ಕೌಕ್ರಾಡಿ: ನೆರೆಹೊರೆ ಯುವ-ಸಂಸತ್ತು ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಯುವಕಾರ್ಯ ಮತ್ತು ಕ್ರೀಡಾ ಸಚಿವಾಯಲ ನೆಹರು ಯುವ ಕೇಂದ್ರ ಮಂಗಳೂರು, ಶ್ರೀ ಆದಿಶಕ್ತಿ ಮಹಿಳಾ ಮಂಡಲ ಕೌಕ್ರಾಡಿ ಮತ್ತು ಸ್ವಸಹಾಯ ಸಂಘ ಕೌಕ್ರಾಡಿ ಇದರ ಆಶ್ರಯದಲ್ಲಿ ‘ನೆರೆಹೊರೆ-ಯುವ ಸಂಸತ್ತು’ ಕಾರ್‍ಯಕ್ರಮ ಫೆ.೨೯ರಂದು ಕೌಕ್ರಾಡಿ ಮಾದರಿ ಗ್ರಾಮ ವಿಕಾಸ ಕೇಂದ್ರದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳಾ ಸಂಘಟನೆಗಳು ಸಮಾಜಕ್ಕೆ ಹಿತಕಾರಿಯಾದ ಕೆಲಸಗಳನ್ನು ಕೈಗೊಂಡು ಮುಂದುವರೆದಲ್ಲಿ ಆ ಗ್ರಾಮದ ಅಭಿವೃದ್ದಿಯಾಗಲು ಸಾಧ್ಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಎಂ.ಕೆ.ಇಬ್ರಾಹಿಂರವರು ಮಾತನಾಡಿ, ಮಹಿಳೆ ಒಂದು ಕುಟುಂಬದ ಹಾಗೂ ಸಮಾಜದ ಅಭಿವೃದ್ದಿಯ ಸಂಕೇತವಾಗಿದ್ದಾಳೆ. ಮಹಿಳೆಯರಿಗೆ ಮಾಹಿತಿ ಸಿಕ್ಕಾಗ ಸಮಾಜ ಉನ್ನತ ರೀತಿಯಲ್ಲಿ ಮುನ್ನಡೆಯಲು ಸಾಧ್ಯವಿದೆ ಎಂದರು. ಅತಿಥಿಗಳಾಗಿದ್ದ ದ.ಕ.ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳರವರು ಶುಭಹಾರೈಸಿದರು. ತಾಲೂಕು ಕ್ರೀಡಾ ಸಂಯೋಜಕ ಆದೇಶ ಶೆಟ್ಟಿಯವರು ನೆಹರು ಯುವ ಕೇಂದ್ರದಿಂದ ಸಿಗುವ ಸೌಲಭ್ಯದ ಬಗ್ಗೆ ತಿಳಿಸಿದರು.

ಬಳಿಕ ವಿವಿಧ ಗೋಷ್ಠಿಗಳು ನಡೆಯಿತು. ‘ಹೆಣ್ಣು ಮಗುವನ್ನು ರಕ್ಷಿಸಿ- ಹೆಣ್ಣು ಮಗುವನ್ನು ಓದಿಸಿ’ ಕುರಿತು ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಉಮಾವತಿ ಕೆ., ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ಯುವ ಜನತೆಗೆ ಇರಬೇಕಾದ ಅರಿವು ಕುರಿತು ನ್ಯಾಯವಾದಿ ಝುಬೈದಾ ಸರಳೀಕಟ್ಟೆ ಹಾಗೂ ಯುವ ಸಬಲೀಕರಣ ಮತ್ತು ಜೀವನ ಕೌಶಲ್ಯದ ಕುರಿತು ಶ್ರೀಕಾಂತ್ ಬಿರಾವುರವರು ಮಾಹಿತಿ ನೀಡಿದರು. ಸುಮನಾ ಎಸ್., ಪ್ರಾರ್ಥಿಸಿದರು. ಸುವರ್ಣಲತಾ ಸ್ವಾಗತಿಸಿದರು. ಹೇಮಾವತಿ ಜೆ., ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಎಸ್., ವಂದಿಸಿದರು. ರಜನಿ ಬಿ., ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.