿತ್ತು.  ಮೃತ ಮೇಘರಾಜ್ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸ್ತವ್ಯ ಇರುವ ರಾಜಸ್ಥಾನ ಮೂಲದ ಅನೂಪ್ ಸಿಂಗ್ ಎಂಬವರ ಜತೆ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ರವಿವಾರ ರಾತ್ರಿ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಕೊಂಡೊಯ್ಯಲಾಗಿತ್ತು.

ಈ ಮಧ್ಯೆ ಮೃತ ಮೇಘರಾಜ್ ಸ್ನೇಹಿತರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಧರಣಿ ಕುಳಿತು, ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿಕೊಂಡಿಲ್ಲ, ಲಾರಿ ಮಾಲಕರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ, ಮೆಘರಾಜ್ ಅವರಿಗೆ ಎರಡು ಸಣ್ಣ ಮಕ್ಕಳಿದೆ, ಅವರಿಗೆ ಅನ್ಯಾಯ ಮಾಡಬೇಡಿ, ಕನಿಷ್ಠ ವಿಮೆಯಾದರೂ ದೊರಕುವಂತೆ ಮಾಡಿಕೊಡಿ ಎಂದು ವಿನಂತಿಸಿಕೊಂಡಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಪೊಲೀಸರು ಹಾಗೂ ಲಾರಿ ಮಾಲಕರು ನಿರ್ಲಕ್ಷ ವಹಿಸಿದ್ದರು ಇದರಿಂದ ಮನನೊಂದ ಮೇಘರಾಜ್ ಅವರ ಮಾಲಕ ಅನೂಪ್ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು, ಅದರಂತೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಮರು ಪ್ರಕರಣ ದಾಖಲಿಸಲು ಆದೇಶಿಸಿದ್ದರು.

ಮರಳು ಖಾಲಿ ಮಾಡಿ ಲಾರಿ ತಂದಿರಿಸಿದರು
ಅಪಘಾತ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳುವ ಮೊದಲು ಲಾರಿಯಲ್ಲಿದ್ದ ಮರಳನ್ನು ಅಪಘಾತ ನಡೆದ ಸ್ಥಳದ ಸಮೀಪ ಮನೆಯೊಂದರ ಬಳಿ ಖಾಲಿ ಮಾಡಿ ಲಾರಿಯನ್ನು ಮತ್ತೆ ಅಪಘಾತದ ಸ್ಥಳದಲ್ಲಿ ತಂದಿರಿಸಿದರು ಎಂದು ಮೆಘರಾಜ್ ಸ್ನೇಹಿತರು ಆರೋಪಿಸಿ ಮಾ.೨ರಂದು ದೂರು ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ಎಸ್ಪಿ ಆದೇಶದ ಬಳಿಕ ಪೊಲೀಸರು ತನಿಖೆಗೆ ಪ್ರಾರಂಭ ಮಾಡಿದ್ದಾರೆ.

ಶವ ಹಸ್ತಾಂತರದ ವೇಳೆ ಎಪ್.ಐ.ಆರ್. ಪ್ರತಿ ನೀಡದ ಪೊಲೀಸರು
ಮಾ.2ರ ಸಂಜೆಯವರೆಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಕಿಯಾದ ಶವ!

ದೂರದ ಊರಿನಿಂದ ಕೂಲಿ ಕಾರ್ಮಿಕನಾಗಿ ಬಂದು ಇಲ್ಲಿ ಮೃತಪಟ್ಟ ಮೆಘರಾಜ್ ಅವರ ಶವ ಶವ ಸಾಗಾಟಕ್ಕೂ ಕಂಟಕ ಎದುರಾಗಿತ್ತು, ಒಂದೆಡೆ ಕಡಬ ವೈದ್ಯಾಧಿಕಾರಿಯವರ ಮರಣೋತ್ತರ ವರದಿಯಲ್ಲಿ ತಲೆಯ ಭಾಗ ಜಜ್ಜಿ ಹೋಗಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇರುವುದು, ಮತ್ತು ಶವ ಹಸ್ತಾಂತರದ ವೇಳೆ ಪೋಲಿಸರು ಎಪ್.ಐ.ಆರ್. ಪ್ರತಿ ನೀಡದೆ ಇರುವುದರಿಂದ ಮೇಘರಾಜ್ ಶವ ರಾಜಸ್ಥಾನಕ್ಕೆ ವಿಮಾನ ಮೂಲಕ ಸಾಗಾಟ ಮಾಡಲು ಅಡ್ಡಿಯಾಗಿತ್ತು. ಬಳಿಕ ವೈದ್ಯಾಧಿಕಾರಿಯವರಿಂದ ಮಾ.2ರ ಮುಂಜಾನೆ ಸರಿಯಾದ ವರದಿ ಮತ್ತು ಎಪ್.ಐ.ಆರ್. ಕಾಫಿ ಬೆಂಗಳೂರಿಗೆ ಕಳುಹಿಸಿಕೊಟ್ಟ ಬಳಿಕ ವಿಮಾನ ನಿಲ್ದಾಣದ ಅಧಿಕಾರಿಗಳು ಶವ ಸಾಗಾಟಕ್ಕೆ ಅನುಮತಿ ನೀಡಿದ್ದಾರೆ. ಈ ವೇಳೆಗಾಗಲೇ ವಿಮಾನಕ್ಕೆ ಖಾದಿರಿಸಿದ ಸಮಯ ಮೀರಿರುವುದರಿಂದ ಸುಮಾರು ೨೦ ಸಾವಿರ ಕಳೆದುಕೊಳ್ಳುವಂತಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.