ಶಿವಳ್ಳಿ ಸಂಪದ ನರಿಮೊಗರು ವಲಯದ 25ನೇ ವರ್ಷಾಚರಣೆ `ಶಿವಳ್ಳಿ ರಜತ ಕಲರವ’

Puttur_Advt_NewsUnder_1
Puttur_Advt_NewsUnder_1
  • ಗೌರವಾರ್ಪಣೆ-ಸಾಧಕರಿಗೆ ಸನ್ಮಾನ-ಸಭಾ ಕಾರ್ಯಕ್ರಮ

ಪುತ್ತೂರು: ಶಿವಳ್ಳಿ ಸಂಪದ ನರಿಮೊಗರು ವಲಯದ ೨೫ನೇ ವರ್ಷಾಚರಣೆ `ಶಿವಳ್ಳಿ ರಜತ ಕಲರವ’ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಫೆ.೨೯ರಂದು ನಡೆಯಿತು. ವಲಯದ ಗೌರವಾಧ್ಯಕ್ಷ ಜಯರಾಮ ಕೆದಿಲಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ವಲಯದ ಹಿರಿ-ಕಿರಿ ಪ್ರತಿಭೆಗಳಿಂದ ವಿವಿಧ ರೀತಿಯ ಕಾರ್ಯಕ್ರಮ ನಡೆಯಿತು. ಸಂಜೆ ವಲಯ ಅಧ್ಯಕ್ಷ ರಾಧಾಕೃಷ್ಣ ಪುತ್ತೂರಾಯರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ವಲಯದ ಮಾಜಿ ಅಧ್ಯಕ್ಷರುಗಳನ್ನು ಮತ್ತು ಮಹಿಳಾ ಸಂಪದದ ಮಾಜಿ ಅಧ್ಯಕ್ಷೆಯರನ್ನು ಗೌರವಿಸಲಾಯಿತು. ಇತ್ತೀಚೆಗೆ ಇಂಜಿನಿಯರಿಂಗ್ ಪದವಿಯಲ್ಲಿ ಆರು ಚಿನ್ನದ ಪದಕವನ್ನು ಪಡೆದ ಕುಮಾರಿ ಸಿಂಧೂರ ಸರಸ್ವತಿ ಮತ್ತು ೨೦೧೮-೧೯ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಸಿಂಚನ ಲಕ್ಷ್ಮಿಯನ್ನು ಗೌರವಿಸಲಾಯಿತು. ಅತಿಥಿಗಳಾಗಿ ಜಿಲ್ಲಾ ತುಳು ಶಿವಳ್ಳಿ ಮಹಾಸಭಾದ ಕಾರ್ಯದರ್ಶಿ ಪ್ರಕಾಶ್ ಮೂಡಿತ್ತಾಯರು ಪಾಲ್ಗೊಂಡು ಸಂಘದ ಚಟುವಟಿಕೆಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯ ಅಗತ್ಯತೆಯನ್ನು ವಿವರಿಸಿದರು. ಇನ್ನೋರ್ವ ಅತಿಥಿ ತಾಲೂಕು ಶಿವಳ್ಳಿ ಸಂಪದದ ಅಧ್ಯಕ್ಷ ಹರೀಶ್ ಪುತ್ತೂರಾಯರು ಸಂಘದ ಮುಂದಿನ ಕಾರ್ಯಚಟುವಟಿಕೆಯ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ವಲಯದ ಗೌರವಾಧ್ಯಕ್ಷ ಜಯರಾಮ ಕೆದಿಲಾಯ, ತಾಲೂಕು ಸಂಪದದ ಪ್ರ.ಕಾರ್ಯದರ್ಶಿ ಕೃಷ್ಣಪ್ರಸಾದ ಕೆದಿಲಾಯ, ವಲಯ ಮಹಿಳಾ ಸಂಪದದ ಅಧ್ಯಕ್ಷೆ ಶ್ರೀಮತಿ ಜಯಮಾಲಾ ವಿ.ಎನ್, ವಲಯದ ಕಾರ್ಯದರ್ಶಿ ಪ್ರಕಾಶ್ ಕೊಡಂಕಿರಿ ಉಪಸ್ಥಿತರಿದ್ದರು. ಸಂಪದದ ನಿರ್ದೇಶಕ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಮತ್ತು ಸಂಪದದ ಉಪಾಧ್ಯಕ್ಷ ಸುಧೀರ್ ಕೃಷ್ಣ ಪಡಿಲ್ಲಾಯ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.