ರಾಮಕುಂಜ ಮಹಾವಿದ್ಯಾಲಯದಲ್ಲಿ ‘ಮಾತೃಭಾಷಾ ದಿವಸ’ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1


ರಾಮಕುಂಜ: ಯಾವುದೇ ರೀತಿಯ ಸುಧಾರಣೆ ಆಗಬೇಕಿದ್ದರೆ ಅದನ್ನು ನಾವೇ ಪ್ರಾರಂಭಿಸಬೇಕು. ಹಾಗೆ ಆಗಲು ನಮ್ಮಲ್ಲಿನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಅದು ನಮ್ಮಿಂದಲೇ ಆಗಬೇಕು ಎಂದು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಂಕೀರ್ತ್ ಹೆಬ್ಬಾರ್ ಹೇಳಿದರು.

ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಸರಕಾರದ ಆದೇಶದಂತೆ ನಡೆದ ಮಾತೃಭಾಷಾ ದಿವಸ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಯಾತ್ಮಕ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಡಾ.ಸಂಕೀರ್ತ್ ಹೆಬ್ಬಾರ್ ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ದ.ಕ.ಜಿಲ್ಲಾ ಕರ್ನಾಟಕ ಗಮಕ ಪರಿಷತ್ ಅಧ್ಯಕ್ಷ ಪ್ರೋ.ಮಧೂರು ಮೋಹನ ಕಲ್ಲೂರಾಯರು ಕನ್ನಡ ಭಾಷೆಯ ಸಮೃದ್ಧಿ, ವೈಶಾಲ್ಯತೆಯನ್ನು ತಿಳಿಸಿದರು. ವಿದ್ಯಾರ್ಥಿ ಯೋಗೀಶ ಕಾರ್ಯಕ್ರಮ ನಿರೂಪಿಸಿದರು. ಶೃತನ್ ಸ್ವಾಗತಿಸಿ ಶರಿಧಿ ವಂದಿಸಿದರು. ಅನುಷಾ, ಸೌಜನ್ಯ, ಮಹೇಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.