ವಳಕಡಮ: ಶ್ರೀ ದೇವಿ ಭಜನಾ ಮಂದಿರದ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ಕೊಯಿಲ ಗ್ರಾಮದ ವಳಕಡಮ ಶ್ರೀದೇವಿ ಭಜನಾ ಮಂದಿರದ ೧೬ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಗಣಪತಿ ಹೋಮ ಫೆ.೨೨ರಂದು ನಡೆಯಿತು.

ಬೆಳಿಗ್ಗೆ ಗಣಹೋಮ ಹಾಗೂ ಸಂಜೆ ವೇದಮೂರ್ತಿ ವೆಂಕಟ್ರಮಣ ಕುದ್ರೆತ್ತಾಯರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ ಶೆಟ್ಟಿ ಕಡಬರವರು, ಸೇವತ್ವದೆಡೆಗೆ ವ್ಯಕ್ತಿತ್ವ ನಿರ್ಮಾಣ ಮಾಡಲು ಕಲಿಯುಗದಲ್ಲಿ ಭಜನೆಯೆ ಉತ್ತಮವಾದ ಮಾಧ್ಯಮ ಭಜನೆ ಇದ್ದಲ್ಲಿ ವಿಭಜನೆ ಇಲ್ಲ, ಸತ್ಯ, ಧರ್ಮ, ನಿಷ್ಠೆಯಿಂದ ಬಾಳಿ ಬದುಕುವುದಕ್ಕೆ ಭಜನಾ ಮಂಡಳಿಗಳ ಪಾಲು ಅಧಿಕವಾಗಿದೆ ಎಂದರು. ಪುತ್ತೂರು ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಲೋಕೇಶ್ ಬೆತ್ತೋಡಿ ಶುಭಹಾರೈಸಿದರು. ಭಜನಾ ಪರಿಷತ್‌ನ ಗೌರವಾಧ್ಯಕ್ಷ ಧನ್ಯಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಭಾರತಾಂಬೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಿಂದೂ ಜಾಗರಣಾ ವೇದಿಕೆಯ ನೂತನ ಪದಾಧಿಕಾರಿಗಳಿಗೆ ಶಾಲು ತೋಡಿಸುವುದರ ಮೂಲಕ ಜವಾಬ್ದಾರಿಯನ್ನು ನೀಡಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತದಾರರಿಗೆ ಬಹುಮಾನ ವಿತರಣೆಯಾಯಿತು. ಉಮಣ ಗೌಡ ವಳಕಡಮ, ಭಜನಾ ಮಂದಿರದ ಗೌರವಾಧ್ಯಕ್ಷ ನೀಲಯ್ಯ ಗೌಡ ದರ್ಖಾಸು, ಅಧ್ಯಕ್ಷ ಮನೋಹರ ಬಲ್ತಕುಮೇರು, ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟ್ರಮಣ ಕುತ್ಯಾಡಿ, ಮೋಹನ ಕೊಲ, ರವೀಂದ್ರ ಹಾಗೂ ಹಿಂಜಾವೇ ವಳಕಡಮ ಘಟಕದ ಅಧ್ಯಕ್ಷ ದಿನೇಶ್ ಗೌಡ ಊರಾಜೆ, ಉಪಾಧ್ಯಕ್ಷ ಆನಂದ ಕಟ್ಟ, ಚೇತನ್ ಗೌಡ, ನಿಧಿ ಘಟಕರು, ಪ್ರಧಾನ ಕಾರ್ಯದರ್ಶಿ ತೇಜಶ್ ಗೌಡ ಊರಾಜೆ, ಜೊತೆಕಾರ್ಯದರ್ಶಿಗಳಾದ ಸೋವಿತ್ ಯು, ಧನಂಜಯ ಬಿರ್ಮಿಜಾಲ್, ನಾಣ್ಯಪ್ಪ ಕರೆಂಡೇಲ್, ಭುವನೇಶ್ ದರ್ಖಾಸ್ ಉಪಸ್ಥಿತರಿದ್ದರು.


ಹಿಂದೂ ಜಾಗರಣಾ ವೇದಿಕೆ ವಳಕಡಮ ಘಟಕದ ಗೌರವಾಧ್ಯಕ್ಷ ಶೀನಪ್ಪ ಯು., ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಕೃಷಿ ಅಧಿಕಾರಿ ಉಮೇಶ್ ಬಿ, ನಿರೂಪಿಸಿದರು. ಭಜನಾ ಮಂದಿರದ ಕೋಶಾಧಿಕಾರಿ ಹರೀಂದ್ರ.ಪಿ, ವಂದಿಸಿದರು. ಭಜನಾ ಕಾರ್ಯಕ್ರಮ, ಅಂಗನವಾಡಿ ಮಕ್ಕಳು, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ೮೦೦ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.