ಮಾ.8: ಕೆಮ್ಮಾಯಿ ಭರತಪುರದಲ್ಲಿ ಸಾಮೂಹಿಕ ಹನುಮಯಜ್ಞ, ಕಲ್ಪೋಕ್ತಪೂಜೆ, ಹನುಮಾನ್ ಚಾಲಿಸಾ ಪಾರಾಯಣ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಹನುಮ ಜಯಂತಿ ಪ್ರಯುಕ್ತ ಕೆಮ್ಮಾಯಿ ಭರತಪುರದಲ್ಲಿ ಸಾಮೂಹಿಕ ಹನುಮಯಜ್ಞ , ಹನುಮಾನ್ ಕಲ್ಪೋಕ್ತ ಪೂಜೆ ಮತ್ತು ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣ ಮಾ.8ರಂದು ನಡೆಯಲಿದೆ ಎಂದು ಧ್ಯಾನಸ್ಥ ಶ್ರೀ ಹನುಮಾನ್ ಸಾಂತ್ವನ ಮಂದಿರ ಯೋಜನೆ ಭರತಪುರ ಸಮಿತಿ ಅಧ್ಯಕ್ಷ ಚೇತನ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹನುಮಾನ್ ಫೌಂಡೇಷನ್ ತಂಡದ ಮುಂದಾಳತ್ವದಲ್ಲಿ ಊರ ಪರವೂರ ಸಹಕಾರದೊಂದಿಗೆ ಲೋಕ‌ ಕಲ್ಯಾಣಾರ್ಥ, ಸಕಲ ಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯರ ಪೌರೋಹಿತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನದ ಬಳಿಕ ವಿವಿಧ ಸ್ಪರ್ಧೆಗಳು ಜರುಗಲಿದ್ದು, ಸಂಜೆ ಹನುಮೋತ್ಸವ ನೃತ್ಯಗಾನ ವೈಭವ ಜರುಗಲಿದೆ ಎಂದು ಅವರು ಹೇಳಿದರು. ಸಮಿತಿ ಗೌರವಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಶೀಲಾವತಿ, ಸಂಚಾಲಕ ದಿಲೀಪ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಮೋಹನ್ ಸಿಂಹವನ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.