Breaking News

ಶ್ರೀ ರಾಮ ಶಾಲೆಗೆ ಮಹಾಂತೇಶ್ ಶಿವದಾಸನ್ನವರ್ ಭೇಟಿ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ಸ್ವತಹ ಅಂಧತ್ವಕ್ಕೆ ಒಳಗಾಗಿದ್ದರೂ ಅಂಧರ ಒಳಿತಿಗಾಗಿ ಶ್ರಮಿಸುತ್ತಿರುವ, ವಿಶ್ವ ಅಂಧರ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾಗಿರುವ ಸಮರ್ಥನ್ ಸಂಸ್ಥೆಯ ಸ್ಥಾಪಕ ಮಹಾಂತೇಶ್ ಶಿವದಾಸನ್ನವರ್ ಉಪ್ಪಿನಂಗಡಿಯ ನಟ್ಟಿಬೈಲ್‌ನಲ್ಲಿರುವ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಚಾರ ವಿಮರ್ಶೆ ನಡೆಸಿದರು.

ಮಹಾಂತೇಶ್ ರವರನ್ನು ಸ್ವಾಗತಿಸಿದ ಶಾಲಾ ಸಂಚಾಲಕ ಯು ಜಿ ರಾಧ, ಮಾತೃ ಭಾಷಾ ಶಿಕ್ಷಣದ ಪ್ರಯೋಜನ, ಇದರ ಪರಿಣಾಮ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ, ಕನಿಷ್ಠ ಶುಲ್ಕ ಗರಿಷ್ಠ ಸಂಸ್ಕಾರ ಭರಿತ ಶಿಕ್ಷಣಕ್ಕೆ ಜನ ಸಮುದಾಯ ನೀಡುತ್ತಿರುವ ಮಾನ್ಯತೆ, ವಿದ್ಯಾರ್ಥಿಗಳಲ್ಲಿ ಮೂಡಿಸುವ ಜೀವನ ಮೌಲ್ಯಗಳು, ಕಲಿಕಾ ಸಾಮರ್ಥ್ಯದ ಹೆಚ್ಚಳ ಮೊದಲಾದ ವಿಚಾರಗಳನ್ನು ವಿವರಿಸಿದರಲ್ಲದೆ, ಶ್ರೀ ರಾಮ ವಿದ್ಯಾಲಯ ಸಂಸ್ಕಾರ ಭರಿತ ಶಿಕ್ಷಣ ನೀಡುವ ವಿದ್ಯಾಕೇಂದ್ರವೆನಿಸಿದೆ. ಇದು ಒಟ್ಟು ಸಮಾಜದ ಆಸ್ತಿ ಎಂದರು.

ಈ ಸಂದರ್ಭದಲ್ಲಿ ಸತೀಶ್, ಬೆಂಗಳೂರಿನ ಉದ್ಯಮಿ ರಾಜೇಶ್, ಶಾಲಾ ಆಡಳಿತ ಮಂಡಳಿಯ ಸುಧೀರ್, ಅನುರಾಧ ಆರ್ ಶೆಟ್ಟಿ, ಪೋಷಕರಾದ ಕಂಪ ಶಿವರಾಮ ಭಟ್, ರವಿಕಿರಣ್ ಕೊಯಿಲ, ಶಾಲಾ ಶಿಕ್ಷಕಿ ಶಿಲ್ಪಾ ಮಾತಾಜಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.