Breaking News

ಮಾಡಾವು ಎಸ್ ಕೆ ಎಸ್ ಎಸ್ ಎಫ್ ನಿಂದ ಬಡ ಮಹಿಳೆಯ ಮನೆ ದುರಸ್ಥಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಡಾವು ಎಸ್ ಕೆ ಎಸ್ ಎಸ್ ಎಫ್ ಸಿದ್ದಪಡಿಸಿದ ೨೦೨೦ ನೇ ಸಾಲಿನ ಕ್ರಿಯಾ ಯೋಜನೆಯ ಮೊದಲ ಕಾರ್ಯಕ್ರಮದ ಪ್ರಕಾರ ಗ್ರಾಮದ ಬಡ ಕುಟುಂಬವೊಂದರ ಮನೆ ದುರಸ್ತಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಮಾಡಾವು ಶಾಲಾ ಬಳಿಯ ಕುಂಞಲೀಮಾ ಎಂಬವರ ಮನೆಯ ಹಿಂದುಗಡೆ ತುಂಬಾ ಇಕ್ಕಟ್ಟಾಗಿ, ನಡೆದಾಡಲೂ ಕಷ್ಟವಾಗಿತ್ತು. ಅಲ್ಲಿದ್ದ ಸುಮಾರು ೫ ಅಡಿ ಮಣ್ಣಿನ ದಿಬ್ಬವನ್ನು ತೆಗೆದು ಮನೆಯ ಮುಂದುಗಡೆ ಅಂಕು ಡೊಂಕಾಗಿದ್ದ ಅಂಗಳಕ್ಕೆ ಹಾಕಿ ಸಮತಟ್ಟು ಮಾಡಲಾಯಿತು. ಅರ್ಧದಷ್ಟಿದ್ದ ಶೌಚಾಲಯದ ಗೋಡೆಯನ್ನು ಪೂರ್ತಿ ಕಟ್ಟಿ ಕೊಡಲಾಯಿತು. ಮನೆಯ ಮುಂಬಾಗದಲ್ಲಿ ಸಿಟೌಟ್ ನ್ನು ನಿರ್ಮಿಸಿ, ಮುಂಬಾಗದ ಗೋಡೆಗೆ ಸಾರಣೆ ಮಾಡಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಕೆ ಎಸ್ ಎಸ್ ಎಫ್ ಯುನಿಟ್ ನ ಅಧ್ಯಕ್ಷರಾದ ಇಬ್ರಾಹಿಂ ಮಾಸ್ಟರ್ ರವರು ಮಾತನಾಡಿ ಎಸ್ ಕೆ ಎಸ್ ಎಸ್ ಎಫ್ ನ ಒಂದು ವರ್ಷದ ಯೋಜನೆಯ ಬಗ್ಗೆ ತಿಳಿಸಿದರು. ಪ್ರತಿ ಎರಡು ತಿಂಗಳಿಗೊಮ್ಮೆ ಸಮುದಾಯ ಅಥವಾ ಸಾರ್ವಜನಿಕರಿಗೆ ಉಪಯೋಗವಾಗುವ ಸೇವೆಯನ್ನು ಮಾಡಲು ಸಂಘಟನೆಯು ತನ್ನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ನಿರ್ಧರಿಸಿದೆ ಎಂದರು. ಮಾರ್ಗದರ್ಶಕರಾದ ಅಬ್ದುಲ್ ಹಮೀದ್ ಹಾಜಿ ಫ್ಯಾಮಿಲಿ, ಮುಹಮ್ಮದ್ ಹಾಜಿ ಪಿ ವೈ,ಹಾಗೂ ಇಸ್ಮಾಯಿಲ್ ಮುಸ್ಲಿಯಾರ್ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಂಘಟನೆಯ ಕೆಲಸವನ್ನು ಶ್ಲಾಘಿಸಿದರು.

ಮಾಡಾವು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಕಾದರ್ ಮುಸ್ಲಿಯಾರ್ ಮಾತನಾಡಿ, ಸಮುದಾಯ ಸೇವೆಯು ಇಸ್ಲಾಮ್ ಧರ್ಮದಲ್ಲಿ ಅತ್ಯಂತ ಪುಣ್ಯ ಕೆಲಸ ಎನ್ನುತ್ತಾ ಸಂಘಟಯ ಸದಸ್ಯರನ್ನು ಅಭಿನಂದಿಸಿದರು. ಈ ಹಿಂದೆ ಕೆಯ್ಯೂರು ಗ್ರಾಮದ ಮೂಲಕ ಹಾದು ಹೋಗುವ ಹೆದ್ದಾರಿಯ ಇಕ್ಕೆಲಗಳನ್ನು ಪೊರ್ಲುದ ಕೆಯ್ಯೂರು ವಿಷನ್ ೨೦೨೫ ಸಮಿತಿಯ ಸಹಯೋಗದೊಂದಿಗೆ ಸ್ವಚ್ಛ ಗೊಳಿಸಿದ್ದನ್ನು ನೆನಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಪುತ್ತು ಅಕ್ಕರೆ, ಇಸ್ಮಾಯಿಲ್ ಮಾವಿನಡಿ, ಶಾಫೀ ಕಣಿಯಾರ್, ಶೆರೀಫ್ ಅಕ್ಕರೆ, ಸಿರಾಜ್ ಏ ಕೆ, ಉಮ್ಮರ್ , ಅಬ್ದುಲ್ ಖಾದರ್ ನೆಲ್ಯಾಡಿ, ಉಮ್ಮರ್, ಸಂಶುದ್ದೀನ್ ಸಂತೋಷ್ ಹಾಗೂ ಇಬ್ರಾಹಿಂ ಶಾಲಾ ಬಳಿ ಉಪಸ್ಥಿತರಿದ್ದರು. ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕಾರ್ಯದರ್ಶಿ ಹಾರಿಸ್ ಪಾತುಂಜ ಸ್ವಾಗತಿಸಿ ,ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.