HomePage_Banner
HomePage_Banner

ಕೊಳ್ತಿಗೆ: ನಾಪತ್ತೆಯಾಗಿದ್ದ ವಧು ಪ್ರಿಯಕರನೊಂದಿಗೆ ವಿವಾಹವಾಗಿ ಪತ್ತೆ!! ಚಾಮರಾಜನಗರದ ಯಳಂದೂರು ಠಾಣೆಗೆ ದಂಪತಿ ಹಾಜರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಧುರಂಗಿ ಶಾಸ್ತ್ರದ ಬಳಿಕ ನಾಪತ್ತೆಯಾಗಿದ್ದ ಕೊಳ್ತಿಗೆಯ ಯುವತಿ ತನ್ನ ಪ್ರಿಯಕರನೊಂದಿಗೆ ವಿವಾಹವಾಗಿ ಮೈಸೂರಿನ ಚಾಮರಾಜನಗರದ ಯಳಂದೂರು ಪೊಲೀಸ್ ಠಾಣೆಗೆ ಹಾಜರಾಗಿರುವುದಾಗಿ ತಿಳಿದುಬಂದಿದೆ.

ಕೊಳ್ತಿಗೆ ಗ್ರಾಮದ ಪುಲ್ಲಾಜೆ ಲಕ್ಷ್ಮಣ ನಾಯ್ಕರ ಪುತ್ರಿ ನವ್ಯ (24ವ)ರವರು ಫೆ.26ರ ನಸುಕಿನ ಜಾವ ನಾಪತ್ತೆಯಾಗಿದ್ದರು. ಆಕೆ ತನ್ನ ಪ್ರಿಯಕರ ಸಂಬಂಧಿಕರೂ ಆದ ಕಲ್ಮಡ್ಕದ ನವೀನ್ ಎಂಬವರೊಂದಿಗೆ ನಸುಕಿನ ಜಾವ ಬೈಕ್‌ನಲ್ಲಿ ಮೈಸೂರಿಗೆ ತೆರಳಿದ್ದರು. ಅಲ್ಲಿ ಅವರು ವಿವಾಹವಾಗಿ ಚಾಮರಾಜನಗರದ ಯಳಂದೂರು ಠಾಣೆಗೆ ಹಾಜರಾಗಿದ್ದಾರೆ. ನವ್ಯರವರಿಗೆ ವೆಲ್ಗಾರಿಕಂಡ್ ರಾಜಪುರಂ ಗ್ರಾಮದ ಯುವಕನ ಜೊತೆ ಫೆ.೨೬ರಂದು ಪರ್ಪುಂಜದ ಹಾಲ್‌ನಲ್ಲಿ ಮದುವೆ ನಡೆಯಲಿತ್ತು. ಮದುವೆಗೆ ಬಂದವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲೆಂದು ಅಡುಗೆಯವರು ಬಂದಿದ್ದು, ಇತ್ತ ಹಾಲ್‌ನಲ್ಲಿ ಅಲಂಕಾರ ಕಾರ್‍ಯವೂ ನಡೆದಿತ್ತು. ಆದರೆ ಮದುವೆ ದಿನ ಬೆಳಿಗ್ಗೆ ೪ ಗಂಟೆ ಸುಮಾರಿಗೆ ನವ್ಯರವರು ಮನೆಯಲ್ಲಿ ಇಲ್ಲದಿರುವುದನ್ನು ತಿಳಿದ ಮನೆಯವರು ಮದುವೆ ಹಾಲ್‌ಗೆ ಕರೆ ಮಾಡಿ ಮದುವೆ ಮುಂದೂಡಲಾಗಿದೆ. ಅಡುಗೆ ಮಾಡಬೇಡಿ ಎಂದು ತಿಳಿಸಿದ್ದರು. `ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ಮಗಳು ನವ್ಯ ಮಧ್ಯರಾತ್ರಿ 2 ರಿಂದ 4 ಗಂಟೆ ಅವಧಿಯಲ್ಲಿ ಮನೆಯಿಂದ ಯಾರಿಗೂ ಹೇಳದೇ ನಾಪತ್ತೆಯಾಗಿದ್ದಾಳೆ’ ಎಂದು ಆಕೆಯ ತಂದೆ ಲಕ್ಷ್ಮಣ ನಾಯ್ಕ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ನವ್ಯ ತನ್ನ ಪ್ರಿಯಕರನೊಂದಿಗೆ ನಾಪತ್ತೆಯಾಗಿರುವ ವಿಚಾರ ತಿಳಿದು ಪತ್ತೆ ಕಾರ್ಯ ನಡೆಸಿದರು. ಮೈಸೂರಿನಲ್ಲಿ ಅವರಿಬ್ಬರನ್ನು ಪತ್ತೆ ಮಾಡಿದರು. ಆ ವೇಳೆಗಾಗಲೇ ನವ್ಯ ಅವರು ದೂರದ ಸಂಬಂಧಿಕ ಕಲ್ಮಡ್ಕ ನಿವಾಸಿ ನವೀನ್ ಅವರನ್ನು ವಿವಾಹ ಆಗಿದ್ದರು. ಬಳಿಕ ಅವರು ಚಾಮರಾಜನಗರದ ಯಳಂದೂರು ಠಾಣೆಗೆ ಹಾಜರಾಗಿ ಅವರ ಹೇಳಿಕೆಯನ್ನು ಪೊಲೀಸರು ಪಡೆದು ಕೊಂಡಿದ್ದಾರೆ. ನವೀನ್ ಕುಶಾಲನಗರದಲ್ಲಿ ಉದ್ಯೋಗದಲ್ಲಿದ್ದು, ಚಾಮರಾಜನಗರದಲ್ಲಿ ವಾಸ್ತವ್ಯವಾಗಿದ್ದರೆಂದು ತಿಳಿದು ಬಂದಿದೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.