ಬಸ್‌ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ ಆರೋಪ.. ಠಾಣೆಗೆ ತರುವಷ್ಟರಲ್ಲಿ ಆರೋಪಿ ಪರಾರಿ!!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಸ್ಸೊಂದರಲ್ಲಿ ಯುವತಿಗೆ ಚಾಕಲೇಟ್ ನೀಡಿ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ನಿರ್ವಾಹಕ ಹಾಗೂ ಪ್ರಯಾಣಿಕರ ಸಹಕಾರದೊಂದಿಗೆ ಸಂಪ್ಯ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಂತೆ ಆರೋಪಿ ಪರಾರಿಯಾದ ಘಟನೆ ಮಾ.2ರಂದು ನಡೆದ ಬಗ್ಗೆ ವರದಿಯಾಗಿದೆ.
ಸುಳ್ಯದಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹಿಂದಿನ ಸೀಟ್‌ನಲ್ಲಿ ಕುಳಿತು ಯುವಕನೋರ್ವ ಯುವತಿಗೆ ಚಾಕಲೇಟ್ ನೀಡುತ್ತಾ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ನಿರ್ವಾಹಕ, ಚಾಲಕನ ಗಮನಕ್ಕೆ ತಂದಿದ್ದರು. ಚಾಲಕ ನಿರ್ವಾಹಕರ ಸೂಚನೆಯಂತೆ ಸಂಪ್ಯ ಪೊಲೀಸ್ ಠಾಣೆಯ ಎದುರು ಬಸ್ ನಿಲ್ಲಿಸಿ. ಯುವಕನನ್ನು ಪ್ರಯಾಣಿಕರ ಸಹಕಾರದೊಂದಿಗೆ ಠಾಣೆಗೆ ಕರೆದೊಯ್ಯುವಷ್ಟರಲ್ಲಿ ಯುವಕ ಪರಾರಿಯಾಗಿದ್ದಾರೆ. ಇದೇ ವೇಳೆ ಠಾಣೆಯಿಂದ ಪೊಲೀಸರು ಪ್ರಯಾಣಿಕರು ಜಮಾಯಿಸಿದ ಸ್ಥಳಕ್ಕೆ ಬಂದು ಮಾಹಿತಿ ಪಡೆದು ಕೊಂಡಿದ್ದಾರೆ. ಪರಾರಿಯಾದ ಯುವಕ ರಾಜೇಶ್ ಎಂದು ತಿಳಿದು ಬಂದಿದೆ.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.