ಕಾಣಿಯೂರು ಕೂಡುರಸ್ತೆ ಜನತಾ ಕಾಲೋನಿಯ ಕಾಂಕ್ರೀಟಿಕರಣ ರಸ್ತೆ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

  • ಕಾಣಿಯೂರಿನ ಸಮಗ್ರ ಅಭಿವೃದ್ಧಿಗಾಗಿ ಜಿ.ಪಂ,ನಿಂದ ರೂ 55 ಲಕ್ಷ ಅನುದಾನ- ಪ್ರಮೀಳಾ ಜನಾರ್ದನ


ಕಾಣಿಯೂರು: ಗ್ರಾಮೀಣ ಭಾಗದ ರಸ್ತೆಗಳು ಧೂಳು ರಹಿತವಾಗಿ ಪಕ್ಕ ರಸ್ತೆಯಾಗಿ ಜನ ಸಂಚಾರಕ್ಕೆ ಅನುಕೂಲವಾಗಬೇಕೆಂಬುದು ನಮ್ಮ ಆಶಯ. ಈ ರಸ್ತೆ ಅಭಿವೃದ್ಧಿಯಾಗಬೇಕೆಂಬ ಬಹುಕಾಲದ ಬೇಡಿಕೆ ಆಗಿತ್ತು. ಜಿಲ್ಲಾ ಪಂಚಾಯತಿಗೆ ಅನುದಾನದ ಕೊರತೆ ಇದ್ದರೂ ಸಹ ಈ ವಾರ್ಡ್‌ಗೆ ಸಂಬಂಧ ಪಟ್ಟ ಹಾಗೆ ಜಿಲ್ಲಾ ಪಂಚಾಯತ್‌ನಿಂದ ಸುಮಾರು ರೂ ೫೫ಲಕ್ಷದಷ್ಟು ಅನುದಾನದ ಕಾಮಗಾರಿಗಳು ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ನಡೆದಿದೆ ಎಂದು ಬೆಳಂದೂರು ಕ್ಷೇತ್ರದ ಜಿ.ಪಂ ಸದಸ್ಯರಾದ ಪ್ರಮೀಳಾ ಜನಾರ್ದನ ಹೇಳಿದರು. ಅವರು ಕಾಣಿಯೂರು ಗ್ರಾಮದ ಕೂಡುರಸ್ತೆ ಜನತಾ ಕಾಲೋನಿ ರಸ್ತೆಗೆ ಜಿ.ಪಂ, ಅನುದಾನ ರೂ ೩.೬೦ಲಕ್ಷ ಹಾಗೂ ಗ್ರಾ.ಪಂ, ರೂ ೧.೬೦ ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆಯನ್ನು ಮಾ ೩ರಂದು ಉದ್ಘಾಟಿಸಿ ಮಾತನಾಡಿದರು. ಕಾಣಿಯೂರು ಪೇಟೆಯು ಐದಾರು ಗ್ರಾಮಗಳ ಮೂಲಭೂತ ಅವಶ್ಯಕತೆಗಳ ಸಂಪರ್ಕ ಕೇಂದ್ರವು ಆಗಿದೆ. ಮುಂದಿನ ದಿವಸಗಳಲ್ಲಿ ಅಭಿವೃದ್ಧಿಯಾಗಬೇಕಾದ ನಿಟ್ಟಿನಲ್ಲಿ ಇನ್ನಷ್ಟು ಅನುದಾನಗಳನ್ನು ಭರಿಸುವ ಪ್ರಯತ್ನಗಳನ್ನು ಮಾಡಲಾಗುವುದು. ನಮ್ಮ ರಸ್ತೆ ನನ್ನ ರಸ್ತೆ ಎಂಬ ಅಭಿಮಾನದಿಂದ ಸಂರಕ್ಷಿಸಿಕೊಂಡು ಬಳಸಬೇಕೆಂದರು. ಕಾಣಿಯೂರು ಗ್ರಾ.ಪಂ, ಅಧ್ಯಕ್ಷರಾದ ಮಾಧವಿ ಕೋಡಂದೂರು ಮಾತನಾಡಿ, ಅಭಿವೃದ್ಧಿಯ ವಿಚಾರದಲ್ಲಿ ನಾವೆಲ್ಲಾ ಒಟ್ಟಾಗಿ ಸಾಗಬೇಕಾಗಿದೆ. ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ನಿಂದ ಒಟ್ಟಾಗಿ ಅನುದಾನಗಳು ಬಂದಾಗ ವೇಗವಾಗಿ ಅಭಿವೃದ್ಧಿಗೊಳ್ಳುತ್ತದೆ. ಈ ರಸ್ತೆಯನ್ನು ಸುಂದರವಾಗಿಟ್ಟು ಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯರು, ಗ್ರಾ.ಪಂ, ಸದಸ್ಯ ಗಣೇಶ್ ಉದುನಡ್ಕ, ಗ್ರಾ.ಪಂ, ಸದಸ್ಯೆ ಲಲಿತಾ ತೋಟ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎನ್.ಯು, ಕಾಣಿಯೂರು ಬಿಜೆಪಿ ಬೂತ್ ಸಮಿತಿ ಮಾಜಿ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರ್ಮೇಂದ್ರ ಗೌಡ ಕಟ್ಟತ್ತಾರು, ಕಾಣಿಯೂರು ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ಸುರೇಶ್ ಬಂಡಾಜೆ, ಹಮೀದ್ ಕೂಡುರಸ್ತೆ, ಹಸೈನರ್ ಕೂಡುರಸ್ತೆ, ಪರಮೇಶ್ವರ ಗೌಡ ಎಂ.ಪಿ ಮುಗರಂಜ, ಪ್ರಸಾದ್ ಮುಗರಂಜ, ಆನಂದ ಪೂಜಾರಿ ಕೂಡುರಸ್ತೆ, ಸೀತಾರಾಮ ಗೌಡ ಕೂಡುರಸ್ತೆ, ಮನೋಜ್ ಕುಮಾರ್ ಕೂಡುರಸ್ತೆ, ಸೆಫಿಯಾ ಕೂಡುರಸ್ತೆ, ನೆಬಿಸ ಕೂಡುರಸ್ತೆ, ಜನಾರ್ದನ ಗೌಡ ಕೂಡುರಸ್ತೆ, ಅಲೀಮಾ ಕೂಡುರಸ್ತೆ, ಮಂಜುನಾಥ ಕೂಡುರಸ್ತೆ, ಹನೀಫ್ ಕೂಡುರಸ್ತೆ, ಜಮೀಲ ಕೂಡುರಸ್ತೆ, ಸೇಕಿನಾ ಕೂಡುರಸ್ತೆ, ಪ್ರವೀಣ ಕೂಡುರಸ್ತೆ, ಸಮೀರ್ ಕೂಡುರಸ್ತೆ, ಜಾಬೀರ್ ಕೂಡುರಸ್ತೆ, ಸಿರಾಜ್ ಕೂಡುರಸ್ತೆ, ಅಸ್ಪದ್ ಕೂಡುರಸ್ತೆ, ಸಿದ್ದಿಕ್ ಕೂಡುರಸ್ತೆ, ಸಮದ್ ಕೂಡುರಸ್ತೆ, ಬಿಲಾಲ್ ಕೂಡುರಸ್ತೆ, ನಾಸಿರ್ ಕೂಡುರಸ್ತೆ, ಹನೀಫ್ ಬೆದ್ರಾಜೆ, ಆದಂ ಕುಂಞ ಕೂಡುರಸ್ತೆ, ಕೃಷ್ಣ ಚೆಟ್ಟಿಯಾರ್ ಮುಗರಂಜ, ಪ್ರಶಾಂತ್ ಮುಗರಂಜ, ಕಮಲಾಕ್ಷಿ ಕೂಡುರಸ್ತೆ, ಅಬ್ದುಲ್ ರಹಿಮಾನ್ ಬೆದ್ರಾಜೆ, ಮಜೀದ್ ಬೆದ್ರಾಜೆ, ಸುಲೈಮಾನ್ ಬೆದ್ರಾಜೆ, ಶರೀಫ್ ಬೆದ್ರಾಜೆ, ರಫಿಕ್ ಬೆದ್ರಾಜೆ, ಮೋಹಿನಿ ಕೂಡುರಸ್ತೆ, ನಝೀರ್ ಕೂಡುರಸ್ತೆ, ಉಷಾ ಮುಗರಂಜ, ಸದಾನಂದ ಕೂಡುರಸ್ತೆ, ಚಂದ್ರ ಕಾಣಿಯೂರು, ತಿಮ್ಮಪ್ಪ ಗೌಡ ಕಟ್ಟತ್ತಾರು, ಸಕೀರ್ ಕೂಡುರಸ್ತೆ, ಜಾಹೀರ್ ಸುಳ್ಯ, ಬಶೀರ್ ಕೂಡುರಸ್ತೆ, ಸಿರಾಜ್ ಬೆದ್ರಾಜೆ ಮತ್ತೀತರರು ಉಪಸ್ಥಿತರಿದ್ದರು. ಕಾಣಿಯೂರು ಗ್ರಾ.ಪಂ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿ, ಸುರೇಶ್ ಓಡಬಾಯಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.