ಉಪ್ಪಿನಂಗಡಿಯಲ್ಲಿ ಎನ್‌ಪಿಆರ್., ಎನ್‌ಆರ್‌ಸಿ., ಸಿಎಎ. ಮಾಹಿತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ನಾಗರಿಕ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಎನ್‌ಪಿಆರ್., ಎನ್‌ಆರ್‌ಸಿ., ಸಿಎಎ.) ವಿರುದ್ಧದ ಸರಣಿ ಪ್ರತಿಭಟನೆಗಳ ಬಳಿಕ ಮುಂದೇನು? ಎನ್ನುವ ಬಗ್ಗೆ ಮಾಹಿತಿ ಕಾರ್ಯಾಗಾರ ಮಾ. ೨ರಂದು ಉಪ್ಪಿನಂಗಡಿ ಶಾಂತಿ ಸೆಂಟರ್ ಸಭಾಂಗಣದಲ್ಲಿ ಜರಗಿತು.

ಕಾರ್ಯಾಗಾರದಲ್ಲಿ ಮಾನವ ಹಕ್ಕುಗಳ ಹೋರಾಟಗಾರ, ಅಂಕಣಕಾರ ಶಿವಸುಂದರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಬಿಜೆಪಿಯವರು ದಲಿತರು, ಮುಸ್ಲಿಮರು, ಹಿಂದುಳಿದ  ವರ್ಗದವರನ್ನು ದೂರ ಮಾಡಿ ಹೊರ ಹಾಕಿ ಮನುಸ್ಮೃತಿ ಭಾರತ ಮಾಡುವ ಯತ್ನದಲ್ಲಿ ವ್ಯವಸ್ಥೆಗಳನ್ನು ಮಾಡುತ್ತಾ ಇದ್ದಾರೆ, ಈ ಕಾಯ್ದೆಗಳ ಬಗ್ಗೆ ಸರ್ಕಾರಕ್ಕಾಗಲೀ, ಅಧಿಕಾರಿಗಳಿಗೂ ಸ್ಪಷ್ಠ ಮಾಹಿತಿ ಇಲ್ಲ, ಬರೇ ಸುಳ್ಳುಗಳನ್ನು ಹೇಳಿಕೊಂಡು ಮುಸ್ಲಿಂರಿಗೆ ಎದುರಿನಿಂದಲೂ, ಹಿಂದೂಗಳಿಗೆ ಹಿಂದಿನಿಂದಲೂ ಚೂರಿ ಹಾಕುವ ನಿಟ್ಟಿನಲ್ಲಿ ಸಾಗುತ್ತಿದೆ, ಈ ಬಗ್ಗೆ ಹಿಂದೂ ಬಾಂಧವರಿಗೆ ಇದರ ಮಾಹಿತಿ ನೀಡುವ ಕೆಲಸ ಆಗಬೇಕು, ಎಪ್ರಿಲ್ ೧೫ರ ಒಳಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾದ ಅಗತ್ಯ ಇದೆ ಎಂದರು.

ವಿ ಪೀಪಲ್ ಆಫ್ ಇಂಡಿಯಾ, ಕರ್ನಾಟಕ ಇದರ ದ.ಕ. ಜಿಲ್ಲಾ ಪ್ರತಿನಿಧಿ ಉಮರ್ ಯು.ಎಚ್. ಮಾತನಾಡಿ ನಾವುಗಳು ಯಾವತ್ತೂ ಸಿಎಎ ಬೇಡ ಎಂದು ಹೇಳಿಲ್ಲ, ಅದನ್ನು ವಿಸ್ತರಿಸಿ ಎಂದು ಹೇಳುತ್ತಿದ್ದೇವೆ, ಆದರೆ ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ, ಇದೀಗ ಎನ್‌ಪಿಆರ್., ಎನ್‌ಆರ್‌ಸಿ.ನಿಂದ ಆಗುವ ಸಮಸ್ಯೆಗಳ ಬಗ್ಗೆ ಕ್ರೈಸ್ತರಿಗೆ ಮನವರಿಕೆ ಆಗಿದೆ, ಶೇಕಡಾ ೧೦ರಷ್ಟು ಹಿಂದೂ ಬಾಂಧವರಿಗೂ ಮನವರಿಕೆ ಆಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಒಂದೇ ವೇದಿಕೆ ಅಡಿಯಲ್ಲಿ ಸೇರಿ ಪ್ರತಿಭಟಿಸಬೇಕಾಗುತ್ತದೆ, ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆ ವಹಿಸಿ ಮಾತನಾಡಿ ಎನ್‌ಪಿಆರ್., ಎನ್‌ಆರ್‌ಸಿ., ಸಿಎಎ. ಸಾಧಕ, ಬಾಧಕಗಳ ಬಗ್ಗೆ ಪ್ರತೀ ಗ್ರಾಮಗಳಲ್ಲಿ ಮಾಹಿತಿ ಕಾರ್ಯಾಗಾರ ನಡೆಸಬೇಕಾಗಿದೆ ಎಂದರು. ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆಯ ಝಕರಿಯಾ ಕೊಡಿಪ್ಪಾಡಿ ಸ್ವಾಗತಿಸಿ, ಜಲೀಲ್ ಮುಕ್ರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.