Breaking News

ಹಳೆನೇರೆಂಕಿ: ಮೇಲೂರು ಅಂಗನವಾಡಿ ಕಟ್ಟಡ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ರಾಮಕುಂಜ ಗ್ರಾಮಪಂಚಾಯತ್‌ನ ಎನ್‌ಆರ್‌ಇಜಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನಿರ್ಮಾಣಗೊಂಡ ಹಳೆನೇರೆಂಕಿ ಗ್ರಾಮದ ಮೇಲೂರು ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಹಾಗೂ ತಾ.ಪಂ.ಅನುದಾನದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ಸಿಟೌಟ್ ಇದರ ಉದ್ಘಾಟನೆ ಫೆ.೨೮ರಂದು ನಡೆಯಿತು.

ಸುಳ್ಯ ಶಾಸಕ ಎಸ್.ಅಂಗಾರವರು ಉದ್ಘಾಟಿಸಿ ಶುಭಹಾರೈಸಿದರು. ರಚನೆಗೊಂಡಿರುತ್ತದೆ. ತಾ.ಪಂ. ಸದಸ್ಯೆ ತೇಜಸ್ವಿನಿ ಕಟ್ಟಪುಣಿ , ರಾಮಕುಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಆರ್.ಕೆ, ಉಪಾಧ್ಯಕ್ಷೆ ಜಯಂತಿ ನಾಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಯೋಜನಾಧಿಕಾರಿ ಶ್ರೀಲತಾ, ಮೇಲ್ವಿಚಾರಕಿ ಸುಜಾತ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಸವಿತಾ, ರಾಮಕುಂಜ ಗ್ರಾ.ಪಂ. ಸದಸ್ಯರಾದ ಹೊನ್ನಪ್ಪ ಪೂಜಾರಿ ಕದ್ರ, ಲೀಲಾವತಿ ಪಿ.ಟಿ., ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಹಳೆ ವಿದ್ಯಾರ್ಥಿಗಳು ಟೇಬಲ್, ಕುರ್ಚಿಗಳು, ಗಡಿಯಾರ, ಸ್ಮರಣಿಕೆ ಇತ್ಯಾದಿ ಕೊಡುಗೆಗಳನ್ನು ನೀಡಿದರು. ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು. ಮೇಲ್ವಿಚಾರಕಿ ಹೇಮಾ ರಾಮ್‌ದಾಸ್ ಸ್ವಾಗತಿಸಿದರು. ಪಿ.ಡಿ.ಓ ಜೆರಾಲ್ಡ್ ಮಸ್ಕರೇನಸ್ ವಂದಿಸಿದರು. ಪುರುಷೋತ್ತಮ ಬರೆಂಬೆಟ್ಟು ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಪ್ರಫುಲ್ಲಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.