Breaking News

‘ಬೇಟಿ ಬಚಾವೋ ಬೇಟಿ ಪಡಾವೋ’ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
  • ಹೆಣ್ಣು ಮಕ್ಕಳ ಸಬಲೀಕರಣವೇ ಎಲ್ಲರ ಗುರಿಯಾಗಿರಲಿ –ಪಿ.ಪಿ ವರ್ಗೀಸ್

ಕಡಬ: ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸರಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಯೋಜನೆಯ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ, ರಕ್ಷಣೆ, ನೀಡುವ ಮೂಲಕ ಹೆಣ್ಣು ಮಕ್ಕಳ ಸಬಲೀಕರಣ ನಮ್ಮೆಲ್ಲರ ಗುರಿಯಾಗಿದೆ ಎಂದು ಕಡಬ ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ ಹೇಳಿದರು.

ಅವರು ಮಾ. 3ರಂದು ರಾಷ್ಟ್ರೀಯ ಹೆಣ್ಣು ಮಕ್ಕಳಾ ದಿನಾಚರಣೆ ಅಂಗವಾಗಿ ದ.ಕ.ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ, ತಾ.ಪಂ, ಶಿಶು ಅಭಿವೃದ್ಧಿ ಯೋಜನೆ, ಮೂಲಕ ಕಡಬ ತಾಲೂಕಿನ ವಿವಿಧ ವಲಯ ಮಟ್ಟದ ಅಂಗನವಾಡಿ ಕೇಂದ್ರಗಳ, ಸ್ತ್ರೀ ಶಕ್ತಿ ಸಂಘಟನೆಗಳ , ಕೂಡುವಿಕೆಯಿಂದ “ಬೇಟಿ ಬಚಾವೋ ಬೇಟಿ ಪಡಾವೋ” ಯೋಜನೆಯಡಿ ಆಯೋಜಿಸಲಾಗಿದ್ದ “ಜನಜಾಗೃತಿ ಜಾಥಾ”ವನ್ನು ಕಡಬ ಗ್ರಾ.ಪಂ ವಠಾರದಲ್ಲಿ ಉದ್ಘಾಟಿಸಿ ಮಾತನಾಡಿ ದ.ಕ ಜಿಲ್ಲಾ ಪಂಚಾಯತ್‌ನ ೩೬ ಸದಸ್ಯರ ಪೈಕಿ ೧೮ ಮಂದಿ ಮಹಿಳಾ ಸದಸ್ಯರಿದ್ದು ಈ ಕಡಬ ಗ್ರಾ.ಪಂನಲ್ಲಿ ೨೪ ಸದಸ್ಯರ ಪೈಕಿ ೧೨ಮಂದಿ ಮಹಿಳಾ ಸದಸ್ಯರನ್ನು ಹೊಂದಿದ್ದು ಎಲ್ಲಾ ಆಡಳಿತ ಮಂಡಳಿಯಲ್ಲಿ ಕೂಡಾ ಮಹಿಳೆಯರಿಗೆ ಸಮಪಾಲು ನೀಡಿ ಮಹಿಳಾ ಸಬಳೀಕರಣಕ್ಕೆ ಪ್ರಾದ್ಯನತೆ ನೀಡಲಾಗುತ್ತಿದೆ ಎಂದು ಉದಾಹರಣೆಯೊಂದಿಗೆ ವಿವರಿಸಿದ ಅವರು ಸರಕಾರವು ಎಲ್ಲಾ ರಂಗಗಳಲ್ಲೂ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡುತ್ತಿದೆ ಸಮಾಜವು ಹೆಣ್ಣು ಮಕ್ಕಳ ಕುರಿತು ಗೌರವ ತೋರುವುದಲ್ಲದೆ ತಾರತಮ್ಯ ಮಾಡದೇ ಉನ್ನತ ಶಿಕ್ಷಣ , ರಕ್ಷಣೆ, ನೀಡುವ ಮೂಲಕ ಎಲ್ಲಾ ಅವಕಾಶಗಳನ್ನು ನೀಡುವಂತಾಗಬೇಕು ಮಹಿಳೆಯರು ಎಲ್ಲಾ ರಂಗಗಳಲ್ಲೂ ಉನ್ನತ ಸಾಧನೆಯನ್ನು ಮಾಡುವ ಮೂಲಕ ಸಮಾಜಮುಖಿಯಾಗಿ ಪ್ರಗತಿ ಸಾಧಿಸುತ್ತಿರುವುದು ಹೆಮ್ಮೆಯಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಹಿರಿಯ ಮೇಲ್ವಿಚಾರಕಿ ಭಾರತಿ ಅವರು “ಮಕ್ಕಳನ್ನು ಉಳಿಸಿ, ಮಕ್ಕಳನ್ನು ಓದಿಸಿ” ಯೋಜನೆಯ ಮಹತ್ವವನ್ನು ವಿವರಿಸಿ ಹೆಣ್ಣು ಮಕ್ಕಳ ಬಗ್ಗೆ ತಾರತಮ್ಯ ಮಾಡದೆ ಎಲ್ಲಾ ರಂಗಗಳಲ್ಲೂ ಹೆಣ್ಣು ಮಕ್ಕಳ ಬೆಳವಣಿಗೆಗೆ ಎಲ್ಲರ ಸಹಕಾರ ಅತೀ ಅಗತ್ಯ ಎಂದರು.

ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ, ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಕಡಬ ತಾಲೂಕು ಉಪತಹಶೀಲ್ದಾರ್ ನವ್ಯ, ಸಿಆರ್‌ಪಿ ಕುಮಾರ್ ಕೆ.ಜೆ , ಕಡಬ ಗ್ರಾ,ಪಂ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಕಾರ್ಯದರ್ಶಿ ಸಂತೋಷ್ ಕುಮಾರ್, ಕಡಬ ಮಾದರಿ ಶಾಲಾ ಶಿಕ್ಷಕ ವಿಜಯ್ ಕುಮಾರ್, ಗ್ರಾ.ಪಂ ಉಪಾದ್ಯಕ್ಷೆ ಜ್ಯೋತಿ ಡಿ ಕೋಲ್ಪೆ , ಸದಸ್ಯರಾದ ಹನೀಫ್ ಕೆ.ಎಂ, ನೀಲಾವತಿಶಿವರಾಂ, ಎ.ಎಸ್ ಶೇರಿಫ್, ಶಾಲಿನಿಸತೀಶ್ ನಾಕ್, ಜಯಂತಿಗಣಪಯ್ಯ, ಹರ್ಷ ಕೋಡಿ, ಅಶ್ರಫ್ ಶೇಡಿಗುಂಡಿ,ಮಾದವ ಕೊಪ್ಪ ,ಜಯಲಕ್ಷ್ಮೀ, ರೇವತಿ, ಸಂಧ್ಯಾಮೋಹನ್, ಸರೋಜಿನಿ ಎಸ್ ಆಚಾರ್ಯ, ಸುಶೀಲಾ, ಯಶೋದ , ಕಡಬ ,ಆಲಂಕಾರು, ಶೀರಾಡಿ, ವಲಯ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಮಹಿಳೆಯರು ಕಿ. ಆರೋಗ್ಯ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು, ಜಾಥಾದಲ್ಲಿ ಪಾಲ್ಗೊಂಡು ಶೀರಾಡಿ ವಲಯ ಮೇಲ್ವಿಚಾರಕಿ ವನಿತಾ, ಸ್ವಾಗತಿಸಿ, ಕಡಬ ವಲಯ ಮೇಲ್ವಿಚಾರಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಡಬ ಮಾದರಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.

ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಜನಜಾಗೃತಿ ಜಾಥಾವೂ ಕಡಬ ಗ್ರಾ.ಪಂನಿಂದ ನಾಮಫಲಕ, ಘೋಷಣೆಯೊಂದಿಗೆ, ಕಡಬ ಪೇಟೆಯಾದ್ಯಂತ ನಡೆದು ಕಡಬ ಅಂಬೇಡ್ಕರ್ ಭವನದ ತನಕ ಸಾಗಿತು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ದ.ಕ.ಜಿ.ಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ, ತಾ.ಪಂ, ಶಿಶು ಅಭಿವೃದ್ಧಿ ಯೋಜನೆ ಮೂಲಕ ಕಡಬ ತಾಲೂಕಿನ ವಿವಿಧ ವಲಯ ಮಟ್ಟದ ಅಂಗನವಾಡಿ ಕೇಂದ್ರಗಳ ಕೂಡುವಿಕೆಯಿಂದ ಕಡಬ ಗ್ರಾ.ಪಂ ನಲ್ಲಿ ಪುತ್ತೂರು ಕಲಾ ತಂಡದಿಂದ ಬೀದಿ ನಾಟಕ ಪ್ರದರ್ಶಿಸುವ ಮೂಲಕ ” ಬೇಟಿ ಬಚಾವೋ ಬೇಟಿ ಪಡಾವೋ” ಹೆಣ್ಣು ಮಕ್ಕಳನ್ನು ಉಳಿಸುವ ಮೂಲಕ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ , ಬಾಲ್ಯ ವಿವಾಹ ತಡೆಕಾಯ್ದೆ , ಹೆಣ್ಣು ಮಕ್ಕಳ ಮೇಲಿನ ತಾರತಮ್ಯ , ಸಮಾಜದಲ್ಲಿ ಮಹಿಳಾ ಸಬಳೀಕರಣದೊಂದಿಗೆ ಹೆಣ್ಣು ಮಕ್ಕಳ ರಕ್ಷಣೆ ಎಲ್ಲರ ಜವಬ್ದಾರಿಯಾಗಿದೆ ಎಂಬ ಅರಿವು ಮೂಡಿಸಿದರು.
ಸಂಸ್ಕಾರ ಕಲಾತಂಡದ ನಿರ್ದೇಶಕ ಪತ್ರಕರ್ತ ಸಂಶುದ್ದೀನ್ ಸಂಪ್ಯ ಮತ್ತು ರಂಗಕರ್ಮಿ ಕೃಷ್ಣಪ್ಪ ಬಂಬಿಲ ನೇತೃತ್ವದಲ್ಲಿ ತಂಡದ ಲೋಕೆಶ್ ಬನ್ನೂರು, ಪ್ರತಿಮಾ ಯು.ರೈ, ಪ್ರತಾಪ್ ಚೆಂತಿಮಾರ್, ಸಿದ್ದಾರ್ಥ್ ಮುಲ್ಕಿ, ರೆಷ್ಮಾ ನೇರಳಕಟ್ಟೆ ಬಳಗದವರಿಂದ ಬೀದಿ ನಾಟಕದ ಮೂಲಕ ಎಲ್ಲರ ಗಮನ ಸೆಳೆಯಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.