ಕುಂತೂರು: ಶಾರದಾ ಶಿಶುಮಂದಿರದ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

ಪೆರಾಬೆ: ಕುಂತೂರು ಶ್ರೀ ಶಾರದಾ ಶಿಶುಮಂದಿರದ ವಾರ್ಷಿಕೋತ್ಸವ ಸಮಾರಂಭ ಮಾ.೨ರಂದು ಸಂಜೆ ನಡೆಯಿತು. ಸಂಜೆ ದೀಪ ಪ್ರಜ್ವಲನೆಯೊಂದಿಗೆ ಶಿಶು ಮಂದಿರ ಮತ್ತು ಬಾಲಗೋಕುಲದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕರವರು, ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಮಾತೃ ಭಾಷೆ ಶಿಕ್ಷಣ ಸಿಗಬೇಕು. ಮಕ್ಕಳಿಗೆ ಅಮ್ಮಂದಿರು ಸಂಸ್ಕಾರ ಕಲಿಸಿ ಕೊಡಬೇಕು, ಜೀವನ ಮೌಲ್ಯವನ್ನು ಉಳಿಸುವುದರೊಂದಿಗೆ ಹಿಂದೂ ಸಮಾಜ ಉಳಿವಿಗಾಗಿ ಶಿಶು ಮಂದಿರ ಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಉಡುಪಿ ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಹೆಬ್ಬಾರ್‌ರವರು ಶಿಶುಮಂದಿರಕ್ಕೆ ಜಾರುಬಂಡಿ ಕೊಡುಗೆಯಾಗಿ ನೀಡಿ ಶುಭ ಹಾರೈಸಿದರು. ಇನ್ನೋರ್ವ ಅತಿಥಿ ಮಂಗಳೂರು ಇನ್ಸೀಡ್ ಟೆಕ್ನಾಲಜೀಸ್ ಸಾಫ್ಟ್‌ವೇರ್ ಕಂಪನಿಯ ಅರ್ಜುನ್ ಅಜಿಲರವರು ೨೫ ಸಾವಿರ ರೂ., ಮೌಲ್ಯದ ಘಟಕ ಯಂತ್ರ ಕೊಡುಗೆಯಾಗಿ ನೀಡಿ ಶುಭ ಹಾರೈಸಿದರು. ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಅಮರ ವಾತ್ಸಲ್ಯ ಕೆ.ಎಸ್.,ರವರು ಸಂದರ್ಭೋಚಿತವಾಗಿ ಮಾತನಾಡಿದರು.

ವಿದ್ಯಾಭಾರತಿ ಕರ್ನಾಟಕ ಪ್ರಾಂತ ನೈತಿಕ, ಆಧ್ಯಾತ್ಮಿಕ ಶಿಕ್ಷಣ ಪ್ರಮುಖ ವೆಂಕಟ್ರಮಣ ರಾವ್ ಮಂಕುಡೆ, ಆಲಂಕಾರು ಶ್ರೀ ಭಾರತಿ ಶಾಲೆಯ ರಜತ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಖಜಾಂಜಿ ಯಮುನಾ ಎಸ್ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಕಾರಯುತ ಬಾಲ್ಯ ಶಿಕ್ಷಣ ನೀಡುವ ಉದ್ದೇಶದಿಂದ ೨೦೧೨ರ ಜೂನ್‌ನಲ್ಲಿ ಶಾರದಾ ಶಿಶು ಮಂದಿರ ಆರಂಭಗೊಂಡಿತ್ತು. ೧೨ ಮಂದಿ ಮಹಿಳಾ ಸದಸ್ಯರ ಸಮಿತಿ ರಚನೆ ಮಾಡಿ ನಾಲ್ಕು ವರ್ಷ ಹವ್ಯಕ ಸಭಾಭವನದಲ್ಲಿ ಶಿಶುಮಂದಿರ ನಡೆಸಲಾಗಿದೆ. ದಿ.ನಾರಾಯಣ ಭಟ್‌ರವರು ಶಿಶು ಮಂದಿರಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗ ದಾನ ಮಾಡಿದ್ದಾರೆ. ಶಿಶು ಮಂದಿರದ ಅಭಿವೃದ್ಧಿಗೆ ದಾನಿಗಳು ಸಹಕಾರ ನೀಡಬೇಕೆಂದು ಹೇಳಿದರು. ಆಟೋಟ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷೆ ಮಧುಶ್ರೀ ಅಗತ್ತಾಡಿ ಸ್ವಾಗತಿಸಿದರು. ಉಷಾ ಮಾತಾಜಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮಾತೃಮಂಡಳಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಆಡಳಿತ ಮಂಡಳಿ ಕಾರ್ಯದರ್ಶಿ ಚೇತನಾ ಯನ್., ಸದಸ್ಯರು, ಊರಿನ ಪ್ರಮುಖರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.