ಎಸ್‌ಎಮ್‌ಎ ಆಲರ್ಟ್ 2020 ರೀಜಿನಲ್ ಲೀಡರ್ಸ್ ಮೀಟ್

Puttur_Advt_NewsUnder_1
Puttur_Advt_NewsUnder_1

ಕಡಬ: ಸುನ್ನೀ ಮ್ಯಾನೆಂಜ್‌ಮೆಂಟ್ ಅಸೋಸಿಯೇಶನ್ ಕಡಬ ರೀಜನಲ್ ಇದರ ವತಿಯಿಂದ ಎಸ್‌ಎಮ್‌ಎ ಆಲರ್ಟ್ ೨೦೨೦ ಲೀಡರ್ಸ್ ಮೀಟ್ ಕಾರ್ಯಕ್ರಮ ಮಾ. ೩ರಂದು ಅಡ್ಡಗದ್ದೆ ಅಲ್‌ಮದೀನಾ ಮಸೀದಿ ಸಭಾಂಗಣದಲ್ಲಿ ಎಸ್‌ಎಮ್‌ಎ ಕಡಬ ರೀಜಿನಲ್ ಅಧ್ಯಕ್ಷರಾದ ಖಾದರ್ ಸಾಹೇಬ್ ಕಲ್ಲುಗುಡ್ಡೆರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್‌ಎಮ್‌ಎ ಜಿಲ್ಲಾಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಕೊಡುಂಗೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯದಾದ್ಯಂತ ಕೋಟಿಗೂ ಮೀರಿದ ನಮ್ಮ ಸಮುದಾಯದಲ್ಲಿ ೪೦ಲಕ್ಷಕ್ಕೂ ಮೀರಿದ ಮಕ್ಕಳಿದ್ದು ಮದರಸ ವಿದ್ಯಾಭ್ಯಾಸದೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತುನೀಡಬೇಕಾದ ನಾವು ಎಸ್‌ಎಮ್‌ಎ ಮೂಲಕ ಪ್ರತಿ ಮೊಹಲ್ಲಾಗಳನ್ನು ಸಂದರ್ಶಿಸಿ ಅಲ್ಲಿಯ ಸಮಸ್ಯೆಗಳನ್ನರಿತು ಮೊಹಲ್ಲಾಗಳಲ್ಲಿ ಚರ್ಚಿಸುವ ಮೂಲಕ ಮದರಸಗಳ ಪ್ರಗತಿಗೆ ಸಹಕರಿಸಬೇಕಾಗಿದೆ ಎಂದರು. ನಮ್ಮ ಜಿಲ್ಲೆಯಾದ್ಯಂತ ಪ್ರತಿ ಮೊಹಲ್ಲಾಗಳಲ್ಲಿ ಎಸ್‌ಎಮ್‌ಎ ಆಲರ್ಟ್ ಕಾರ್ಯಕ್ರಮವು ಯಶಸ್ವಿಯಾಗಿದ್ದು ಮುಂದೆ ಜಿಲ್ಲೆಯಲ್ಲಿ ಸಮಾವೇಶ ಕಾರ್ಯಕ್ರಮ ನಡೆಯಲಿದ್ದು ಪ್ರತಿ ಎಸ್‌ಎಮ್‌ಎ ರೀಜನಲ್ ,ಝೋನಲ್ ಮಟ್ಟದ ಪದಾಧಿಕಾರಿಗಳು , ಸದಸ್ಯರು, ಮೊಹಲ್ಲಾ ಪ್ರತಿನಿಧಿಗಳು ಭಾಗವಹಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಆಗಮಿಸಿದ ಎಸ್‌ಎಮ್‌ಎ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್, ಎಮ್, ಅಬ್ದುಲ್‌ರಹ್ಮಾನ್ ಮದನಿ ಜೆಪ್ಪುರವರು ದುಃವಾ ಪ್ರಾರ್ಥನೆ ಗೈದು ಮಾರ್ಗದರ್ಶನ ಗೈದ ಅವರು ಸಾಂಘಿಕ ಹಾಗೂ ಅಧ್ಯಾತ್ಮಿಕ ತರಗತಿ ನಡೆಸಿಕೊಟ್ಟು ಸಬಿಕರ ಮನಮುಟ್ಟುವಂತೆ ವಿಷಯ ಮಂಡಿಸಿ ಪ್ರತಿ ಮೊಹಲ್ಲಾ ಸಮಿತಿಗಳನ್ನು ಸಕ್ರಿಯವಾಗುವುದರ ಮೂಲಕ ಮದರಸ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು, ಪ್ರತಿ ಮೊಹಲ್ಲಾ ಸಮಿತಿಯವರು ತಮ್ಮ ಜವಾಬ್ದಾರಿಯನ್ನರಿತು ಜಮಾಅತಿನ ಉನ್ನತಿಗಾಗಿ ಪ್ರವರ್ತಿಸುವಂತೆ ಕಿವಿಮಾತು ಹೇಳಿದರಲ್ಲದೆ ಪ್ರತಿ ಮೊಹಲ್ಲಾದ ಕಾರ್ಯವೈಖರಿ ಬಗ್ಗೆ ಗಮನಹರಿಸುವ ಮೂಲಕ ಎಸ್‌ಎಮ್‌ಎ ಆಲರ್ಟ್ ಆಗಿರಬೇಕೆಂದು ತಿಳಿಸಿದರು.

ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿ ಎಸ್‌ಎಮ್‌ಎ ಕಡಬ ರೀಜಿನಲ್ ಅಧ್ಯಕ್ಷ ಖಾದರ್ ಸಾಹೇಬ್ ಕಲ್ಲುಗುಡ್ಡೆ ಈವರೇಗಿನ ನಮ್ಮ ಉಮರಾ-ಉಲಮಾಗಳ ಜೀವನ ಮಟ್ಟ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು ಮುಂದಿನ ಜೀವನ ಶ್ರಮ ಜೀವನವಾಗಿದೆ, ನಾವು ನಮ್ಮ ಧರ್ಮ ಸಹಿಷ್ಣತೆಯಿಂದ ನಿಸ್ವಾರ್ಥಿಗಳಾಗಿ ಸತ್ಯ -ನಿಷ್ಠೆಯಿಂದ ಜೀವಿಸುವುದರೊಂದಿಗೆ ನಮ್ಮ ಮಕ್ಕಳಿಗೆ ಸನ್ಮಾರ್ಗದ ಅರಿವು ಮೂಡಿಸಬೇಕೆಂದ ಅವರು ಎಸ್‌ಎಮ್‌ಎ ಬಗ್ಗೆ ಪ್ರತೀ ಜಮಾಅತ್ ವ್ಯಾಪ್ತಿಯಲ್ಲಿ ಜಮಾಅತಿಗೆ ಒಳಪಟ್ಟ ಮದರಸ ವ್ಯಾಪ್ತಿಯಲ್ಲಿ ಅರಿವು ಮೂಡಿಸುವುದರೊಂದಿಗೆ ಎಸ್‌ಎಮ್‌ಎಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಪ್ರತಿ ಮೊಹಲ್ಲಾದವರು ಅರಿತುಕೊಂಡು ತಮ್ಮ ಸಹಭಾಗಿತ್ವವನ್ನು ತೊಡಗಿಸಿಕೊಳ್ಳಬೇಕೆಂದರು.

ಎಸ್‌ಎಮ್‌ಎ ಬೆಳ್ಳಾರೆ ಝೋನಾಲ್ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. , ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಅಧ್ಯಕ್ಷ ಹಾಜಿ ಸೈಯದ್ ಮೀರಾಸಾಹೇಬ್, ಕಡಬ ಸೆಕ್ಟರ್‌ನ ಎಸ್‌ವೈಎಸ್ ಮಾಜಿ ಅಧ್ಯಕ್ಷ ಇಲಿಯಾಸ್ ಮದನಿ ಕೋಡಿಂಬಾಳ, ಶುಭಹಾರೈಸಿದರು.

ಕೋಡಿಂಬಾಳ ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಕಡಬ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಮುಹಮ್ಮದ್ ಫಾರೂಕ್ ಹಿಮಾಮಿ ಸಖಾಫಿ, ಕಡಬ ರೀಜನಲ್ ಉಪಾಧ್ಯಕ್ಷ ಆದಂ ಕುಂಡೋಳಿ, ಕಲ್ಲಾಜೆ ಜುಮ್ಮಾ ಮಸೀದಿ ಅಧ್ಯಕ್ಷ ಹಕೀಂ ಮದನಿ, ಕೇಪು ರಜ್ವೀಯಾ ಮಸೀದಿ ಖತೀಬರಾದ ರಿಜ್ವಾನ್‌ರಜ್ವಿ, ಕಡಬ ರೀಜನಲ್ ಎಸ್‌ಎಮ್‌ಎ ಮಾಜಿ ಅಧ್ಯಕ್ಷ ಮೋಯಿದ್ದೀನ್ ಕುಂಞ, ಎಸ್‌ಎಮ್‌ಎ ಉಪಾಧ್ಯಕ್ಷ ಆಸಿಫ್ ಸಖಾಫಿ ಮರ್ದಾಳ, ಮುಸ್ತಪಾ ಸಅದಿ ಕೋಡಿಂಬಾಳ , ಇರ್ಶಾದ್ ಸಅದಿ ಮರ್ದಾಳ, ಪಾರೂಕ್ ಕಲ್ಲಾಜೆ, ಆಫಿಕ್ ಕೇಪು, ಇಸ್ಪಾಖ್ ಕೋಡಿಂಕಿರಿ, ಶುಕೂರ್ ಸಾಹೇಬ್ ಅಡ್ಡಗದ್ದೆ, ಹಂಝ ಕಳಾರ, ಮಜೀದ್ ಕಲ್ಲಾಜೆ, ಬಾಬುಲ್ಲಾ ಸಾಹೇಬ್ ಕೇಪು, ಬಾಷಾ ಅಡ್ಡಗದ್ದೆ, ಅಬ್ದುಲ್‌ಸುಬಾನ್ ಕೇಪು, ಮುಹಮ್ಮದ್ ಶಫೀಕ್, ಸೇರಿದಂತೆ ಕಡಬ ರೀಜನಲ್ ಸದಸ್ಯರು, ರೀಜನಲ್‌ಗೊಳಪಟ್ಟ ಜಮಾಅತ್‌ಗಳ ಹಾಗೂ ಮದರಸಗಳ ಆಡಳಿತ ಮಂಡಳಿಯವರು , ಸದಸ್ಯರು, ಉಪಸ್ಥಿತರಿದ್ದರು. ಎಸ್‌ಎಮ್‌ಎ ಕಡಬ ರೀಜನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸೀರ್ ಸಅದಿ ಸ್ವಾಗತಿಸಿ , ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.