Breaking News

ಉಪ್ಪಿನಂಗಡಿ-ಆರ್ತಿಲದಲ್ಲಿ ವಿದ್ಯುತ್ ಸ್ಥಾವರ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಆರ್ತಿಲ ಭಾಗದಲ್ಲಿನ ರೈತರು ಬಹುಕಾಲದಿಂದ ವಿದ್ಯುತ್ ಲೋ-ಓಲ್ಟೇಜ್ ಸಮಸ್ಯೆ ಎದುರಿಸುತ್ತಿದ್ದು, ಈ ಸಲುವಾಗಿ ಬಹುಕಾಲದ ಬೇಡಿಕೆಯಾಗಿದ್ದ ವಿದ್ಯುತ್ ಸ್ಥಾವರ ಫೆ. 28ರಂದು ಉದ್ಘಾಟನೆಗೊಂಡಿತು.

ನೂತನ ವಿದ್ಯುತ್ ಸ್ಥಾವರವನ್ನು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಿ. ಕೃಷ್ಣ ರಾವ್ ಅರ್ತಿಲ ತೆಂಗಿನಕಾಯಿ ಒಡೆಯುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಭಾಗದ ರೈತರ ವಿದ್ಯುತ್ ಸಮಸ್ಯೆ ತೀರಾ ಬಿಗಡಾಯಿಸಿತ್ತು. ನಮ್ಮ ಮನವಿ, ಬೇಡಿಕೆಗೆ ಸ್ಪಂಧಿಸಿ ಸ್ಥಾಪಿಸುವಲ್ಲಿ ಸಹಕರಿಸಿದ ಪುತ್ತೂರು ಮೆಸ್ಕಾಂ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ನರಸಿಂಹ, ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ ಶಿಲ್ಪಾ ಶೆಟ್ಟಿ ಮತ್ತು ಸಹಾಯಕ ಇಂಜಿನಿಯರ್ ರಾಜೇಶ್ ಇವರುಗಳಿಗೆ ಈ ಭಾಗದ ರೈತರು ಅಭಾರಿ ಆಗಿದ್ದಾರೆ ಎಂದರು.

ಉಪ್ಪಿನಂಗಡಿ ಮೆಸ್ಕಾಂ ಸಹಾಯಕ ಇಂಜಿನಿಯರ್ ರಾಜೇಶ್, ಪವರ್‌ಮೆನ್‌ಗಳಾದ ಭೀಮಣ್ಣ ಮತ್ತು ಭವಿತ್ ಚಾಲನೆ ನೀಡಿದರು. ಪುತ್ತೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಜಿ.ಬಾಲಸುಬ್ರಹ್ಮಣ್ಯ ಹೊಳ್ಳ ಅರ್ತಿಲ, ಸುರೇಶ್ ಶೆಟ್ಟಿ ಪಾದಾಳ, ಬಾಲಕೃಷ್ಣ ಶೆಟ್ಟಿ ಪಾದಾಳ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.