ಪುತ್ತೂರು ನಗರಸಭೆ ರೂ. 67.55 ಲಕ್ಷ ಮಿಗತೆ ಬಜೆಟ್: ಆಡಳಿತಾಧಿಕಾರಿ ಡಿ.ಸಿ ಅವರ ಅನುಮೋದನೆಯಂತೆ ಪೌರಾಯುಕ್ತೆ ರೂಪಾ ಶೆಟ್ಟಿ ಮಂಡನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: 2020-21ನೇ ಸಾಲಿಗೆ ಸಂಬಂಧಿಸಿದಂತೆ ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಹಲವು ನೂತನ ಯೋಜನೆಗಳನ್ನೊಳಗೊಂಡ ರೂ. 67,55,571 ಲಕ್ಷ ಮಿಗತೆ ಬಜೆಟ್ ಮಂಡನೆಯಾಗಿದೆ. ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರ ಅನುಮೋದನೆ ಪಡೆದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಮಾ.4ರಂದು ನಗರಸಭೆ ಕಚೇರಿಯಲ್ಲಿ ಬಜೆಟ್ ಮಂಡನೆ ಮಾಡಿದರು.

೨೦೧೭-೧೮ನೇ ಸಾಲಿಗೆ ನಗರಸಭೆಯ ಪ್ರಮುಖ ಸ್ವಂತ ಆದಾಯದಲ್ಲಿ ರೂ.೧೨,೪೬,೦೫,೦೦೦ ಆಸ್ತಿ ತೆರಿಗೆ ಹಾಗೂ ನೀರಿನ ಶುಲ್ಕ, ಪರವಾನಿಗೆ ಶುಲ್ಕ, ಅಂಗಡಿ ಬಾಡಿಗೆ ಮತ್ತು ಮಾರುಕಟ್ಟೆ ಇತ್ಯಾದಿಗಳಿಂದ ಬರುವ ಆದಾಯಗಳನ್ನು ಒಳಗೊಂಡಂತೆ ಒಟ್ಟು ರೂ. ೧೧,೦೯,೦೦,೦೦೦, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೂ. ೧೭,೩೫,೬೦,೦೦೦ ಕೋಟಿ ನಿರೀಕ್ಷೆಯ ಅನುದಾನ ಮತ್ತು ರೂ. ೪,೭೮,೮೦,೪೮೨ ಕೋಟಿಯ ಇತರೇ ಹೊಂದಾಣಿಕೆ ಮೊತ್ತ ಸೇರಿಸಿಕೊಂಡು ೨೦೧೯-೨೦ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಹಾಗೂ ಅಗತ್ಯತೆಗಳಿಗೆ ಹಂಚಿಕೆ ಮಾಡಲಾದ ರೂ. ೪೬,೧೧,೨೪,೯೧೧ ಕೋಟಿಯಲ್ಲಿ ರೂ. ೬೭,೫೫,೫೭೧ ಲಕ್ಷ ಮಿಗತೆ ಬಜೆಟ್ ಮಂಡನೆಯಾಗಿದೆ. ಈ ಸಂದರ್ಭದಲ್ಲಿ ನಗರಸಭೆ ಲೆಕ್ಕ ಅಧೀಕ್ಷಕ ಸಿ.ಆರ್ ದೇವಾಡಿಗ, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ , ಕಂದಾಯ ಅಧಿಕಾರಿ ರಾಮಯ್ಯ ಗೌಡ ಸೇರಿದಂತೆ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.